ಟೋಕಿಯೋ ಪ್ಯಾರಾಲಂಪಿಕ್ಸ್‌ನ 54 ಅಥ್ಲೀಟ್‌ಗಳಿಗೆ ಆತ್ಮೀಯ ಬೀಳ್ಕೊಡುಗೆ

ನವದೆಹಲಿ: ಮುಂಬರಲಿರುವ ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತೀಯ 54 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಅವರಿಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಷ್ಟ್ರೀಯ ಆಡಳಿಯ ಮಂಡಳಿಯಿಂದ ಅತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ (ಆಗಸ್ಟ್ 12) ನಡೆಯಿತು. ಈ ಬಾರಿ ಭಾರತೀಯ ತಂಡ ಅತ್ಯುತ್ತಮ ಸಾಧನೆ ಮಾಡಲಿ ಎಂದು ಹಾರೈಸಿ ಕಳುಹಿಸಿಕೊಡಲಾಯ್ತು. ಇನ್ನೆರಡು ವಾರಗಳಲ್ಲಿ ಟೋಕಿಯೋ ಪ್ಯಾರಾಲಂಪಿಕ್ಸ್ ಆರಂಭಗೊಳ್ಳಲಿವೆ.

ದ್ವಿತೀಯ ಹಂತದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಪ್‌ಡೇಟ್ ಕೊಟ್ಟ ಡೇವಿಡ್ ವಾರ್ನರ್ದ್ವಿತೀಯ ಹಂತದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಪ್‌ಡೇಟ್ ಕೊಟ್ಟ ಡೇವಿಡ್ ವಾರ್ನರ್

ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ. ಅಥ್ಲೀಟ್ ದೇವೇಂದ್ರ ಝಝಾರಿಯಾ ಮೂರನೇ ಬಂಗಾರದ ಪದಕ ಗೆಲ್ಲುವ ನಿರೀಕ್ಷೆಯಿದೆ. 2004 ಮತ್ತು 2016ರಲ್ಲಿ ನಡೆದಿದ್ದ ಎಫ್‌-46 ಜಾವೆಲಿನ್‌ ಸ್ಪರ್ಧೆಯಲ್ಲಿ ದೇವೇಂದ್ರ ಭಾರತಕ್ಕೆ ಬಂಗಾರ ಗೆದ್ದಿದ್ದರು.

ಬಹಳ ಪದಕಗಳು ಭಾರತದ ಪಾಲಾಗುವ ನಿರೀಕ್ಷೆ
ಮರಿಯಪ್ಪನ್ ತಾಂಗವೇಲು (ಟಿ-63 ಹೈ ಜಂಪ್) ಮತ್ತು ವಿಶ್ವ ಚಾಂಪಿಯನ್‌ ಸಂದೀಪ್ ಚೌಧರಿ (ಎಫ್‌-64 ಜಾವೆಲಿನ್ ಥ್ರೋ) ಕೂಡ ಪದಕದ ನಿರೀಕ್ಷೆ ಮೂಡಿಸಿರುವ ಅಥ್ಲೀಟ್‌ಗಳು. ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತ ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ. ರಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಟಿ-63 ಹೈ ಜಂಪ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದ ಮರಿಯಪ್ಪನ್, ಈ ಬಾರಿಯ ಒಲಿಂಪಿಕ್ಸ್ ವೇಳೆ ರಾಷ್ಟ್ರದ ಬಾವುಟ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ಟೊಕಿಯೋ ಪ್ಯಾರಾಲಂಪಿಕ್ಸ್ ಆರಂಭೋತ್ಸವ ಆಗಸ್ಟ್ 24ರಂದು ನಡೆಯಲಿದ್ದು, ಸೆಪ್ಟೆಂಬರ್ 5ರಂದು ಕೊನೆಗೊಳ್ಳಲಿದೆ. ನಮ್ಮ ಪ್ಯಾರಾ ಕ್ರೀಡಾಪಟುಗಳ ಮಹತ್ವಾಕಾಂಕ್ಷೆ ಮತ್ತು ಆತ್ಮ ವಿಶ್ವಾಸ 1.3 ಬಿಲಿಯನ್ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಅವರ ಧೈರ್ಯದ ಮುಂದೆ, ದೊಡ್ಡ ಸವಾಲುಗಳು ತಲೆಬಾಗುತ್ತವೆ. ದೇಶೀಯ ಕ್ರೀಡಾ ಪ್ರೇಮಿಗಳ ಸ್ಫೂರ್ತಿ, ಧೈರ್ಯ ತುಂಬಿಸುವಿಕೆಗೆ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳೂ ಅರ್ಹರು," ಎಂದು ಅನುರಾಗ್ ಠಾಕೂರ್ ವೀಡಿಯೋದಲ್ಲಿ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

