ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ದಾಸ್ ಸೇರ್ಡಡೆ, ಬಲಿಷ್ಠಗೊಂಡ ಭಾರತದ ಮಿಶ್ರ ರಿಲೇ ತಂಡ

Asian Games 2018: Hima Das Included in Mixed Relay Team

ಜಕಾರ್ತಾ, ಆಗಸ್ಟ್ 28: ಮಂಗಳವಾರ (ಆಗಸ್ಟ್ 28) ರಾತ್ರಿ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಭಾಗವಾಗಿ 4x400 ಮೀ. ಮಿಶ್ರ ರಿಲೇ ಸ್ಪರ್ಧೆ ನಡೆಯಲಿದ್ದು, ಭಾರತ ತಂಡದಲ್ಲಿ ಆಕರ್ಷಣೀಯ ಓಟಗಾರ್ತಿ ಹಿಮಾದಾಸ್ ಕೂಡ ಸೇರ್ಪಡೆಗೊಂಡಿರುವುದರಿಂದ ತಂಡ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

ಏಷ್ಯನ್ ಚಿನ್ನ ಗೆದ್ದ ವಿನೇಶ್ ಫೋಗಟ್ ಎಂಗೇಜ್ಮೆಂಟ್ ವಿಮಾನ ನಿಲ್ದಾಣದಲ್ಲಿ!ಏಷ್ಯನ್ ಚಿನ್ನ ಗೆದ್ದ ವಿನೇಶ್ ಫೋಗಟ್ ಎಂಗೇಜ್ಮೆಂಟ್ ವಿಮಾನ ನಿಲ್ದಾಣದಲ್ಲಿ!

ಭಾರತ ಪರ ಪಾಲ್ಗೊಳ್ಳಲಿರುವ 4x400 ಮೀ. ಮಿಶ್ರ ರಿಲೇ ತಂಡವನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೋಷಿಸಿದೆ. ಇದರಲ್ಲಿ ಇದೇ ಏಷ್ಯನ್ ಗೇಮ್ಸ್ ನ ಪುರುಷರ 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ಮೊಹಮ್ಮದ್ ಅನಾಸ್, ಪ್ರತಿಭಾನ್ವಿತ ಓಟಗಾರ್ತಿ-ಕನ್ನಡತಿ ಎಂಆರ್ ಪೂವಮ್ಮ, ಅರೋಕಿಯಾ ರಾಜೀವ್ ಮತ್ತು ಏಷ್ಯನ್ ಮಹಿಳಾ ವಿಭಾಗದ 400 ಮೀ. ಬೆಳ್ಳಿ ವಿಜೇತೆ ಹಿಮಾದಾಸ್ ಕೂಡ ಸೇರಿಕೊಂಡಿದ್ದಾರೆ.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಹಿಮಾ ಸೇರ್ಪಡೆ ವಿಶೇಷವೆನಿಸಿರುವುದಕ್ಕೆ ಕಾರಣವಿದೆ. ಈ ಮೊದಲು ಹಿಮಾದಾಸ್ ಹೊಸದಾಗಿ ಪರಿಚಯಿಸಲಾಗಿರುವ 4x400 ಮೀ. ಮಿಶ್ರ ರಿಲೇಯ ಏಷ್ಯನ್ ತಂಡದಿಂದ ಹೊರಗುಳಿದಿದ್ದರು. ತಾನು ವೈಯಕ್ತಿಕ ಸ್ಪ್ರಿಂಟ್ ವಿಭಾಗ (200 ಮೀ., 400 ಮೀ. ಓಟ)ದತ್ತ ಗಮನ ಹರಿಸುತ್ತಿರುವುದು ಇದಕ್ಕೆ ಕಾರಣ ಎಂದಿದ್ದರು.

'ಹಿಮಾಳ ವೈಯಕ್ತಿಕ ವಿಭಾಗದ ಓಟ ಮತ್ತು ಈ ತಂಡ ಸ್ಪರ್ಧೆಯ ಸಮಯ ಒಂದೇ ರೀತಿ ಇದೆ. ಅಂದರೆ 200 ಮೀ. ಓಟ ಮತ್ತು ಮಿಶ್ರ ತಂಡ ರಿಲೇ ಸ್ಪರ್ಧೆ ನಡುವಿನ ಅವಧಿ ಸಣ್ಣದು. ಆ ಸಣ್ಣ ಅವಧಿಯಲ್ಲಿ ಮತ್ತೊಂದು ಓಟಕ್ಕೆ ತಯಾರಾಗುವುದು ಕಷ್ಟ. ಹಾಗಾಗಿ ಮಿಶ್ರ ರಿಲೇ ತಂಡದಿಂದ ಹಿಮಾ ಹಿಂದೆ ಸರಿದಿದ್ದಾರೆ' ಎಂದು ರಾಷ್ಟ್ರೀಯ ಕೋಚ್ ಬಸಂತ್ ಸಿಂಗ್ ತಿಳಿಸಿದ್ದರು.

ಆದರೆ ಬಹುಶಃ ಇಂವೆಂಡ್ ಆರಂಭಿಕ ಸಮಯಗಳನ್ನು ಬದಲಾವಣೆ ಮಾಡಿಕೊಂಡಿರುವ ಕಾರಣದಿಂದಲೋ ಏನೋ, ಭಾರತದ ಸ್ಟಾರ್ ಓಟಗಾರ್ತಿ ಹಿಮಾ ಮತ್ತೆ ಮಿಶ್ರ ರಿಲೇ ತಂಡವನ್ನು ಸೇರಿಕೊಂಡಿದ್ದಾರೆ. ಎಎಫ್ಐ ಪ್ರಕಟಿಸಿರುವ ತಂಡದಲ್ಲಿರುವ ಎಲ್ಲರೂ ಪ್ರತಿಭಾನ್ವಿತರೆ. ಹಾಗಾಗಿ ಭಾರತ ಮತ್ತೊಂದು ಚಿನ್ನದ ನಿರೀಕ್ಷೆಯಲ್ಲಿದೆ.

Story first published: Tuesday, August 28, 2018, 17:32 [IST]
Other articles published on Aug 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X