ಕಾಮನ್‌ವೆಲ್ತ್ ಗೇಮ್ಸ್: ಭಾರತೀಯ ಕ್ರೀಡಾಪಟುಗಳಲ್ಲಿ IOA ವಿಶೇಷ ಮನವಿ

ಕಾಮನ್‌ವೆಲ್ತ್ ಗೇಮ್ಸ್ 2022ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಭಾರತದ ಬಹುತೇಕ ಕ್ರೀಡಾಪಟುಗಳು ಈ ಕ್ರೀಡಾಕೂಟ ನಡೆಯುವ ಬರ್ಮಿಂಗ್‌ಹ್ಯಾಮ್‌ಗೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಒಲಿಂಪಿಕ್ಸ್ ಅಸೊಸಿಯೇಶನ್(IOA) ಭಾರತದ ಕ್ರೀಡಾಪಟುಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ. ಕೊರೊನಾವೈರಸ್‌ನ ಆತಂಕ ಇರುವ ಕಾರಣದಿಂದಾಗಿ ಭಾರತೀಯ ಕ್ರೀಡಾಪಟುಗಳು ಸಾರ್ವಜನಿಕ ಸ್ಥಳಗಳನ್ನು ಸಾಧ್ಯವಾದಷ್ಟು ದೂರವಿರುವಂತೆ ಮನವಿ ಮಾಡಿದೆ. ಅಲ್ಲದೆ ಸಾಧ್ಯವಾದಷ್ಟು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 ಕ್ರೀಡಾಕೂಟ ಜುಲೈ 28ರ ಗುರುವಾರದಂದು ಆರಂಭವಾಗಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕೆಂದು ಭಾರತೀಯ ಒಲಿಂಪಿಕ್ಸ್ ಅಸೊಸಿಯೇಶನ್ ಹೇಳಿದೆ.

ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?ಭಾರತ ಮತ್ತು ವಿಂಡೀಸ್ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಪ್ರಕಟಣೆ ಹೊರಡಿಸಿದ IOA

ಪ್ರಕಟಣೆ ಹೊರಡಿಸಿದ IOA

ಈ ಬಗ್ಗೆ ಭಾರತೀಯ ಒಲಿಂಪಿಕ್ಸ್ ಅಸೊಸಿಯೇಶನ್ ಪ್ರಕಟಣೆಯೊಂದನ್ನು ಹೊರಡಿಸಿದೆ. "ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬರ್ಮಿಂಗ್‌ಹ್ಯಾಮ್ 2022 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಕೋವಿಡ್-19 ಆತಂಕದಿಂದಾಗಿ ಎಚ್ಚರಿಕೆ ವಹಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯದಂತೆ ವಿನಂತಿಸಿದೆ. ಇದು ಆಟಗಾರರ ಆರೋಗ್ಯ ಮತ್ತು ಭಾಗವಹಿಸುವಿಕೆಗೆ ಅಪಾಯವನ್ನುಂಟು ಮಾಡುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುನ್ನೆಚ್ಚರಿಕಾ ಕ್ರಮ

ಮುನ್ನೆಚ್ಚರಿಕಾ ಕ್ರಮ

ಕಾಮನ್‌ವೆಲ್ತ್ ಗೇಮ್ಸ್‌ನ ಆಯೋಜನಾ ಸಮಿತಿ ಕ್ರೀಡಾಪಟುಗಳನ್ನು ಕ್ರೀಡೆ ಮತ್ತು ಕ್ರೀಡಾಕೂಟ ನಡೆಯುವ ಸ್ಥಳಗಳ ಆಧಾರದ ಮೇಲೆ ಪ್ರತ್ಯೇಕಿಸಿದೆ. ಇನ್ನು ಕ್ರೀಡಾಕೂಟದ ನಿಮಯಗಳ ಪ್ರಕಾರ ಪ್ರತಿಯೊಬ್ಬ ಕ್ರೀಡಾಪಟು ಕೂಡ ಯುನೈಟೆಡ್ ಕಿಂಗ್‌ಡಮ್‌ಗೆ ಬಂದಿಳಿಯುವ 72 ಗಂಟೆಗಳ ಮುನ್ನ ಕೊರೊನಾವೈರಸ್ ಹಿನ್ನೆಲೆಯಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

IND vs WI: ಸರಣಿ ಗೆದ್ದ ಬಳಿಕ ಪಾರ್ಟಿ ಮೂಡ್‌ನಲ್ಲಿ ಟೀಮ್ ಇಂಡಿಯಾ; ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಪತ್ನಿ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಳಗ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಳಗ

ಇನ್ನು ಈ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗಿಯಾಗುವ ಬಲಿಷ್ಠ ಆಟಗಾರರ ಪಡೆಯನ್ನು ಭಾರತೀಯ ಕಾಮನ್‌ವೆಲ್ತ್ ಅಸೊಸಿಯೇಶನ್ ಪ್ರಕಟಿಸಿತ್ತು. 322 ಸದಸ್ಯರ ಬೃಹತ್ ಪಡೆಯನ್ನು ಐಒಸಿ ಹೆಸರಿಸಿದ್ದು ಇದರಲ್ಲಿ 21 ಅಥ್ಲೀಟ್‌ಗಳು ಹಾಗೂ 107 ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಗಳು ಸೇರಿದ್ದಾರೆ. ಇನ್ನು ಭಾರತೀಯ ಕ್ರೀಡಾಪಟುಗಳ ತಂಡ ಈ ಬಾರಿ ಕಳೆದ ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಉತ್ತಮ ಸ್ಆಧನೆ ಮಾಡುವ ನಿರೀಕ್ಷೆ ಮೂಡಿಸಿದೆ. 2018ರಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರ ತಂಡ ಒಟ್ಟು ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ 2 ಚಿನ್ನ 9 ಬೆಳ್ಳಿ ಹಾಗೂ 20 ಕಂಚಿನ ಪದಕಗಳು ಸೇರಿತ್ತು. ಇನ್ನು ಕಾಮನ್‌ವೆಲ್ತ್ ಗೇಮ್ಸ್‌ನ ಇತಿಹಾಸದಲ್ಲಿ ಭಾರತ 2010ರಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಸಾಧನೆ ಮಾಡಿತ್ತು. 39 ಚಿನ್ನ, 26 ಬೆಳ್ಳಿ ಹಾಗೂ 36 ಕಂಚಿನ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು.

ಮೊದಲ ಬಾರಿಗೆ ಮಹಿಳಾ ಕ್ರಿಕೆಟ್

ಮೊದಲ ಬಾರಿಗೆ ಮಹಿಳಾ ಕ್ರಿಕೆಟ್

ಇನ್ನು ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಅವಕಾಶ ಪಡೆದುಕೊಂಡಿದೆ. ಹೀಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಕೂಡ ಈ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿದೆ. ಬಲಿಷ್ಠ ಆಟಗಾರ್ತಿಯರನ್ನು ಒಳಗೊಂಡಿರುವ ಭಾರತ ತಂಡ ಚೊಚ್ಚಲ ಅವಕಾಶದಲ್ಲಿ ಪದಕ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕಣಕ್ಕಿಳಿಯಲಿದೆ.
ಟೀಮ್ ಇಂಡಿಯಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಎಸ್. ಮೇಘನಾ, ತನಿಯಾ ಸಪ್ನಾ ಭಾಟಿಯಾ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 26, 2022, 21:50 [IST]
Other articles published on Jul 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X