ಏಷ್ಯನ್ ಗೇಮ್ಸ್: ನೀರಜ್ ಚೋಪ್ರಾಗೆ ಧ್ವಜ ಹಿಡಿಯುವ ಗೌರವ

ನವದೆಹಲಿ, ಆಗಸ್ಟ್ 10: ಇದೇ ತಿಂಗಳ 18ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್‌ನ ಉದ್ಘಾಟನೆ ವೇಳೆ ಭಾರತದ ಧ್ವಜ ಹಿಡಿದು ಕ್ರೀಡಾತಂಡವನ್ನು ಮುನ್ನಡೆಸುವ ಗೌರವವನ್ನು ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಪಡೆದುಕೊಂಡಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆದ ಸೊಟೆವಿಲೆ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಚೋಪ್ರಾ ಅವರನ್ನು ಏಷ್ಯನ್ ಗೇಮ್ಸ್‌ನ 18ನೇ ಆವೃತ್ತಿಯ ಧ್ವಜಾಧಾರಿಯಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಓಎ) ಆಯ್ಕೆ ಮಾಡಿದೆ.
ದೆಹಲಿಯ ಹಯಾಟ್ ಹೋಟೆಲ್‌ನಲ್ಲಿ ಶುಕ್ರವಾರ ಭಾರತ ತಂಡಕ್ಕೆ ಬೀಳ್ಕೊಡುಗೆ ನೀಡುವ ಸಮಾರಂಭದಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ.
'ನನಗೆ ತುಂಬಾ ಹೆಮ್ಮೆ ತಂದುಕೊಡುವ ವಿಚಾರ. ಇದಕ್ಕಾಗಿ ಐಓಎಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ' ಎಂದು ಪ್ರಸ್ತುತ ಫಿನ್ಲೆಂಡ್‌ನಲ್ಲಿರುವ ಚೋಪ್ರಾ ಸಂತಸ ಹಂಚಿಕೊಂಡಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ರಾಜ್ಯವರ್ಧನ ಸಿಂಗ್ ರಾಥೋರ್ ಏಷ್ಯನ್ ಗೇಮ್ಸ್‌ಗೆ ತೆರಳುತ್ತಿರುವ ಅಥ್ಲೆಟಿಕ್‌ಗಳು ಮತ್ತು ಅಧಿಕಾರಿಗಳಿಗೆ ಶುಭಾಶಯ ತಿಳಿಸಿದರು.
ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬ್ಯಾಂಗ್ ನಗರಗಳಲ್ಲಿ ಆಗಸ್ಟ್ 18ರಿಂದ ಸೆಪ್ಟೆಂಬರ್ 2ರವರೆಗೂ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದೆ. 36 ವಿವಿಧ ವಿಭಾಗದ ಕ್ರೀಡೆಗಳಲ್ಲಿ 572 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications