ವಿಶ್ವದ ವಿವಿಧೆಡೆ ಇ-ಸ್ಪೋರ್ಟ್ಸ್ ಟೂರ್ನಿ ಉದ್ಘಾಟಿಸಲಿದೆ ಅಪೊಲೊ ಟೈರ್ಸ್

ಬೆಂಗಳೂರು, ಆಗಸ್ಟ್ 25: ಪ್ರಮುಖ ಟೈರ್ ಉತ್ಪಾದಕ ಕಂಪನಿಯಾದ ಅಪೊಲೊ ಟೈರ್ಸ್ ಮತ್ತು ಜಾಗತಿಕ ವಿಡಿಯೋ ಗೇಮ್ ಪ್ರಕಾಶಕ ಸಂಸ್ಥೆಯಾದ ಕೊನಾಮಿ, ಮ್ಯಾಂಚೆಸ್ಟರ್ ಯುನೈಟೆಡ್ ಸಹಯೋಗದೊಂದಿಗೆ, ಇಂದು (ಆಗಸ್ಟ್ 25) ಅಪೋಲೊ ಟೈರ್ಸ್ ಯುನೈಟೆಡ್ ಲೀಗ್ ಆರಂಭವನ್ನು ಘೋಷಿಸಿದೆ. ಇದು ಮೊಬೈಲ್‍ನಲ್ಲಿ ಆಡುವ ಮಹತ್ವಾಕಾಂಕ್ಷಿ ಇ-ಕ್ರೀಡಾ ಟೂರ್ನಿಯಾಗಿದ್ದು, ಇ-ಫುಟ್‍ಬಾಲ್ ಇಪಿಎಸ್-2021 ಮೂಲಕ ಆಡಲಾಗುತ್ತದೆ. ಈ ಮೊಬೈಲ್ ಆಧರಿತ ಇ-ಕ್ರೀಡಾ ಟೂರ್ನಿಯನ್ನು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ಶ್ರೀಲಂಕಾ ಮತ್ತು ನೇಪಾಳಗಳ ವಿವಿಧ ಕಡೆಗಳಲ್ಲಿ ನಡೆಸಲಾಗುತ್ತದೆ. ಇದು ಮೊಟ್ಟಮೊದಲ ಇಂಥ ಟೂರ್ನಿಯಾಗಿದೆ.

ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!

ಅಪೊಲೊ ಟೈರ್ಸ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್, ಐಕಾನ್ ಇಂಗ್ಲಿಷ್ ಫುಟ್‍ಬಾಲ್ ಕ್ಲಬ್‌ನ ಅಧಿಕೃತ ವಿಡಿಯೋ ಗೇಮ್ ಪಾಲುದಾರರಾದ ಕೊನಾಮಿ ಜತೆ ಇ-ಕ್ರೀಡೆಗಾಗಿ ಇಷ್ಟೊಂದು ಬೃಹತ್ ಪ್ರಮಾಣದ ಉಪಕ್ರಮವನ್ನು ನಡೆಸುತ್ತಿರುವುದು ಇದೇ ಮೊದಲು. ಆಗಸ್ಟ್ 26ರಂದು ಈ ಇ-ಸ್ಪೋರ್ಟ್ಸ್ ಟೂರ್ನಿ ಉದ್ಘಾಟನೆಯಾಗಲಿದೆ.

'ಅಪೊಲೊ ಟೈರ್ಸ್ ಯುನೈಟೆಡ್ ಲೀಗ್' 3 ವಿಭಾಗಗಳಲ್ಲಿ ನಡೆಯಲಿದ್ದು, ಆರಂಭಿಕ (ಬಿಗಿನರ್), ಇಂಟರ್ ಮೀಡಿಯಟ್ (ಮಧ್ಯ) ಮತ್ತು ಅಡ್ವಾನ್ಸ್‍ಡ್ ಲೆವೆಲ್ (ಉನ್ನತ ಹಂತ) ಗಳಿಗೆ ಮೂರು ವಿಭಾಗಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ಗೇಮರ್‍ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಿನ್ನ ವಿಭಾಗಗಳ ಮೂವರು ವಿಜೇತರು ಓಲ್ಡ್ ಟ್ರಾಫರ್ಡ್‍ಗೆ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ, ಇದರಲ್ಲಿ ಹಾಲೋವೆಡ್ ಕ್ರೀಡಾಂಗಣದಲ್ಲಿ ಪಂದ್ಯದ ದಿನದ ಅನುಭವ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್‍ನ ಇ-ಸ್ಪೋಟ್ರ್ಸ್ ಆಟಗಾರರ ವಿರುದ್ಧ ವೈಯಕ್ತಿಕವಾಗಿ ಆಡುವ ಅವಕಾಶ ಪಡೆಯಲಿದ್ದಾರೆ.

