ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕಾಗಿ ಚಿನ್ನ ಗೆದ್ದ ವೀರರಿವರು

By Manjunatha

ಗೋಲ್ಡ್‌ ಕೋಸ್ಟ್‌, ಏಪ್ರಿಲ್ 11: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವು ತನ್ನ ಪದಕ ಬೇಟೆ ಮುಂದುವರೆಸಿದೆ. ಈ ವರೆಗೆ 12 ಚಿನ್ನ ಭಾರತದ ಮಡಿಲಿಗೆ ಬಿದ್ದಿದೆ.

ಭಾರತವು ಈವರೆಗೆ 24 ಪದಕಗಳನ್ನು ಗೆದ್ದಿದ್ದು ಅದರಲ್ಲಿ 12 ಚಿನ್ನ, 4 ಬೆಳ್ಳಿ, 8 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ವ್ಹೇಟ್‌ಲಿಫ್ಟರ್‌ಗಳು, ಶೂಟರ್‌ಗಳು ಅತಿ ಹೆಚ್ಚು ಚಿನ್ನ ಗೆದ್ದಿದ್ದು, ಬ್ಯಾಡ್‌ಮಿಂಟನ್‌ ಅಂಗಳದಿಂದಲೂ ಚಿನ್ನ ಬರುವ ನಿರೀಕ್ಷೆ ಇದೆ.

ಭಾರತಕ್ಕೆ ಒಂದು ಗುಂಪು ಆಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಚಿನ್ನ ಬಂದಿದ್ದು, ಚಿನ್ನ ಗೆದ್ದವರು ಪಟ್ಟಿ ಇಲ್ಲಿದೆ ನೋಡಿ...

ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಕ್ರೀಡಾಳು ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಇದು ಭಾರತದ ಎರಡನೇ ಪದಕವಾಗಿದ್ದು, ಕುಂದಾಪುರದ ಗುರುರಾಜ್ ಪೂಜಾರಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಮೀರಾಬಾಯಿ ಅವರು 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ 196 ಕೆಜೆ ಭಾರ ಎತ್ತಿ ಈ ಸಾಧನೆ ಮಾಡಿದರು.

ಎರಡನೇ ಚಿನ್ನ ಗೆದ್ದದ್ದು ಸಂಜಿತ್ ಚಾನು

ಎರಡನೇ ಚಿನ್ನ ಗೆದ್ದದ್ದು ಸಂಜಿತ್ ಚಾನು

24 ವರ್ಷದ ಖುಮುಕ್ಚಮ್ ಸಂಜಿತ್ ಚಾನು ಒಟ್ಟು 192 ಕೆಜಿ ಭಾರವನ್ನು ಸ್ನಾಚ್, ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಎತ್ತುವ ಮೂಲಕ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟ ಕೀರ್ತಿಗೆ ಪಾತ್ರರಾದರು.

ತಮಿಳುನಾಡಿನ ಸತೀಶ್ ಪದಕ

ತಮಿಳುನಾಡಿನ ಸತೀಶ್ ಪದಕ

ಪುರುಷರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸತೀಶ್‌ಕುಮಾರ್ ಶಿವಲಿಂಗಮ್ ಅವರು 317 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೂರನೇ ಪದಕ ತಂದಿತ್ತರು. ಅವರು 144 ಕೆಜಿ ಸ್ನಾಚ್‌ನಲ್ಲಿ ಮತ್ತು 173 ಕೆಜಿ ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟರು. 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಸತೀಶ್ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

ವೆಂಕಟ ರಾಹುಲ್ ರಗಲಗೆ ಚಿನ್ನ

ವೆಂಕಟ ರಾಹುಲ್ ರಗಲಗೆ ಚಿನ್ನ

ಭಾರತದ ವ್ಹೇಟ್‌ಲಿಫ್ಟರ್‌ ವೆಂಕಟ ರಾಹುಲ್ ರಗಲ ಅವರು ವ್ಹೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು. 21 ವರ್ಷದ ರಾಹುಲ್ ಅವರು ಒಟ್ಟು 338 ಕೆಜಿ ಭಾರ ಎತ್ತಿ ಚಿನ್ನದ ಸಾಧನೆ ಮಾಡಿದರು.

