ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಾಲು ಮುರಿದುಕೊಳ್ಳುವುದರಲ್ಲಿದ್ದರು ಭಜರಂಗ್ ಪೂನಿಯಾ!

Bajrang Punia risked breaking his leg in bronze medal match in Tokyo Olympics

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ರಸ್ಲರ್ ಭಜರಂಗ್ ಪೂನಿಯಾ ತನ್ನ ಕಾಲು ಮುರಿದುಕೊಳ್ಳುವುದರಲ್ಲಿದ್ದರಂತೆ. ಆದರೆ ದೇಶಕ್ಕಾಗಿ ಪದಕ ಗೆಲ್ಲುವುದಾದರೆ ನನ್ನ ಕಾಲು ಮುರಿಸಿಕೊಳ್ಳಲೂ ನಾನು ತಯಾರಿದ್ದೆ ಎಂದು ಪೂನಿಯಾ ಹೇಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂನಿಯಾ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ ಅನುಭವ ಹಂಚಿಕೊಂಡಿರುವ ಪೂನಿಯಾ ಈ ಸಂಗತಿ ಹೇಳಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆ

ಸೆಮಿಫೈನಲ್‌ನಲ್ಲಿ ಸ್ಪರ್ಧಿಸುವಾಗ ಭಜರಂಗ್ ಪೂನಿಯಾ ಬಲಗಾಲಿಗೆ ಟೇಪು ಸುತ್ತಿಕೊಂಡಿದ್ದರು. ಆ ಪಂದ್ಯದಲ್ಲಿ ಪೂನಿಯಾ ಅವರು ಅಝರ್ಬೈಜಾನಿ ರಸ್ಲರ್ ಹಾಜಿ ಅಲಿಯೇವ್ ಎದುರು ಸೋತು ನಿರಾಸೆ ಅನುಭವಿಸಿದ್ದರು. ಆ ಬಳಿಕ ಕಂಚಿನ ಪಕದಕ್ಕಾಗಿ ನಡೆದ ಪಂದ್ಯದಲ್ಲಿ ಪೂನಿಯಾ ಕಾಲಿಗೆ ಟೇಪು ಹಾಕಿಕೊಂಡಿರಲೇಯಿಲ್ಲ. ಈ ಪಂದ್ಯದಲ್ಲಿ ಕಝಕ್‌ಸ್ತಾನ್‌ನ ಡೊಲ್ಟ್ ನಿಯಾಜ್ಬೆಕೊವ್ ಎದುರು 8-0ಯಿಂದ ಗೆದ್ದಿದ್ದರು. ಈ ನಿಯಾಜ್ಬೆಕೊವ್ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದವರು ಅನ್ನೋದು ವಿಶೇಷ.

ಟೇಪ್ ಹಾಕಿ ಕಾಲು ಸರಿಯಾಗಿ ಚಲಿಸಲಾಗಲಿಲ್ಲ

ಟೇಪ್ ಹಾಕಿ ಕಾಲು ಸರಿಯಾಗಿ ಚಲಿಸಲಾಗಲಿಲ್ಲ

"ಮೊದಲ ದಿನ ನನ್ನ ಚಲನೆಗಳು ನಿರ್ಬಂಧಿಸಲ್ಪಟ್ಟವು. ಯಾಕೆಂದರೆ ಕಾಲಿಗೆ ಟೇಪು ಹಾಕಿದ್ದರಿಂದ ನನಗೆ ಸ್ಪರ್ಧೆಯ ಸರಿಯಾಗಿ ಕಾಲು ಚಲಿಸಲಾಗುತ್ತಿರಲಿಲ್ಲ. ಕಾಲಿಗೆ ತೀವ್ರ ಗಾಯವಾಗದಿರಲೆಂದು ನನ್ನ ಫಿಸಿಯೋ ಟೇಪ್ ಧರಿಸಿ ಸ್ಪರ್ಧಿಸುವಂತೆ ನನಗೆ ಸೂಚಿಸಿದ್ದರು. ಆದರೆ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯ ವೇಳೆ ಟೇಪು ಧರಿಸದಿರಲು ನಾನು ನಿರ್ಧರಿಸಿದೆ. ಅದೇ ಮೊದಲ ಬಾರಿ ನಾನು ಅಂಥ ಗಟ್ಟಿ ನಿರ್ಧಾರ ತಾಳಿದ್ದೆ. ಸಾಮಾನ್ಯವಾಗಿ ನಾನು ಟೂರ್ನಿಗಿಂತ ಮೊದಲ ಹೀಗೆ ಗಾಯಗೊಂಡಿದಿಲ್ಲ. ಆದರೆ ಒಲಿಂಪಿಕ್ಸ್ ವೇಳೆ ಗಾಯಕ್ಕೀಡಾಗಿದ್ದೆ. ಆದ್ದರಿಂದ ನಾನು ಸ್ವಲ್ಪ ನರ್ವಸ್ ಕೂಡ ಆಗಿದ್ದೆ," ಎಂದು ಆಜ್‌ತಕ್ ಜೊತೆ ಮಾತನಾಡಿದ ಭಜರಂಗ್ ಹೇಳಿದ್ದಾರೆ. ಕಾಲಿಗೆ ಟೇಪ್ ಹಾಕಿ ಸ್ಪರ್ಧಿಸಿದ್ದರಿಂದ ಸೆಮಿಫೈನಲ್‌ನಲ್ಲಿ ಪೂನಿಯಾ ಸೋತು ನಿರಾಸೆ ಅನುಭವಿಸಿದ್ದರು. ಆದರೆ ಪದಕಕ್ಕಾಗಿ ನಡೆದ ಪಂದ್ಯದ ವೇಳೆ ಏನಾದರೂ ಸರಿ ಟೇಪು ಧರಿಸಲ್ಲ ಎಂದು ಭಜರಂಗ್ ನಿರ್ಧರಿಸಿದರಂತೆ

