ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Commonwealth Games 2022: 5ನೇ ದಿನ ಚಿನ್ನದ ಬೇಟೆಯಾಡಿದ ಭಾರತ; 6ನೇ ದಿನದ ವೇಳಾಪಟ್ಟಿ ಇಲ್ಲಿದೆ

Commonwealth Games 2022: Day 6 full schedule list of India

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಐದನೇ ದಿನ ನಿನ್ನೆಗೆ ( ಆಗಸ್ಟ್ 2 ) ಮುಕ್ತಾಯವಾಗಿದೆ. ಐದನೇ ದಿನದಂದು ಭಾರತ 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳು ಸೇರಿದಂತೆ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ತಾನು ಗೆದ್ದ ಪದಕಗಳ ಸಂಖ್ಯೆಯನ್ನು 13ಕ್ಕೆ ಏರಿಸಿದೆ.

IND vs WI: 3ನೇ ಟಿ20 ಕೂಡ ವಿಳಂಬ; ಪಂದ್ಯ ಎಷ್ಟು ಗಂಟೆಗೆ ಶುರು? ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿIND vs WI: 3ನೇ ಟಿ20 ಕೂಡ ವಿಳಂಬ; ಪಂದ್ಯ ಎಷ್ಟು ಗಂಟೆಗೆ ಶುರು? ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಹೌದು, ಲಾನ್ ಬೌಲ್ಸ್ ಕ್ರೀಡೆಯ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು ದಕ್ಷಿಣ ಆಫ್ರಿಕಾ ವನಿತೆಯರ ತಂಡವನ್ನು ಸೋಲಿಸುವುದರ ಮೂಲಕ ಚಿನ್ನದ ಪದಕವನ್ನು ಪಡೆದು ಲಾನ್ ಬೌಲ್ಸ್ ಕ್ರೀಡೆಯಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಐತಿಹಾಸಿಕ ದಾಖಲೆ ನಿರ್ಮಿಸಿದರು. ಇನ್ನು ಇದೇ ದಿನ ವೇಟ್ ಲಿಫ್ಟರ್ ವಿಕಾಸ್ ಠಾಕೂರ್ ಬೆಳ್ಳಿ, ಭಾರತ ಪುರುಷರ ಟೇಬಲ್ ಟೆನಿಸ್ ತಂಡ ಚಿನ್ನ ಹಾಗೂ ಭಾರತದ ಮಿಶ್ರ ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕವನ್ನು ಗೆದ್ದಿತು.

CWG 2022: ಲಾನ್ ಬೌಲ್ಸ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಲಿದೆ ಭಾರತ; ಈ ಲಾನ್ ಬೌಲ್ಸ್ ಎಂದರೇನು?CWG 2022: ಲಾನ್ ಬೌಲ್ಸ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಲಿದೆ ಭಾರತ; ಈ ಲಾನ್ ಬೌಲ್ಸ್ ಎಂದರೇನು?

ಹೀಗೆ ಐದನೇ ದಿನದಂದು ಉತ್ತಮ ಪ್ರದರ್ಶನ ನೀಡಿದ ಭಾರತ ಸದ್ಯ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಆರನೇ ದಿನದಂದು ಸಹ ಕೆಲ ಪದಕಗಳನ್ನು ತನ್ನದಾಗಿಸಿಕೊಳ್ಳುವ ಸನಿಹದಲ್ಲಿದೆ. ಅಂದಹಾಗೆ ಈ ಆರನೇ ದಿನದಂದು ಭಾರತದ ಯಾವ ಕ್ರೀಡಾಪಟುಗಳು ಯಾವ ಕ್ರೀಡೆಯಲ್ಲಿ ಸೆಣಸಾಡಲಿದ್ದಾರೆ ಎಂಬುದರ ಕುರಿತಾದ ವೇಳಾ ಪಟ್ಟಿ ಕೆಳಕಂಡಂತಿದೆ.

ಆರನೇ ದಿನದ ವೇಳಾಪಟ್ಟಿ ( ಆಗಸ್ಟ್ 3 )

ಆರನೇ ದಿನದ ವೇಳಾಪಟ್ಟಿ ( ಆಗಸ್ಟ್ 3 )

1. ಅಥ್ಲೆಟಿಕ್ಸ್:

ಮಹಿಳೆಯರ ಶಾಟ್‌ಪುಟ್ ಫೈನಲ್ - ಮನ್‌ಪ್ರೀತ್ ಕೌರ್ (ಮಧ್ಯಾಹ್ನ 12.35 AM ಗುರುವಾರ)

ಪುರುಷರ ಹೈಜಂಪ್ ಫೈನಲ್ - ತೇಜಸ್ವಿನ್ ಶಂಕರ್ (ರಾತ್ರಿ 11.30)

