ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ISSF ವರ್ಲ್ಡ್‌ಕಪ್: 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಬಾಚಿಕೊಂಡ ಭಾರತ ಪುರುಷರ ತಂಡ

ISSF World Cup: India win silver in mens 25m Rapid Fire Pistol team event

ಐಎಸ್‌ಎಸ್‌ ವಿಶ್ವಕಪ್‌ನಲ್ಲಿ ಭಾರತದ ಪುರುಷರ ತಂಡ ಮತ್ತೊಂದು ಪದಕವನ್ನು ಗೆದ್ದುಕೊಂಡಿದೆ. 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಪುರುಷರ ತಂಡ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದೆ. ದೆಹಲಿಯಲ್ಲಿ ನಡೆಯುತ್ತಿರುವ ಈ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ.

ಭಾನುವಾರ ನಡೆದ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿಯುಎಸ್‌ಎಯ ಕೈತ್ ಸ್ಯಾಂಡರ್ಸನ್, ಜ್ಯಾಕ್ ಹಾಬ್ಸನ್ ಲೆವೆರೆಟ್ ಮತ್ತು ಹೆನ್ರಿ ಟರ್ನರ್ ಲೆವೆರೆಟ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 10-2 ಅಂತರದಿಂದ ಗೆಲುವು ಸಾಧಿಸಿದೆ.

ISSF World Cup: ವಿಜಯ್‌ವೀರ್‌-ತೇಜಸ್ವಿನಿಗೆ ಜೋಡಿಗೆ ಚಿನ್ನದ ಪದಕISSF World Cup: ವಿಜಯ್‌ವೀರ್‌-ತೇಜಸ್ವಿನಿಗೆ ಜೋಡಿಗೆ ಚಿನ್ನದ ಪದಕ

ಕ್ವಾಲಿಫಿಕೇಶನ್ 2ರಲ್ಲಿ ಭಾರತದ ಗುರ್‌ಪ್ರೀತ್, ವಿಜಯ್‌ವೀರ್ ಮತ್ತು ಆದರ್ಶ್ ಎರಡನೇ ಸ್ಥಾನವನ್ನು ಪಡೆದುಕೊಂಡರು. ಮೂರು ಶೂಟಿಂಗ್‌ನಲ್ಲಿ ಈ ಶೂಟರ್‌ಗಳು ಕ್ರಮವಾಗಿ 184, 178 ಮತ್ತು 190 ಅಂಕಗಳನ್ನು ಗಳಿಸಿ ಒಟ್ಟು 552 ಅಂಕಗಳನ್ನು ಗಳಿಸಿಕೊಂಡರು. ಆದರೆ ಅಮೆರಿಕಾದ ಶೂಟರ್‌ಗಳು 571 ಅಂಕಗಳನ್ನು ಪಡೆದುಕೊಂಡಿದ್ದರು.

ಕ್ವಾಲಿಫಿಕೇಶನ್ ಸುತ್ತಿನಲ್ಲಿ ಪ್ರವಾಸಿ ಯುಎಸ್‌ಎ ತಂಡ 868 ಅಂಕ ಗಳಿಸಿದ್ದರೆ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಭಾರತೀಯ ತಂಡ 857 ಅಂಕ ಗಳಿಸಿತ್ತು.

ISSF World Cup: 25 ಮೀ. ಪಿಸ್ತೂಲ್‌ನಲ್ಲಿ ಭಾರತದ ವನಿತೆಯರಿಗೆ ಚಿನ್ನISSF World Cup: 25 ಮೀ. ಪಿಸ್ತೂಲ್‌ನಲ್ಲಿ ಭಾರತದ ವನಿತೆಯರಿಗೆ ಚಿನ್ನ

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ಈ ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು ಪದಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿದೆ. 13 ಚಿನ್ನ, 9 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಭಾರತೀಯ ಶೂಟರ್‌ಗಳು ಗೆದ್ದಿದ್ದಾರೆ. ಒಟ್ಟಾರೆ 28 ಪದಕ ಭಾರತದ ಪಾಲಾಗಿದ್ದು ಅಗ್ರ ಸ್ಥಾನದಲ್ಲಿದೆ.

Story first published: Sunday, March 28, 2021, 14:42 [IST]
Other articles published on Mar 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X