ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ 2021: ಏಷ್ಯನ್ ದಾಖಲೆ ಮುರಿದರೂ ಫೈನಲ್‌ಗೆ ವಿಫಲವಾದ ಭಾರತೀಯ ರಿಲೇ ತಂಡ

Indias 4x400M relay squad miss out final berth despite set new Asian record

ಟೋಕಿಯೋ, ಆಗಸ್ಟ್ 6: ಭಾರತದ ಪುರುಷರ ರಿಲೇ 4x400 ಮೀ ತಂಡ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮಹಮ್ಮದ್ ಅನಸ್, ನೋವಾ ನಿರ್ಮಲ್ ಟಾಮ್ ಅರೋಕಿಯಾ ರಾಜೀವ್ ಮತ್ತು ಮತ್ತು ಅಮೋಜ್ ಜೇಕಬ್ ಅವರನ್ನೊಳಗೊಂಡ ಭಾರತೀಯ ತಂಡ ಟೋಕಿಯೋ ಒಲಿಂಪಿಕ್ಸ್‌ 2020 ಕ್ರೀಡಾಕೂಟದ ಹೀಟ್ 2ನಲ್ಲಿ ನಾಲ್ಕನೇ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿದೆ. 3:00:25 ನಿಮಿಷಗಳಲ್ಲಿ ಗುರಿಯನ್ನು ತಲುಪುವ ಮೂಲಕ ಏಷ್ಯಾದ ಹೊಸ ದಾಖಲೆ ಬರೆದಿದೆ.

ಇದಕ್ಕೂ ಮುನ್ನ ಏಷ್ಯನ್ ದಾಖಲೆ 3:00.56 ಅವಧಿಯಲ್ಲಿತ್ತು. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಈ ದಾಖಲೆ ಬರೆದಿದ್ದರು. ಆದರೆ ದುರದೃಷ್ಟವಶಾತ್ ಭಾರತೀಯ ತಂಡದ ಈ ಪ್ರಯತ್ನ ಫೈನಲ್‌ಗೆ ಅರ್ಹತೆಯನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ.

ಭಾರತೀಯ ರಿಲೇ ಆಟಗಾರರ ತಂಡ ಟೋಕಿಯೊ ಒಲಿಂಪಿಕ್ಸ್‌ನ 4x400M ಪುರುಷರ ರಿಲೇ ಸ್ಪರ್ಧೆಯಲ್ಲಿ ಇಂಟರ್ ಸ್ಟೇಟ್ ಕೂಟದ ಪ್ರದರ್ಶನಕ್ಕಿಂತಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಫೈನಲ್ ಹಂತಕ್ಕೇರುವ ಕನಸು ಇಡೇರಲಿಲ್ಲ. ಹೀಗಾಗಿ ಭಾರತೀಯ ಪುರುಷರ ರಿಲೇ ಸ್ಪರ್ಧೆ ಅಂತ್ಯವಾಗಿದೆ. ಕೇವಲ ಒಂದು ಸ್ಥಾನದಿಂದ ಭಾರತ ಫೈನಲ್‌ ಸ್ಪರ್ಧೆಯಿಂದ ಹೊರಬಿದ್ದಿದೆ.

ಪೋಲ್ಯಾಂಡ್ ಈ ಆವೃತ್ತಿಯಲ್ಲಿನ ಅತ್ಯುತ್ತಮ ಪ್ರದರ್ಶನದೊಂದಿಗೆ ಮೊದಲ ಸ್ಥಾನಿಯಾಗಿ ಸ್ಪರ್ಧೆಯನ್ನು ಮುಗಿಸಿತು. 2:55:55 ಅವಧಿಯಲ್ಲಿ ಪೊಲ್ಯಾಂಡ್ ಗುರಿ ತಲುಪಿತ್ತು. ಎರಡನೇ ಸ್ಥಾನದಲ್ಲಿ ಜಮೈಕಾ ಇದ್ದು 2:59:29 ಅವಧಿಯಲ್ಲಿಯಲ್ಲಿ ಗುರಿ ತಲುಪಿದೆ. ಮೂರನೇ ಸ್ಥಾನದಲ್ಲಿದ್ದು ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡ ಬೆಲ್ಜಿಯಂ ತಂಡ 2:59:37ರ ಅವಧಿಯೊಂದಿಗೆ ಸ್ಪರ್ಧೆಯನ್ನು ಮುಗಿಸಿದೆ. ಪ್ರತೀ ಹೀಟ್‌ನಲ್ಲಿರುವ ಅಗ್ರ ಮೂರು ತಂಡಗಳು ಫೈನಲ್‌ಗೆ ಅರ್ಹತೆಯನ್ನು ಸಂಪಾದಿಸುತ್ತದೆ. ಹೀಗಾಗಿ ಭಾರತಕ್ಕೆ ಫೈನಲ್ ಪ್ರವೇಶ ಗಿಟ್ಟಿಸಿಕೊಳ್ಳಲು ಅಸಾಧ್ಯವಾಗಿದೆ.