ಕಾಲು ಮುರಿದರೂ ಪರವಾಗಿಲ್ಲ ಎಂದು ನಿರ್ಧರಿಸಿದೆ

ಕಾಲು ಮುರಿದರೂ ಪರವಾಗಿಲ್ಲ ಎಂದು ನಿರ್ಧರಿಸಿದೆ

"ಟೇಪು ಧರಿಸಬೇಕು ಎಂದು ಡಾಕ್ಟರ್ ಹೇಳಿದರು. ಆದರೆ ನಾನು, ಪರವಾಗಿಲ್ಲ, ಹೆಚ್ಚೆಂದರೆ ಟೇಪು ಧರಿಸದೆ ಆಡಿ ನನ್ನ ಕಾಲು ಮುರಿದುಹೋಗಬಹುದು. ನಾನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬರಬಹುದು. ಕಾಲು ಮುರಿದರೂ ಪರವಾಗಿಲ್ಲ. ನಾವು ಬೇಕಾದರೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳೋಣ. ಆದರೆ ಈ ಹೊತ್ತು ಪದಕವೇ ಮುಖ್ಯ. ನನಗೀಗ ಪದಕ ಗೆಲ್ಲಬೇಕು. ಆಗಲೇ ನಾನು ಇಷ್ಟು ಪರಿಶ್ರಮ ಪಟ್ಟಿದ್ದಕ್ಕೆ ಸಾರ್ಥಕ ಅನ್ನಿಸೋದು,' ಎಂದು ಟೋಕಿಯೋ ಒಲಿಂಪಿಕ್ಸ್ ವೇಳೆ ತಾನು ಡಾಕ್ಟರ್ ಬಳಿ ಹೇಳಿರುವುದಾಗಿ ಪೂನಿಯಾ ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಭಜರಂಗ್ ಕಾಲಿಗೆ ಗಾಯವಾಗಿತ್ತು. ರಷ್ಯಾದಲ್ಲಿ ನಡೆದಿದ್ದ ಅಲಿ ಅಲಿಯೇವ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಂಡರ್ 23 ಯುರೋಪಿಯನ್ ಬೆಳ್ಳಿ ಪದಕ ವಿಜೇತ ರಷ್ಯಾದ ಅಬುಲ್ಮಜಿದ್ ಕುಡೀವ್ ಎದುರು ಆಡುವಾಗ ಭಜರಂಗ್ ಕಾಲಿಗೆ ಗಾಯ ಮಾಡಿಕೊಂಡಿದ್ದರು.

ಭಾರತಕ್ಕೆ ಒಂದು ಬೆಳ್ಳಿ, ಒಂದು ಕಂಚಿನ ಪದಕ

ಭಾರತಕ್ಕೆ ಒಂದು ಬೆಳ್ಳಿ, ಒಂದು ಕಂಚಿನ ಪದಕ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ, ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ, ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಕಂಚು, ರಸ್ಲರ್ ರವಿಕುಮಾರ್ ದಹಿಯಾ ಬೆಳ್ಳಿ, ರಸ್ಲರ್ ಭಜರಂಗ್ ಪೂನಿಯಾ ಕಂಚು, ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಮತ್ತು ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರಕ್ಕೆ ಬಂಗಾರದ ಪದಕ ಲಭಿಸಿತ್ತು. ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ 7 ಪದಕಗಳು ಸಿಕ್ಕಿದ್ದು ಇದೇ ಮೊದಲು. ಇದಕ್ಕೂ ಮುನ್ನ ಭಾರತ 6 ಪದಕಗಳನ್ನು ಗೆದ್ದಿದ್ದೇ ಹೆಚ್ಚು. ಅಂದ್ಹಾಗೆ ಸಮಾರೋಪ ಸಮಾರಂಭದ ವೇಳೆ ಭಜರಂಗ್ ಭಾರತದ ಧ್ವಜ ಹಿಡಿದು ತಂಡ ಮುನ್ನಡೆಸಿದ್ದರು.

Story first published: Saturday, August 14, 2021, 18:30 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X