ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ: ಬೆಂಗಾಲ್ ವಾರಿಯರ್ಸ್‌ಗೆ ಯು ಮುಂಬಾ ಸವಾಲು: ಪ್ರಿವ್ಯೂ ಇತರ ಮಾಹಿತಿ

Pro Kabaddi 2022: Bengal Warriors vs U Mumba- preview and squad details

ಪ್ರೊ ಕಬಡ್ಡಿಯಲ್ಲಿ ಇಂದು ಬೆಂಗಾಲ್ ವಾರಿಯರ್ಸ್ ಹಾಗು ಯು ಮುಂಬಾ ತಡಗಳು ಮುಖಾಮುಖಿಯಾಗುತ್ತಿದೆ. ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು ಮಣಿಸಿದ ಆತ್ಮವಿಶ್ವಾಸದೊಂದಿಗೆ ವಾರಿಯರ್ಸ್ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು ಈ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು ಮೂರರಲ್ಲಿ ಸೋಲು ಅನುಭವಿಸುವ ಮೂಲಕ ಸ್ಥಿರ ಪ್ರದರ್ಶನ ನೀಡಲು ಹೆಣಗಾಡುತ್ತಿದೆ.

ಬೆಂಗಾಲ್ ವಾರಿಯರ್ಸ್ ತಂಡಕ್ಕೆ ನಾಯಕ ಮಣಿಂದರ್ ಸಿಂಗ್ ಅವರೇ ದೊಡ್ಡ ಬಲ ಎಂದು ಅಂಕಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. 58 ರೇಡ್ ಪಾಯಿಂಟ್‌ಗಳೊಂದಿಗೆ ಮುಂದೆ ನಿಂತು ತಂಡವನ್ನು ಉನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ. ಇಲ್ಲಿಯವರೆಗೆ 32 ರೇಡ್ ಪಾಯಿಂಟ್‌ಗಳನ್ನು ಗಳಿಸಿರುವ ಶ್ರೀಕಾಂತ್ ಜಾಧವ್ ನಾಯಕನಿಗೆ ಉತ್ತಮ ಬೆಂಬಲ ನೀಡಿದ್ದಾರೆ. ಡಿಫೆಂಡರ್‌ಗಳ ಪೈಕಿ ಗಿರೀಶ್ ಮಾರುತಿ ಎರ್ನಾಕ್ ಅವರು ಎದುರಾಳಿ ರೈಡರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದು ಮತ್ತು 29 ಟ್ಯಾಕಲ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಉಳಿದಂತೆ ವೈಭವ್ ಗರ್ಜೆ ಮತ್ತು ಶುಭಂ ಶಿಂಧೆ ಕ್ರಮವಾಗಿ 18 ಮತ್ತು 16 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಬೆಂಬಲ ನೀಡಿದ್ದಾರೆ.

PAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋPAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋ

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ವಾರಿಯರ್ಸ್‌ನಂತೆಯೇ ಯು ಮುಂಬಾ ಕೂಡ ಅಸ್ಥಿರ ಪ್ರದರ್ಶನ ನೀಡಿಕೊಂಡೇ ಬಂದಿದೆ. ಯು ಮುಂಬಾ ಕೂಡ ಈ ಋತುವಿನಲ್ಲಿ ನಾಲ್ಕು ಗೆಲುವುಗಳನ್ನು ದಾಖಲಿಸಿದ್ದು ಮೂರು ಸೋಲುಗಳನ್ನು ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಆ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ಆತ್ಮವಿಶ್ವಾಸದಲ್ಲಿದೆ ತಂಡ. ಸೀಸನ್ 2ರ ಚಾಂಪಿಯನ್ ಪಡೆ ಗುಮನ್ ಸಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದ್ದು 60 ರೇಡ್ ಪಾಯಿಂಟ್‌ಗಳನ್ನು ಗುಮನ್ ಸಿಂಗ್ ಗಳಿಸಿದ್ದಾರೆ. ನಾಯಕ ಸುರಿಂದರ್ ಸಿಂಗ್ 21 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಡಿಫೆಂಡಿಂಗ್ ವಿಭಾಗವನ್ನು ಮುನ್ನಡೆಸಿದ್ದು ರಿಂಕು (14 ಟ್ಯಾಕಲ್ ಪಾಯಿಂಟ್‌ಗಳು) ಮತ್ತು ಮೋಹಿತ್ (ಒಂಬತ್ತು ಟ್ಯಾಕಲ್ ಪಾಯಿಂಟ್‌ಗಳು) ಅವರಿಂದ ಹೆಚ್ಚಿನ ಬೆಂಬಲ ನಿರೀಕ್ಷಿಸುತ್ತಿದ್ದಾರೆ.