ಟೋಕಿಯೋ ಒಲಿಂಪಿಕ್ಸ್: ದ್ವಿತೀಯ ಸ್ಥಾನದಲ್ಲಿ ಕನ್ನಡತಿ ಗಾಲ್ಫರ್ ಅದಿತಿ ಅಶೋಕ್‌ಟೋಕಿಯೋ ಒಲಿಂಪಿಕ್ಸ್: ದ್ವಿತೀಯ ಸ್ಥಾನದಲ್ಲಿ ಕನ್ನಡತಿ ಗಾಲ್ಫರ್ ಅದಿತಿ ಅಶೋಕ್‌

ಎರಡು ಹೀಟ್‌ನಲ್ಲಿ ತಲಾ ಅಗ್ರ ಮೂರು ತಂಡಗಳು ಫೈನಲ್‌ಗೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಅಲ್ಲದೆ ಉಳಿದ ತಂಡಗಳಲ್ಲಿ ಅಗ್ರ ಎರಡು ತಂಡಗಳು ಕೂಡ ಫೈನಲ್ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಹೀಗಾಗಿ ಒಟ್ಟಾರೆ ಎಂಟನೇ ಸ್ಥಾನದಲ್ಲಿದ್ದರೆ ಭಾರತ ಫೈನಲ್‌ಗೆ ಅರ್ಹತೆಯನ್ನು ಪಡೆಯುತ್ತಿತ್ತು. ಆದರೆ ಭಾರತ 9ನೇ ಸ್ಥಾನ ಪಡೆದುಕೊಂಡ ಕಾರಣ ಫೈಣಲ್‌ಗೆ ಅರ್ಹತೆ ಸಂಪಾದಿಸಲು ಸಾಧ್ಯವಾಗಲಿಲ್ಲ.

ಇಂದು ಬೆಳಿಗ್ಗೆ ನಡೆದ ಮೊದಲ ಹೀಟ್‌ನ ಸ್ಪರ್ಧೆಯಲ್ಲಿ ಮೂರು ತಂಡಗಳು ಮೂರು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ್ದವು. ಇದರಿಂದಾಗಿ ಹೀಟ್ ಎರಡನೇ ಹೀಟ್‌ನಲ್ಲಿದ್ದ ಉಳಿದ ಎಲ್ಲಾ ತಂಡಗಳ ಮೇಲೆಯೂ ಒತ್ತಡ ಬಿದ್ದಿತ್ತು.

ಭಾರತ ಶುಕ್ರವಾರ ಯಾವುದೇ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಕೆಲ ಕ್ರೀಡಾಪಟುಗಳು ನೀಡಿದ ಪ್ರದರ್ಶನ ಭಾರತದ ಪಾಲಿಗೆ ಆಶಾದಾಯಕವಾಗಿದೆ. ಶನಿವಾರದ ಸ್ಪರ್ಧೆಯಲ್ಲಿ ಭಾರತ ಪ್ರಮುಖವಾಗಿ ಮೂರು ಸ್ಪರ್ಧೆಗಳಲ್ಲಿ ಪದಕವನ್ನು ನಿರೀಕ್ಷಿಸುತ್ತಿದೆ. ಶನಿವಾರ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಛೋಪ್ರ ಗಾಲ್ಫರ್ ಅದಿತಿ ಅಶೋಕ್ ಮತ್ತು ಭಜರಂಗ್ ಪುನಿಯಾ ಪದಕದ ಕನಸನ್ನು ಜೀವಂತವಾಗಿರಿಸಿದ್ದಾರೆ.

ಇನ್ನು ಒಟ್ಟಾರೆ ಸ್ಪರ್ಧೆಗಳಲ್ಲಿ ಶುಕ್ರವಾರ ಭಾರತ ಯಾವುದೇ ಪದಕ ಗೆಲ್ಲಲು ವಿಫಲವಾಗಿ ನಿರಾಸೆಯನ್ನು ಅನುಭವಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪದಕ ಗೆಲ್ಲುವ ಕನಸು ಕಾಣಿತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಪ್ಲೇಆಫ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಲು ವಿಫಲವಾಯಿತು. ಪುರುಷರ ಹಾಕಿ ತಂಡ ಗುರುವಾರ ಕಂಚಿನ ಪದಕ ಗೆದ್ದು ಬೀಗಿದ್ದ ಬಳಿಕ ಭಾರತೀಯ ವನಿತೆಯರ ತಂಡವೂ ಅದೇ ಫಲಿತಾಂಶವನ್ನು ಪುನರಾವರ್ತಿಸುವ ನಿರೀಕ್ಷೆಯಿತ್ತು. ಆದರೆ ಶಿಕ್ರವಾರ ಬೆಳಿಗ್ಗೆ ಏಳುಗಂಟೆಗೆ ಆರಂಭವಾದ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ನಿರಾಸೆ ಅನುಭವಿಸಿತು. 3-4 ಗೋಲುಗಳ ಅಂತರದಿಂದ ಭಾರತ ಗ್ರೇಟ್ ಬ್ರಿಟನ್‌ಗೆ ಶರಣಾಯಿತು.

Story first published: Friday, August 6, 2021, 21:18 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X