ಕಳೆದ ಪ್ಯಾರಾಲಂಪಿಕ್ಸ್‌ಗಿಂತ ಮೂರು ಪಟ್ಟು ದೊಡ್ಡ ತಂಡ
"ಮುಂಬರಲಿರುವ ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯರ ಸಂಖ್ಯೆ ಕಳೆದ ಪ್ಯಾರಾಲಂಪಿಕ್ಸ್‌ಗಿಂತ ಮೂರು ಪಟ್ಟು ದೊಡ್ಡದಿದೆ. ನನಗೆ ನಿಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಭರವಸೆಯಿದೆ. ಕಳೆದ ಒಲಿಂಪಿಕ್ಸ್‌ಗಿಂತ ಈ ಬಾರಿ ನಿಮ್ಮ ಪ್ರದರ್ಶನ ತುಂಬಾ ಉತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ," ಎಂದು ಠಾಕೂರ್ ಸ್ಫೂರ್ತಿ ತುಂಬಿದ್ದಾರೆ. ಪ್ಯಾರಾಲಂಪಿಕ್ಸ್‌ಗಳಲ್ಲಿ ಮೂರು ಜನಕ್ಕೆ ಖೇಲ್ ರತ್ನ, 7 ಮಂದಿಗೆ ಪದ್ಮಶ್ರೀ ಮತ್ತು ಸುಮಾರು 33 ಮಂದಿಗೆ ಅರ್ಜುನ ಲಭಿಸಿದೆ ಅನ್ನೋದು ನನಗೆ ತುಂಬಾ ಸಮಾಧಾನಕರ ಸಂಗತಿ ಎಂದು ಠಾಕೂರ್ ಹೇಳಿದ್ದಾರೆ. "ಪ್ಯಾರಾಲಂಪಿಕ್ಸ್‌ನಲ್ಲಿ ಪದಕ ಗೆಲ್ಲೋದು ಸುಲಭದ ಮಾತಲ್ಲ. ಆದರೆ ನನಗೆ ನಿಮ್ಮ ಪರಿಶ್ರಮದ ಬಗ್ಗೆ ನಂಬಿಕೆಯಿದೆ. ಕ್ರೀಡೆಯ ಬಗ್ಗೆ ನಿಮಗಿರುವ ಪ್ರೀತಿ, ಉತ್ಸಾಹ ಪದಕ ಗೆಲ್ಲುವ ಮೂಲಕ ಹೊರಹೊಮ್ಮಬೇಕು. ಟೋಕಿಯೋಗೆ ನೀವು ಹೋಗುವಾಗ, ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿ ಶ್ರೇಯಾಂಕ ಹೆಚ್ಚಿಸಿಕೊಳ್ಳಬೇಕು ಮತ್ತು ಪದಕಗಳ ಸಂಖ್ಯೆ ಹೆಚ್ಚಿಸಬೇಕು ಅನ್ನೋ ಒಂದೇ ಯೋಚನೆ ನಿಮ್ಮ ತಲೆಯಲ್ಲಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಠಾಕೂರ್ ಹೇಳಿದ್ದಾರೆ.

'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆಯ ಸಾಧನೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತೀಯ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಭಾರತಕ್ಕೆ ಒಟ್ಟಾರೆ 7 ಪದಕಗಳು ಸಿಕ್ಕಿದ್ದವು. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ, ಮಹಿಳಾ ಬಾಕ್ಸಿಂಗ್ 69 ಕೆಜಿ ಲವ್ಲಿನಾ ಬೊರ್ಗೊಹೈನ್ ಕಂಚು, ಪುರುಷರ ರಸ್ಲಿಂಗ್‌ನಲ್ಲಿ ರವಿಕುಮಾರ್ ದಹಿಯಾಗೆ ಬೆಳ್ಳಿ, ಪುರುಷರ ರಸ್ಲರ್ ಭಜರಂಗ್ ಪೂನಿಯಾಗೆ ಕಂಚು, ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾಗೆ ಬಂಗಾರದ ಪದಕ, ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ನಿರಾಸೆಯಾಗಿತ್ತು. ಪ್ಯಾರಾಲಂಪಿಕ್ಸ್‌ನಲ್ಲೂ ಭಾರತಕ್ಕೆ ಈ ಬಾರಿ ದಾಖಲೆಯ ಪದಕಗಳು ಸಿಗುವ ಸಾಧ್ಯತೆಯಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 19:56 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X