ಬೆಂಗಾಲ್ ವಾರಿಯರ್ಸ್
ರೈಡರ್ಸ್: ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್, ಆಕಾಶ್ ಪಿಕಾಲ್ಮುಂಡೆ, ಅಸ್ಲಾಂ ಸಜಾ ಮೊಹಮ್ಮದ್ ತಂಬಿ, ಆರ್ ಗುಹಾನ್, ಸುಯೋಗ್ ಬಾಬನ್ ಗಾಯ್ಕರ್, ಪರಶಾಂತ್ ಕುಮಾರ್.
ಡಿಫೆಂಡರ್ಸ್: ಗಿರೀಶ್ ಎರ್ನಾಕ್, ಅಮಿತ್ ಶೆರಾನ್, ಸುರೇಂದರ್ ನಾಡಾ, ಪರ್ವೀನ್ ಸತ್ಪಾಲ್, ಶುಭಂ ಶಿಂಧೆ, ಸೊಲೇಮಾನ್ ಪಹ್ಲೆವಾನಿ, ಶಕ್ತಿವೇಲ್ ಆರ್, ವೈಭವ್ ಭೌಸಾಹೇಬ್ ಗರ್ಜೆ.
ಆಲ್ ರೌಂಡರ್ಸ್: ದೀಪಕ್ ನಿವಾಸ್ ಹೂಡಾ, ಅಜಿಂಕ್ಯ ರೋಹಿದಾಸ್ ಕಪ್ರೆ, ಆಶಿಶ್ ಕುಮಾರ್ (ಸಾಂಗ್ವಾನ್), ರೋಹಿತ್, ಬಾಲಾಜಿ ಡಿ, ವಿನೋದ್ ಕುಮಾರ್, ಮನೋಜ್ ಗೌಡ ಕೆ.

ಯು ಮುಂಬಾ ಸ್ಕ್ವಾಡ್
ರೈಡರ್ಸ್: ಗುಮಾನ್ ಸಿಂಗ್, ಆಶಿಶ್, ಹೈದರಾಲಿ ಎಕ್ರಮಿ, ಅಂಕುಶ್, ಕಮಲೇಶ್, ಶಿವಂ, ಪ್ರಣಯ್ ರಾಣೆ, ಸಚಿನ್, ರೂಪೇಶ್, ಕಮಲೇಶ್, ಜೈ ಭಗವಾನ್,
ಡಿಫೆಂಡರ್‌ಗಳು: ರಿಂಕು, ಸುರೀಂದರ್ ಸಿಂಗ್, ಹರೇಂದ್ರ ಕುಮಾರ್, ಶಿವಾಂಶ್ ಠಾಕೂರ್, ಪ್ರಿನ್ಸ್, ಕಿರಣ್ ಮಗರ್, ರಾಹುಲ್, ಸತ್ಯವಾನ್, ಮೋಹಿತ್, ಸತ್ಯವಾನ್, ರಾಹುಲ್ ಸೇತ್‌ಪಾಲ್
ಆಲ್ ರೌಂಡರ್ಸ್: ಘೋಲಮಬ್ಬಾಸ್ ಕೊರೌಕಿ

Story first published: Saturday, October 29, 2022, 17:28 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X