ಇಂಗ್ಲೆಂಡ್‌ನಲ್ಲಿ 1971ರ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ 50 ವರ್ಷ!ಇಂಗ್ಲೆಂಡ್‌ನಲ್ಲಿ 1971ರ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ 50 ವರ್ಷ!

ಪಂದ್ಯಾವಳಿಯ ಮೊದಲ ಹಂತವು ಆಗಸ್ಟ್ 26, 2021 ರಂದು ಆರಂಭವಾಗುತ್ತದೆ. ಫೈನಲ್ ಪಂದ್ಯಗಳು ಸೆಪ್ಟೆಂಬರ್ 1 ರಂದು ನಡೆಯಲಿದೆ ಮತ್ತು ಅಪೊಲೊ ಟೈರ್ಸ್ ಯುನೈಟೆಡ್ ಲೀಗ್ ವಿಜೇತರನ್ನು ಸೆಪ್ಟೆಂಬರ್ 7ರಂದು ಘೋಷಿಸಲಾಗುತ್ತದೆ.

ಅಪೊಲೊ ಟೈರ್ಸ್ ಯುನೈಟೆಡ್ ಲೀಗ್ ನಮಗೆ ನಿರಂತರವಾಗಿ ಬೆಳೆಯುತ್ತಿರುವ ಇ-ಕ್ರೀಡೆಯ ಸರಣಿಗೆ ನಮ್ಮ ಮುನ್ನುಡಿಯನ್ನು ಗುರುತಿಸಲು ಸೂಕ್ತ ಅವಕಾಶ ಎಂದು ನಾವು ಭಾವಿಸುತ್ತೇವೆ, ಅಂತರಾಷ್ಟ್ರೀಯವಾಗಿ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಫುಟ್‍ಬಾಲ್‍ನಲ್ಲಿ ನಮ್ಮ ಅಸ್ತಿತ್ವದಲ್ಲಿರುವ ಹೂಡಿಕೆಗಳಿಗೆ ಇದು ಪೂರಕವಾಗಿದೆ ಎಂದು ಅಪೋಲೊ ಟೈರ್ಸ್‍ನ ಏಷ್ಯಾ ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಎಪಿಎಂಇಎ) ಅಧ್ಯಕ್ಷ ಸತೀಶ್ ಶರ್ಮಾ ಹೇಳಿದರು.

ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!

ಭಾರತವೊಂದರಲ್ಲೇ 1.5 ಲಕ್ಷಕ್ಕೂ ಹೆಚ್ಚು ವೃತ್ತಿಪರ ಇ-ಕ್ರೀಡೆಯಲ್ಲಿ ವೃತ್ತಿಪರ ಆಟಗಾರರು ಇದ್ದು, 17 ದಶಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಕರಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಈ ಸಂಖ್ಯೆಗಳು ಘಾತೀಯವಾಗಿ ಬೆಳೆಯಲಿದೆ. ಅಪೋಲೊ ಟೈರ್ಸ್ ಯುನೈಟೆಡ್ ಲೀಗ್‍ನ ಗೇಮಿಂಗ್ ಶೀರ್ಷಿಕೆಯಾದ ಕೊನಾಮಿಯ ಇ- ಫುಟ್‍ಬಾಲ್ ಸರಣಿಯು ಈ ಪ್ರದೇಶದಲ್ಲಿ ಇ -ಸ್ಪೋರ್ಟ್‍ಗಳನ್ನು ಬೆಂಬಲಿಸುವ ದೀರ್ಘ ಇತಿಹಾಸವನ್ನು ಹೊಂದಿದ್ದು, ಪಿಇಎಸ್- 2018, 2018ರ ಏಷ್ಯನ್ ಗೇಮ್ಸ್‍ನಲ್ಲಿ ಕಾಣಿಸಿಕೊಂಡಿತ್ತು.

For Quick Alerts
ALLOW NOTIFICATIONS
For Daily Alerts
Story first published: Wednesday, August 25, 2021, 19:13 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X