ತಂದೆಯ ತ್ಯಾಗಕ್ಕೆ ಚಿನ್ನದ ಉಡುಗೊರೆ

ತಂದೆಯ ತ್ಯಾಗಕ್ಕೆ ಚಿನ್ನದ ಉಡುಗೊರೆ

ಮಹಿಳೆಯರ 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂನಂ ಯಾದವ್ ಅವರು ವ್ಹೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಕಳೆದ ಕಾಮನ್‌ವೆಲ್ತ್‌ನಲ್ಲಿ ಕಂಚಿಗೆ ತೃಪ್ತಿ ಪಟ್ಟಿದ್ದ ಪೂನಂ ಅವರು ಈ ಬಾರಿ 222 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಸಾಧನೆ ಮಾಡಿದರು. ಅವರ ತಂದೆ ಮಗಳು ಚಿನ್ನ ಗೆಲ್ಲಲೆಂದು ಎಮ್ಮೆಗಳನ್ನು ಮಾರಿ ಮಗಳಿಗೆ ತರಬೇರಿ ಕೊಡಿಸಿದ್ದರು.

16 ಹರೆಯದ ಮನು ಭಾಕೇರ್‌ ಚಿನ್ನ

16 ಹರೆಯದ ಮನು ಭಾಕೇರ್‌ ಚಿನ್ನ

ಕಾಮನ್‌ವೆಲ್ತ್ ಗೇಮ್ಸ್ ನ ನಾಲ್ಕನೇ ದಿನದಲ್ಲಿ 16ರ ಹರೆಯದ ಮನು ಭಾಕೇರ್, ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ದಾಖಲೆ ನಿರ್ಮಿಸಿದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕೇರ್ 240.9 ಅಂಕಗಳನ್ನು ಪಡೆಯುವ ಮೂಲಕ ಚಿನ್ನ ಗೆದ್ದರು.

ಇತಿಹಾಸ ನಿರ್ಮಿಸಿದ ಟೇವಲ್ ಟೆನ್ನಿಸ್ ತಂಡ

ಇತಿಹಾಸ ನಿರ್ಮಿಸಿದ ಟೇವಲ್ ಟೆನ್ನಿಸ್ ತಂಡ

ಮಹಿಳಾ ತಂಡದ ಟೇಬಲ್ ಟೆನ್ನಿಸ್‌ನಲ್ಲಿ ಭಾರತೀಯ ತಂಡವು 3-1ರಿಂದ ಸಿಂಗಪುರವನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿತು. ಇದು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಟೇಬಲ್ ಟೆನ್ನಿಸ್‌ ವಿಭಾಗದಲ್ಲಿ ಭಾರತದ ಮೊದಲ ಪದಕವಾಗಿದ್ದು, ಮಹಿಳಾ ಟೇಬಲ್ ಟೆನ್ನಿಸ್‌ ತಂಡವು ಇತಿಹಾಸ ಸೃಷ್ಟಿಸಿತು.

ಪುರಷರದ್ದೂ ದಾಖಲೆಯೇ..

ಪುರಷರದ್ದೂ ದಾಖಲೆಯೇ..

ಮಹಿಳಾ ಟೇಬಲ್ ಟೆನ್ನಿಸ್ ತಂಡ ಚಿನ್ನ ಗೆದ್ದ ಬೆನ್ನಲ್ಲೆ ಪುರುಷರ ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನದ ಪದಕ ಗೆದ್ದಿತು. ಪುರುಷರ ಟೇಬಲ್ ಟೆನ್ನಿಸ್ ತಂಡವು ನೈಕೀರಿಯಾ ತಂಡದ ವಿರುದ್ಧ ಸುಲಭದ ಜಯ ಸಾಧಿಸಿ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರಿಸಿತು.

ಚಿನ್ನಕ್ಕೆ ಗುರಿ ಇಟ್ಟ ಹೀನಾ ಸಿಂಧು

ಚಿನ್ನಕ್ಕೆ ಗುರಿ ಇಟ್ಟ ಹೀನಾ ಸಿಂಧು

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಚಿನ್ನ ಗೆದ್ದಿದ್ದಾರೆ. ಇದು ಕ್ರೀಡಾಕೂಟದಲ್ಲಿ ಹೀನಾ ಸಿಧು ಅವರ ಎರಡನೆಯ ಪದಕವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರು ಭಾನುವಾರ ಬೆಳ್ಳಿ ಪದಕ ಜಯಿಸಿದ್ದರು.

