ಎಐಯುನಿಂದಲೂ ಕಿಪ್ರೊಪ್ ಉದ್ದೀಪನ ಸೇವಿಸಿದ್ದು ಖಾತರಿ

Posted By: Sadashiva
Athletics Integrity Unit Confirm Kiprop Positive Test, Reject Allegations

ನೈರೋಬಿ, ಮೇ 4: ಒಲಿಂಪಿಕ್ಸ್ ಮಾಜಿ ಚಾಂಪಿಯನ್ ಮತ್ತು 1500ಮೀ. ಓಟದ ಚಿನ್ನದ ಪದಕ ವಿಜೇತ ಕೀನ್ಯಾದ ಅಥ್ಲೀಟ್ ಅಸ್ಬೆಲ್ ಕಿಪ್ರೊಪ್ ಉದ್ದೀಪನ ಸೇವಿಸಿದ್ದನ್ನು ಅಥ್ಲೆಟಿಕ್ಸ್ ಇಂಟಗ್ರಿಟಿ ಯುನಿಟ್ ಖಾತರಿ ಪಡಿಸಿದೆ. ಕಿಪ್ರೊಪ್ ಅವರು ರಕ್ತ ಚುರುಕುಗೊಳಿಸುವುದಕ್ಕೆ ಸಂಬಂಧಿಸಿ ನಿಷೇಧಿತ ಎರಿತ್ರೋಪೊಯೆಟಿನ್ ಸೇವಿಸಿದ್ದು ನಿಜವೆಂದು ಅದು ಹೇಳಿದೆ.

ಅಥ್ಲೆಟಿಕ್ಸ್ ನಲ್ಲಿನ ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸುವ ಎಐಯು ಸಮಿತಿಯು ಕಿಪ್ರೊಪ್ ಉದ್ದೀಪನ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಕಂಡು ಬಂದಿರುವುದಾಗಿ ತಿಳಿಸಿದೆ. ಬಿ ಸ್ಯಾಂಪಲ್ ಪರೀಕ್ಷೆಯಲ್ಲೂ ಪಾಸಿಟಿವ್ ಫಲಿತಾಂಶ ಬಂದಿರುವುದನ್ನು ಎಐಯು ಖಾತರಿ ಪಡಿಸಿದೆ.

ಅಲ್ಲಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹುಟ್ಟಿಕೊಂಡಿದ್ದ ಗೊಂದಲ, ಅಥ್ಲೀಟ್ ಒಬ್ಬನನ್ನು ಸುಮ್ಮನಾದರೂ ತಪ್ಪಿತಸ್ಥನನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದಲ್ಲ ಕೇಳಿ ಬಂದಿದ್ದ ಆರೋಪಗಳಿಗೆ ಸದ್ಯ ತೆರೆಬಿದ್ದಂತಾಗಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ನಡೆಸಲಾದ ಉದ್ದೀಪನ ಪರೀಕ್ಷೆಗಾಗಿ ಸಂಬಂಧಿಸಿ ಪೂರ್ಣ ಮಾಹಿತಿ ನೀಡಬೇಕೆಂದು ಕಿಪ್ರೊಪ್ ಗುರುವಾರ ಉದ್ದೀಪ ಪರೀಕ್ಷಾಧಿಕಾರಿಗಳ ಬಳಿ ಹೋಗಿದ್ದರು. ಸುಮಾರು 1,000 ಪದಗಳಿರುವ ಆರೋಪ ಪಟ್ಟಿಯನ್ನೂ ಈ ಸಂದರ್ಭ ಸಲ್ಲಿಸಿದ್ದರು.

ಕಿಪ್ರೊಪ್ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಪರೀಕ್ಷಾಧಿಕಾರಿಗಳು ತನ್ನೊಡನೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪರೀಕ್ಷೆಗಾಗಿ ಕೊಂಡೊಯ್ಯಲಾದ ಸ್ಯಾಂಪಲ್ ಗೆ ಅವರೇ ಕಲಬೆರಕೆ ಮಾಡಿರುವ ಅಥವಾ ಸ್ಯಾಂಪಲನ್ನು ಹಾಳುಗೆಡವಿರುವ ಸಾಧ್ಯತೆಗಳಿರುವುದಾಗಿ ದೂರಿದ್ದರು. ಆದರೆ ಕಿಪ್ರೊಪ್ ಆರೋಪ ನಿರಾಧಾರ. ಬಿ ಸ್ಯಾಂಪಲ್ ನಲ್ಲಿ ಕಿಪ್ರೊಪ್ ಮದ್ದು ಸೇವಿಸಿದ್ದು ಕಂಡುಬಂದಿದೆ ಎಂದು ಎಐಯು ತಿಳಿಸಿದೆ.

Story first published: Friday, May 4, 2018, 15:19 [IST]
Other articles published on May 4, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