ಏಷ್ಯಾ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ಮೇರಿ ಕೋಮ್ ಫೈನಲ್‌ ಗೆ

Posted By:

ನವದೆಹಲಿ, ನವೆಂಬರ್ 7: ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ಎಂಸಿ ಮೇರಿ ಕೋಮ್ ಅವರು ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್‌ ಗೆ ಲಗ್ಗೆ ಇಟ್ಟಿದ್ದಾರೆ.

ವಿಯೆಟ್ನಾದಲ್ಲಿ ಮಂಗಳವಾರ ನಡೆದ ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತದ ಮೇರಿ ಕೋಮ್ ಜಪಾನಿನ ತುಬಸ ಕುಮುರ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದರು.

Asian Boxing Championships: Indian Mary Kom enters final

35 ವರ್ಷದ ರಾಜ್ಯಸಭೆ ಸದಸ್ಯೆಯಾಗಿರುವ ಮೇರಿ ಕೋಮ್, ಒಲಿಂಪಿಕ್ ನಲ್ಲಿ ಕಂಚು ಪದಕ ಜಯಿಸಿದ್ದಾರೆ.

ಈಗಾಗಲೇ ನಾಲ್ಕು ಬಾರಿ ಏಷ್ಯನ್ ಬಾಕ್ಸಿಂಗ್ ಕಿರೀಟ ತೊಟ್ಟಿರುವ ಮೇರಿ, ಇದೀಗ ಐದನೇ ಬಾರಿಗೆ ಬಾಕ್ಸಿಂಗ್ ಕಿರೀಟಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ.

Story first published: Tuesday, November 7, 2017, 15:40 [IST]
Other articles published on Nov 7, 2017
Please Wait while comments are loading...