ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭೀಕರ ರಸ್ತೆ ಅಪಘಾತದಲ್ಲಿ ಆರ್ಚರಿ ಯುವ ಕೋಚ್ ನ್ಯಾನೋಮಾ ಸಾವು

Archery Coach Jayantilal Nanoma Passes Away In Road Accident

ಮಾಜಿ ಅಂತಾರಾಷ್ಟ್ರೀಯ ಬಿಲ್ಲುಗಾರ(ಆರ್ಚರ್) ಮತ್ತು ಕೋಚ್ ಆಗಿದ್ದ ಜಯಂತಿಲಾಲ್ ನ್ಯಾನೋಮಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಮುಂಜಾನೆ ನಡೆದ ಅಪಘಾತದಲ್ಲಿ ನ್ಯಾನೋಮಾ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜಸ್ತಾನದಲ್ಲಿ ಈ ಅಪಘಾತ ಸಂಭವಿಸಿದೆ.

34 ವರ್ಷದ ನ್ಯಾನೋಮಾ ಅವರು ತಮ್ಮ ಕಾರ್‌ನಲ್ಲಿ ಗೆಳೆಯನ ಜೊತೆಗೆ ಬಾನ್ಸ್‌ವರಾದಿಂದ ದುಂಗಾರ್ಪುರ್‌ಗೆ ಪ್ರಯಾಣಿಸುತ್ತಿದ್ದರು. ರಾಜಸ್ಥಾನದ ದುಂಗಾಪುರ ಜಿಲ್ಲೆಯ ವರದಾದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಜಯಂತಿಲಾಲ್ ನ್ಯಾನೋಮಾ ಪತ್ನಿ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದಾದ ಕ್ರೀಡಾಲೋಕ : ಕ್ರಿಕೆಟ್‌ನ ವರ್ಣಭೇದ ನೀತಿ ಬಗ್ಗೆ ಗೇಲ್ ಪ್ರಸ್ತಾಪಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದಾದ ಕ್ರೀಡಾಲೋಕ : ಕ್ರಿಕೆಟ್‌ನ ವರ್ಣಭೇದ ನೀತಿ ಬಗ್ಗೆ ಗೇಲ್ ಪ್ರಸ್ತಾಪ

ಗಂಭೀರ ಸ್ಥಿತಿಯಲ್ಲಿದ್ದ ನ್ಯಾನೋಮಾ ಅವರನ್ನು ಸಾಗ್ವಾರ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅವರನ್ನು ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಬಗ್ಗೆ ವರದಾ ಪೊಲೀಸ್ ಠಾಣೆಯ ಹೆಚ್‌ಎಸ್‌ಒ ಸಾಗರ್ ಚಂದ್ ದೃಢಪಡಿಸಿದ್ದಾರೆ.

ಜಯಂತಿಲಾಲ್ ನ್ಯಾನೋಮಾ ಅವರು ಡುಂಗರಪುರದಲ್ಲಿ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ತರಬೇತುದಾರರಾಗಿ ಅವರು ರಾಜಸ್ಥಾನದಿಂದ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಬಿಲ್ಲುಗಾರರನ್ನು ಸಿದ್ದಪಡಿಸಿದ್ದರು.

'ಖೇಲ್ ರತ್ನ'ಕ್ಕೆ ಬಾಕ್ಸರ್ ಅಮಿತ್ ಪಂಘಲ್, ವಿಕಾಸ್ ಕ್ರಿಶನ್ ನಾಮನಿರ್ದೇಶನ'ಖೇಲ್ ರತ್ನ'ಕ್ಕೆ ಬಾಕ್ಸರ್ ಅಮಿತ್ ಪಂಘಲ್, ವಿಕಾಸ್ ಕ್ರಿಶನ್ ನಾಮನಿರ್ದೇಶನ

ವಿದೇಶಗಳಲ್ಲಿ ನಡೆದ ಅನೇಕ ಟೂರ್ನಮೆಂಟ್‌ಗಳಲ್ಲಿ ಜಯಂತಿಲಾಲ್ ನ್ಯಾನೋಮಾ ಭಾರತೀಯ ತಂಡಕ್ಕೆ ಕೋಚ್ ಆಗಿ ತರಬೇತಿಯನ್ನು ನೀಡಿದ್ದಾರೆ. ಅವರು ರಾಜಸ್ಥಾನದ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಮಹಾರಾಣಾ ಪ್ರತಾಪ್ ರಾಜ್ಯ ಕ್ರೀಡಾ ಪ್ರಶಸ್ತಿಯನ್ನು ಪಡೆದಿದ್ದರು.

Story first published: Tuesday, June 2, 2020, 14:51 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X