ಪುರುಷರ ಶೂಟಿಂಗ್‌ನಲ್ಲಿ ಚಿನ್ನ

ಪುರುಷರ ಶೂಟಿಂಗ್‌ನಲ್ಲಿ ಚಿನ್ನ

ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ರಾಯ್ ದೇಶಕ್ಕೆ ಮತ್ತೊಂದು ಚಿನ್ನದ ಪದಕ ತಂದಿತ್ತರು. ಜಿತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರು ಫೈನಲ್‌ನಲ್ಲಿ 235.1 ಸ್ಕೋರ್ ಮಾಡಿದರು.

ಶ್ರೇಯಸಿ ಸಿಂಗ್‌ಗೆ ಚಿನ್ನ

ಶ್ರೇಯಸಿ ಸಿಂಗ್‌ಗೆ ಚಿನ್ನ

ಶೂಟಿಂಗ್‌ನ ಡಬಲ್ ಟ್ರಾಫ್‌ ವಿಭಾಗದಲ್ಲಿ ಭಾರತದ ಶ್ರೇಯಸಿ ಸಿಂಗ್ ಅವರು ಚಿನ್ನದ ಪದಕ ಗೆದ್ದರು. ಭಾರತಕ್ಕೆ ಇದು 12ನೇ ಚಿನ್ನದ ಪದಕವಾಯಿತು. ಶ್ರೇಯಸಿ ಸಿಂಗ್ ಅವರು 2014ರ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಬ್ಯಾಡ್‌ಮಿಂಟನ್‌ ಮಿಕ್ಸಡ್‌ ಟೀಮ್‌ನಲ್ಲಿ ಚಿನ್ನ

ಬ್ಯಾಡ್‌ಮಿಂಟನ್‌ ಮಿಕ್ಸಡ್‌ ಟೀಮ್‌ನಲ್ಲಿ ಚಿನ್ನ

ಬ್ಯಾಡ್‌ಮಿಂಟನ್‌ ಮಿಕ್ಸಡ್‌ ಟೀಮ್ ನಲ್ಲಿ ಮಲೇಷ್ಯಾ ವಿರುದ್ಧ ಜಯ ಗಳಿಸಿ ಚಿನ್ನಕ್ಕೆ ಮುತ್ತಿಟ್ಟಿತು ಅತಿ ಹೆಚ್ಚು ಸ್ಟಾರ್ ಆಟಗಾರರನ್ನು ಹೊಂದಿರುವ ಭಾರತ ಬ್ಯಾಡ್‌ಮಿಂಟನ್ ತಂಡದ ಮೇಲೆ ಚಿನ್ನ ಗೆಲ್ಲುವ ಭರವಸೆ ಹೆಚ್ಚಿದೆ. ಕನಿಷ್ಠ 5 ಆದರೂ ಚಿನ್ನ ಗೆಲ್ಲುವ ನಿರೀಕ್ಷೆ ಇದೆ.

ಕುಸ್ತಿಯಲ್ಲಿ ಚಿನ್ನದ ಬೆಳೆ

ಕುಸ್ತಿಯಲ್ಲಿ ಚಿನ್ನದ ಬೆಳೆ

ಪುರುಷರ 74 ಕೆಜಿ ಫ್ರೀ ಸ್ಟೈಲ್‌ನಲ್ಲಿ ಸ್ಪರ್ಧಿಸಿದ್ದ ಸುಶೀಲ್ ಕುಮಾರ್ ಅವರು ದಕ್ಷಿಣ ಆಫ್ರಿಕಾದ ಜಾನೆಸ್ ಬೋತಾ ಅವರನ್ನು 10-0 ಭಾರಿ ಅಂತರದಿಂದ ಸೋಲಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದ ಸುಶೀಲ್ ಅವರಿಗೆ ಕಾಮನ್‌ವೆಲ್ತ್ ಪದಕ ಸುಲಭದಲ್ಲಿ ದಕ್ಕಿತು.

ರಾಹುಲ್ ಅವಾರೆಗೆ ಚಿನ್ನ

ರಾಹುಲ್ ಅವಾರೆಗೆ ಚಿನ್ನ

ಇದಕ್ಕೂ ಮುಂಚೆ ಮಹಾರಾಷ್ಟ್ರದ ರಾಹುಲ್ ಅವಾರೆ ಅವರು 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕೆನಾಡದ ಠಕೋಶಿ ಅವರನ್ನು 15-7 ಅಂತರದಿಂದ ಸೋಲಿಸಿದರು.

Story first published: Thursday, April 12, 2018, 18:40 [IST]
Other articles published on Apr 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X