2. ಬಾಕ್ಸಿಂಗ್:

45 ಕೆಜಿ-48 ಕೆಜಿ: ಕ್ವಾರ್ಟರ್‌ಫೈನಲ್ - ನಿತು ಗಂಗಾಸ್ (ಸಂಜೆ 4.45)

48-50 ಕೆಜಿ (ಲೈಟ್ ಫ್ಲೈವೇಟ್) - ಕ್ವಾರ್ಟರ್ ಫೈನಲ್ - ನಿಖತ್ ಜಹ್ರೀನ್ (11.15 PM)

66-70 ಕೆಜಿ (ಲೈಟ್ ಮಿಡಲ್ ವೇಟ್) - ಕ್ವಾರ್ಟರ್ ಫೈನಲ್ - ಲೊವ್ಲಿನಾ ಬೊರ್ಗೊಹೈನ್ (12.45 AM ಗುರುವಾರ)

54-57 ಕೆಜಿ (ಫೆದರ್ ವೇಟ್) ಕ್ವಾರ್ಟರ್ ಫೈನಲ್ - ಹುಸ್ಸಾಮ್ ಉದ್ದೀನ್ ಮೊಹಮ್ಮದ್ (ಸಂಜೆ 5.45)

75-80 ಕೆಜಿ (ಲೈಟ್ ಹೆವಿವೇಟ್) - ಕ್ವಾರ್ಟರ್ ಫೈನಲ್: ಆಶಿಶ್ ಕುಮಾರ್ ( 2.00 AM ಬುಧವಾರ)

3. ಕ್ರಿಕೆಟ್:

ಮಹಿಳೆಯರ T20: ಭಾರತ vs ಬಾರ್ಬಡೋಸ್ (ರಾತ್ರಿ 10.30)

4. ಹಾಕಿ:

ಮಹಿಳೆಯರ ಪೂಲ್ ಎ - ಭಾರತ ವಿರುದ್ಧ ಕೆನಡಾ (ಮಧ್ಯಾಹ್ನ 3.30)

ಪುರುಷರ ಪೂಲ್ ಬಿ - ಭಾರತ ವಿರುದ್ಧ ಕೆನಡಾ (ಸಂಜೆ 6.30)

5. ಜುಡೋ:

ಮಹಿಳೆಯರ 78 ಕೆಜಿ ಕ್ವಾರ್ಟರ್‌ಫೈನಲ್: ತುಲಿಕಾ ಮಾನ್, ಮಧ್ಯಾಹ್ನ 2.30

ಪುರುಷರ 100 ಕೆಜಿ ಸುತ್ತಿನ 16: ದೀಪಕ್ ದೇಸ್ವಾಲ್, ಮಧ್ಯಾಹ್ನ 2.30

6. ಲಾನ್ ಬೌಲ್ಸ್:

ಪುರುಷರ ಸಿಂಗಲ್ಸ್: ಮೃದುಲ್ ಬೊರ್ಗೊಹೈನ್ - ಮಧ್ಯಾಹ್ನ 1 ಮತ್ತು ಸಂಜೆ 4

ಮಹಿಳೆಯರ ಜೋಡಿ: ಭಾರತ vs ನಿಯು - ಮಧ್ಯಾಹ್ನ 1 ಮತ್ತು ಸಂಜೆ 4

ಗಂಟೆಗೆ ಪುರುಷರ ಬೌಂಡರಿ: ಭಾರತ vs ಕುಕ್ ಐಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ರಾತ್ರಿ 7.30 ಮತ್ತು ರಾತ್ರಿ 10.30

ಮಹಿಳೆಯರ ಟ್ರಿಪಲ್: ಭಾರತ vs ನಿಯು, ರಾತ್ರಿ 7.30

7. ಸ್ಕ್ವ್ಯಾಷ್ ಮಿಶ್ರ ಡಬಲ್ಸ್ 32ನೇ ಸುತ್ತು: ಭಾರತ vs ಶ್ರೀಲಂಕಾ (ಮಧ್ಯಾಹ್ನ 3.30)

8. ಪ್ಯಾರಾ ಟೇಬಲ್ ಟೆನಿಸ್:

