ಚಿನ್ನ ಗೆದ್ದ ಈ ಹುಡುಗನ ವಯಸ್ಸು ಕೇವಲ 15

Posted By:
Anish becomes indias youngest gold medalist in CWG

ಬೆಂಗಳೂರು, ಏಪ್ರಿಲ್ 13: ಕಾಮನ್‌ವೆಲ್ತ್ ಗೇಮ್ಸ್‌ನ ಒಂಬತ್ತನೆಯ ದಿನವಾದ ಇಂದು ಭಾರತದ ಪಾಲಿಗೆ ಶುಭ ಶುಕ್ರವಾರವಾಗಿದೆ. ಭಾರತೀಯ ಸ್ಪರ್ಧಾಳುಗಳು ಪದಗಳ ಬೇಟೆಯನ್ನು ಭರ್ಜರಿಯಾಗಿ ನಡೆಸಿದ್ದಾರೆ.

ಅದರ ನಡುವೆ ಮತ್ತೊಂದು ಹೊಸ ಭರವಸೆಯ ಪ್ರತಿಭೆಯೂ ಕ್ರೀಡಾಲೋಕಕ್ಕೆ ಸಿಕ್ಕಿದೆ. ಅನೀಶ್ ಭನ್ವಾಲಾ ಎಂಬ ಹೆಸರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಮನ್‌ವೆಲ್ತ್ ಗೇಮ್ಸ್್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಅನೀಶ್ ಬೆಳಕಿಗೆ ಬಂದಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕಾಗಿ ಚಿನ್ನ ಗೆದ್ದ ವೀರರಿವರು

ದಾಖಲೆ ಬರೆದ ಅನೀಶ್
ಪುರುಷರ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಅನೀಶ್ ಹೆಸರು ಕೇವಲ 15. ಈ ಮೂಲಕ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಭಾರತದ ಅತಿ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅನೀಶ್ ಪಾತ್ರರಾಗಿದ್ದಾರೆ.

ಕುಸ್ತಿಯಲ್ಲಿ ಭಾರತಕ್ಕೆ ಒಂದೇ ದಿನ ಎರಡು ಚಿನ್ನ ಒಂದು ಬೆಳ್ಳಿ, ಒಂದು ಕಂಚು

ಇದು ಅನೀಶ್ ಅವರ ಮೊದಲ ಕಾಮನ್‌ವೆಲ್ತ್ ಗೇಮ್ಸ್ ಕೂಡ ಹೌದು. ಇದಕ್ಕೂ ಮೊದಲು ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಅನೀಶ್ ಚಿನ್ನ ಗೆದ್ದಿದ್ದರು.

ಹರಿಯಾಣದವರಾದ ಅನೀಶ್, 2017ರಿಂದಲೂ ಭಾರತೀಯ ಶೂಟಿಂಗ್ ತಂಡದ ಸದಸ್ಯರಾಗಿದ್ದಾರೆ.

Story first published: Friday, April 13, 2018, 15:33 [IST]
Other articles published on Apr 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