ಕಾಮನ್‌ವೆಲ್ತ್ ಗೇಮ್ಸ್: ಚಿನ್ನದ ಬೇಟೆಯಾಡಿದ ಶ್ರೇಯಸಿ

Posted By:
CWG 2018: Shreyasi Singh brings gold for India in double trap

ಬೆಂಗಳೂರು, ಏಪ್ರಿಲ್ 11: ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಶೂಟರ್ ಶ್ರೇಯಸಿ ಸಿಂಗ್ ಮಹಿಳೆಯರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಒಂದು ಹಂತದಲ್ಲಿ ಆಸ್ಟ್ರೇಲಿಯಾದ ಎಮ್ಮಾ ಕಾಕ್ಸ್ ಮತ್ತು ಶ್ರೇಯಸಿ ತಲಾ96 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಬಳಿಕ, ಇಬ್ಬರಿಗೂ ಎರಡು ಅವಕಾಶಗಳನ್ನು ನೀಡಲಾಯಿತು.

ಮಹಿಳೆಯರ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಹೀನಾ ಸಿಧು

ಇದರಲ್ಲಿ ಗುರಿತಪ್ಪದ ಶ್ರೇಯಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಶ್ರೇಯಸಿ ಎರಡೂ ಅವಕಾಶಗಳಲ್ಲಿ ಗುರಿಯನ್ನು ಹೊಡೆಯುವುದರಲ್ಲಿ ಯಶಸ್ವಿಯಾದರೆ, ಎಮ್ಮಾ, ಎರಡನೆಯ ಅವಕಾಶದಲ್ಲಿ ಗುರಿ ತಪ್ಪಿದರು.

ಕೊನೆಯ ಸುತ್ತಿನಲ್ಲಿ ಇತರೆ ಎಲ್ಲ 25 ಸ್ಪರ್ಧಿಗಳಿಗಿಂತ ಮುಂದಿದ್ದ ಶ್ರೇಯಸಿ, ಬೆಳ್ಳಿಯ ಪದಕ ಜಯಿಸುವುದು ಖಚಿತವಾಗಿತ್ತು.

2014ರಲ್ಲಿ ಗ್ಲಾಸ್ಕೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಇದೇ ವಿಭಾಗದಲ್ಲಿ ಶ್ರೇಯಸಿ ಬೆಳ್ಳಿ ಪದಕ ಜಯಿಸಿದ್ದರು. ದೆಹಲಿ ವಿಶ್ವವಿದ್ಯಾಲಯದ ಹನ್ಸ್‌ರಾಜ್ ಕಾಲೇಜಿನ ಪದವೀಧರೆಯಾದ 26 ವರ್ಷದ ಶ್ರೇಯಸಿ, ಕಳೆದ ವರ್ಷ ದೆಹಲಿಯಲ್ಲಿ ನಡೆದ 61ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದರು.

ಪುರುಷರ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಅಂಕುರ್ ಮಿತ್ತಲ್ ಕಂಚಿನ ಪದಕ ಗೆದ್ದುಕೊಂಡರು. 50 ಸುತ್ತುಗಳ ಬಳಿಕ ಭಾರತದ ಮತ್ತೊಬ್ಬ ಶೂಟರ್ ಮೊಹಮದ್ ಅಷದ್ ಸ್ಪರ್ಧೆಯಿಂದ ಹೊರಬಿದ್ದರು.

ಇದಕ್ಕೂ ಮೊದಲು ಓಂ ಪ್ರಕಾಶ್‌ ಮಿತ್ತರ್‌ವಾಲ್ ಪುರುಷರ 50 ಮೀಟರ್ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು.

Story first published: Wednesday, April 11, 2018, 13:37 [IST]
Other articles published on Apr 11, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