ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್‌

PKL 8: Bengaluru Bulls beats Gujarat Giants in Eliminator 2 and enters semifinals

ಕಳೆದ ವರ್ಷದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾಗಿದ್ದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಇದೀಗ ಪ್ಲೇ ಆಫ್ ಹಂತಕ್ಕೆ ಬಂದು ತಲುಪಿದೆ. ಹೌದು, ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷ ನಡೆಯದೇ ಇದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು 12 ತಂಡಗಳ ಪೈಕಿ 4 ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ.

ಲೀಗ್ ಹಂತದ ಪಂದ್ಯಗಳಲ್ಲಿ ಹೆಚ್ಚು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ಪಾಟ್ನಾ ಪೈರೇಟ್ಸ್ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದ ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶವನ್ನು ಮಾಡಿದ್ದವು. ಹಾಗೂ ಅಂಕಪಟ್ಟಿಯಲ್ಲಿ ಕ್ರಮವಾಗಿ 3, 4, 5 ಮತ್ತು 6ನೇ ಸ್ಥಾನಗಳನ್ನು ಪಡೆದುಕೊಂಡಿದ್ದ ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಇಂದು ( ಫೆಬ್ರವರಿ 21 ) ನಡೆದ ಎಲಿಮಿನೇಟರ್ ಸುತ್ತಿನ ಪಂದ್ಯಗಳಲ್ಲಿ ಸೆಣಸಾಟವನ್ನು ನಡೆಸಿದವು.

ಸಿಎಸ್‌ಕೆಯ ಈ ಆಟಗಾರನನ್ನು ಖರೀದಿಸಲೇಬೇಕೆಂದು ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ!ಸಿಎಸ್‌ಕೆಯ ಈ ಆಟಗಾರನನ್ನು ಖರೀದಿಸಲೇಬೇಕೆಂದು ದೊಡ್ಡ ಮೊತ್ತ ತೆಗೆದಿಟ್ಟಿತ್ತು ಆರ್‌ಸಿಬಿ ಫ್ರಾಂಚೈಸಿ!

ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದಿದ್ದ ಯುಪಿ ಯೋಧಾ ಮತ್ತು ಆರನೇ ಸ್ಥಾನ ಪಡೆದಿದ್ದ ಪುಣೇರಿ ಪಲ್ಟನ್ ತಂಡಗಳ ನಡುವೆ ಎಲಿಮಿನೇಟರ್ ಸುತ್ತಿನ ಪ್ರಥಮ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. 42-31 ಅಂಕಗಳ ಅಂತರದಲ್ಲಿ ಪುಣೇರಿ ಪಲ್ಟನ್ ತಂಡಕ್ಕೆ ಸೋಲುಣಿಸಿದ ಯುಪಿ ಯೋಧಾ ಸೆಮಿಫೈನಲ್ 1 ಪಂದ್ಯದಲ್ಲಿ ಈ ಬಾರಿಯ ಅಂಕಪಟ್ಟಿಯ ಅಗ್ರಸ್ಥಾನಿಯಾದ ಪಾಟ್ನಾ ಪೈರೇಟ್ಸ್ ವಿರುದ್ಧ ಫೆಬ್ರವರಿ 23ರಂದು ಸೆಣಸಾಟ ನಡೆಸಲಿದೆ.

ಇನ್ನು ಇಂದು (ಫೆಬ್ರವರಿ 21 )ನಡೆದ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಟವನ್ನು ನಡೆಸಿದವು. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಬೆಂಗಳೂರು ಬುಲ್ಸ್ ಐದನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ಜೈಂಟ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಸೋಲುಣಿಸುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಗುಜರಾತ್ ಜೈಂಟ್ಸ್ ವಿರುದ್ಧ 49 - 29 ಅಂಕಗಳ ಅಂತರದಿಂದ ಗೆದ್ದು ಬೀಗಿರುವ ಬೆಂಗಳೂರು ಬುಲ್ಸ್ ಸೆಮಿಫೈನಲ್ 2 ಪ್ರವೇಶಿಸಿದ್ದು ಫೆಬ್ರವರಿ 23ರಂದು ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆ

ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ನಾಯಕ ಪವನ್ ಶೇರಾವತ್ 13 ಅಂಕಗಳನ್ನು ಪಡೆದು ಮಿಂಚಿದರೆ ಚಂದ್ರನ್ ರಂಜಿತ್ 7, ರೈಡರ್ ಭರತ್ 6, ಡಿಫೆಂಡರ್ ಮಹೇಂದರ್ ಸಿಂಗ್ 5, ಡಿಫೆಂಡರ್ ಸೌರಭ್ 4, ಅಮನ್ 4 ಮತ್ತು ಮಯೂರ್ ಕದಮ್ 1 ಅಂಕ ಗಳಿಸಿದರು. ಗುಜರಾತ್ ಜೈಂಟ್ಸ್ ತಂಡವನ್ನು ಈ ಪಂದ್ಯದಲ್ಲಿ ಒಟ್ಟು 3 ಬಾರಿ ಆಲ್ ಔಟ್ ಮಾಡಿದ ಬೆಂಗಳೂರು ಬುಲ್ಸ್ ಆರಂಭದಿಂದಲೂ ಸಹ ಹಿಡಿತದಲ್ಲಿಟ್ಟುಕೊಂಡೇ ಸವಾರಿಯನ್ನು ಮಾಡಿತು. ಪಂದ್ಯದ ಮಧ್ಯಂತರದ ವೇಳೆಗೆ 24 - 17 ಅಂಕಗಳ ಮುನ್ನಡೆಯನ್ನು ಸಾಧಿಸಿದ್ದ ಬೆಂಗಳೂರು ಬುಲ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಮೊದಲಾರ್ಧದಲ್ಲಿ ಒಂದು ಬಾರಿ ಹಾಗೂ ದ್ವಿತೀಯಾರ್ಧದಲ್ಲಿ 2 ಬಾರಿ ಆಲ್ ಔಟ್ ಮಾಡಿತು. ನಾಯಕ ಪವನ್ ಶೆರಾವತ್ ಸೂಪರ್ 10 ಪಡೆಯುವ ಮೂಲಕ ಈ ಆವೃತ್ತಿಯಲ್ಲಿ 13ನೇ ಬಾರಿಗೆ ಸೂಪರ್ 10 ಸಾಧನೆ ಮಾಡಿದರು.

Story first published: Tuesday, February 22, 2022, 10:03 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X