ಭಾವಿನಾ ಪಟೇಲ್ vs ಡೇನಿಯಲಾ ಡಿ ಟೊರೊ (ಮಹಿಳಾ ಸಿಂಗಲ್ಸ್ 3-5) - 3:10 PM

ಸೋನಲ್‌ಬೆನ್ ಪಟೇಲ್ vs ಸ್ಯೂ ಬೈಲಿ (ಮಹಿಳಾ ಸಿಂಗಲ್ಸ್ 3-5) - 3:10 PM

ಬೇಬಿ ಸಹನಾ ರವಿ vs ಫೇಯ್ತ್ ಒಬಾಜುಯೆ (ಮಹಿಳೆಯರ ಸಿಂಗಲ್ಸ್ 6-10) - 3:10 PM

ರಾಜ್ ಅಲಗರ್ vs ಜಾರ್ಜ್ ವಿಂಡಮ್ (ಪುರುಷರ ಸಿಂಗಲ್ಸ್ 3-5) - 4:55 PM

ಬೇಬಿ ಸಹನಾ ರವಿ vs ಗ್ಲೋರಿಯಾ ಗ್ರೇಸಿಯಾ ವಾಂಗ್ (ಮಹಿಳಾ ಸಿಂಗಲ್ಸ್ 6-10) - 9:40 PM


ಭಾವಿನಾ ಪಟೇಲ್ vs ಕ್ರಿಸ್ಟಿಯಾನಾ ಇಕ್ಪಿಯೋಯಿ (ಮಹಿಳಾ ಸಿಂಗಲ್ಸ್ 3-5) - 10:15 PM

ಸೋನಾಲ್ಬೆನ್ ಪಟೇಲ್ vs ಅಮಂಡಾ ಜೇನ್ ತ್ಚಾರ್ಕೆ (ಮಹಿಳೆಯರ ಸಿಂಗಲ್ 3-5) - 10:15 PM

ರಾಜ್ ಅಲಗರ್ vs ಇಸೌ ಒಗುಂಕುನ್ಲೆ (ಪುರುಷರ ಸಿಂಗಲ್ಸ್ 3-5) - 12 AM (ಬುಧವಾರ)

9. ವೇಟ್ ಲಿಫ್ಟಿಂಗ್

ಪುರುಷರ 109 ಕೆಜಿ - ಲವ್‌ಪ್ರೀತ್ ಸಿಂಗ್ (ಮಧ್ಯಾಹ್ನ 2.00)

ಮಹಿಳೆಯರ 87 ಕೆಜಿ - ಪೂರ್ಣಿಮಾ ಪಾಂಡೆ (ಸಂಜೆ 6.30)

ಪುರುಷರ 109+ಕೆಜಿ - ಗುರ್ದೀಪ್ ಸಿಂಗ್ (11 PM).

ಪಾಕ್ ಸೋಲಿಸಿದ ಬಾರ್ಬಾಡೋಸ್ ವಿರುದ್ಧ ಭಾರತದ ಸೆಣಸಾಟ

ಪಾಕ್ ಸೋಲಿಸಿದ ಬಾರ್ಬಾಡೋಸ್ ವಿರುದ್ಧ ಭಾರತದ ಸೆಣಸಾಟ

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಬಾರ್ಬಡೋಸ್ ವನಿತೆಯರ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿ ಸೋಲುಣಿಸಿತ್ತು. ಇದೀಗ ಈ ತಂಡ ತನ್ನ ದ್ವಿತೀಯ ಅಂತಾರಾಷ್ಟ್ರೀಯ ಪಂದ್ಯವನ್ನು ಇಂದು ( ಆಗಸ್ಟ್ 3 ) ಭಾರತ ವನಿತೆಯರ ತಂಡದ ವಿರುದ್ಧ ಆಡಲಿದೆ.

ಪದಕ ಗೆದ್ದವರು

ಪದಕ ಗೆದ್ದವರು

ಇನ್ನು ಐದನೇ ದಿನದ ಮುಕ್ತಾಯದ ಹಂತಕ್ಕೆ ಭಾರತದ ಯಾವೆಲ್ಲಾ ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.

• ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

• ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

• ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

• ಭಾರತೀಯ ವನಿತೆಯರ ತಂಡ - ಲಾನ್ ಬೌಲ್ಸ್ ವಿಭಾಗದಲ್ಲಿ ಚಿನ್ನದ ಪದಕ

• ಭಾರತ ಪುರುಷರ ತಂಡ - ಟೇಬಲ್ ಟೆನಿಸ್ ವಿಭಾಗದಲ್ಲಿ ಚಿನ್ನದ ಪದಕ

• ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ

• ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ

• ವಿಜಯ್ ಕುಮಾರ್ ಯಾದವ್ - ಪುರುಷರ ವಿಭಾಗದಲ್ಲಿ ಕಂಚಿನ ಪದಕ

• ಹರ್ ಜಿಂದರ್ ಕೌರ್ - ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ

• ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ

• ಸುಶೀಲಾದೇವಿ - ಜುಡೋ ವಿಭಾಗದಲ್ಲಿ ಬೆಳ್ಳಿ ಪದಕ

• ವಿಕಾಸ್ ಠಾಕೂರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ

• ಭಾರತ ಮಿಶ್ರ ತಂಡ - ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ

Story first published: Wednesday, August 3, 2022, 11:09 [IST]
Other articles published on Aug 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X