ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2026ರ ಕಾಮನ್‌ವೆಲ್ತ್ ಗೇಮ್ಸ್: ಕುಸ್ತಿಯನ್ನು ಕೈ ಬಿಟ್ಟಿದ್ದಕ್ಕಾಗಿ ಭಜರಂಗ್‌ ಪೂನಿಯಾ ಕಿಡಿ

It isn’t proper decision to Being Dropped wrestling from 2026 CWG : Bajrung Punia

2026ರಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್್ ನಿಂದ ಕುಸ್ತಿಯನ್ನು ಕೈಬಿಟ್ಟಿರುವ ನಿರ್ಧಾರ ಸರಿಯಲ್ಲ ಎಂದು 2018ರ ಕಾಮನ್‌ವೆಲ್ತ್ ಗೇಮ್ಸ್್ನ ಚಿನ್ನದ ಪದಕ ವಿಜೇತ ಭಜರಂಗ್‌ ಪೂನಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್್ನ ಆರಂಭಿಕ ಕ್ರೀಡಾ ಕಾರ್ಯಕ್ರಮ ಪಟ್ಟಿಯಿಂದ ಬಿಲ್ಲುಗಾರಿಕೆ, ಶೂಟಿಂಗ್ ಮತ್ತು ಕುಸ್ತಿಯಂತಹ ಕ್ರೀಡೆಗಳನ್ನ ಕೈ ಬಿಡಲಾಗಿರುವುದರಿಂದ ಭಾರತೀಯ ಕ್ರೀಡಾಳುಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಫೆಡರೇಶನ್ ಕ್ರೀಡೆಗಳ ಆಯೋಜಿಸುವ ಕುರಿತು ನಿರ್ಧರಿಸುತ್ತದೆ. ಆದ್ರೆ ಕುಸ್ತಿ, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯನ್ನು ಹೊರಗಿಡಲು ತೆಗೆದುಕೊಂಡ ನಿರ್ಧಾರವು ತಪ್ಪಾಗಿದೆ. ಈ ಕುರಿತು ಕುಸ್ತಿ ಒಕ್ಕೂಟವು ಸಹ ಮನವಿ ಮಾಡಬೇಕು, ಜೊತೆಗೆ ಸಹ ಆಟಗಾರರು ಈ ನಿರ್ಧಾರವನ್ನು ಖಂಡಿಸಬೇಕು ಎಂದು ಪೂನಿಯಾ ಹೇಳಿದ್ದಾರೆ.

ಭಾರತವು 2018 ರಲ್ಲಿ ಏಳು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿತು. ಕುಸ್ತಿ ವಿಭಾಗದಲ್ಲಿ ಭಾರತ ಐದು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 12 ಪದಕಗಳನ್ನು ಗೆದ್ದಿದೆ.

ಖೇಲ್ ರತ್ನ ಪ್ರಶಸ್ತಿ ವಿಜೇತ ಡಬಲ್ ಟ್ರ್ಯಾಪ್ ಶೂಟರ್ ರೊಂಜನ್ ಸಿಂಗ್ ಸೋಧಿ ಅವರು ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಟೀಕೆ ಮಾಡಿದ್ದು, ಯುರೋಪಿಯನ್ ದೇಶದ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ನಾವು ಕಾಮನ್‌ವೆಲ್ತ್‌ನಲ್ಲಿ ಚಿನ್ನ, ಬೆಳ್ಳಿ ಕೊನೆಗೆ ಕಂಚು ಪದಕಗಳನ್ನು ಗೆಲ್ಲುತ್ತಿದ್ದೇವೆ. ಆದ್ದರಿಂದ ಈ ಆಟಗಳನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದ್ದಜ, ಕ್ರೀಡಾ ಆಯೋಜಕರು ತೆಗೆದುಕೊಂಡಿರುವ ಕ್ರಮ ತಪ್ಪು ಎಂದು ಆರೋಪಿಸಿದ್ದಾರೆ. ಅಲ್ಲದೆ ಒಲಂಪಿಕ್ಸ್‌ನಲ್ಲಿಯೇ ಶೂಟಿಂಗ್ ಅವಕಾಶವಿದ್ದು, ಕಾಮನ್‌ವೇಲ್ತನಲ್ಲಿ ಯಾಕೆ ಹೊರಗಿಡಲಾಗಿದೆ ಎಂದು ಸೋಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

2022 ಜುಲೈನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್್ನಲ್ಲಿಯು ಸಹ ಕ್ರೀಡೆಯ ಭಾಗವಾಗಿ ಶೂಟಿಂಗ್‌ನ್ನು ಹೊರಗಿಡಲಾಗಿದೆ. ಶೂಟಿಂಗ್‌ನ್ನು ಸೇರಿಸುವುದು ತುಂಬಾ ದುಬಾರಿಯಾಗಲಿದೆ ಎನ್ನುವ ಕಾರಣಕ್ಕೆ ಆಯೋಜಿಸಲಾಗಿಲ್ಲ ಎಂದು ಹೇಳುವುದು ಸೂಕ್ತವಲ್ಲ ಎಂದು ರೊಂಜನ್ ಸಿಂಗ್ ಸೋಧಿ ಹೇಳಿದರು.

ಹರಿಯಾಣ ರಾಜ್ಯವು ಅಗ್ರ ಕುಸ್ತಿಪಟುಗಳನ್ನು ಉತ್ಪಾದಿಸುವ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕುಸ್ತಿ ಮತ್ತು ಬಿಲ್ಲುಗಾರಿಕೆಯು ಕಾಮನ್‌ವೆಲ್ತ್ ಗೇಮ್ಸ್ 2026 ರ ಭಾಗವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಕುರಿತು ಕಾಮನ್‌ವೆಲ್ತ್ ಗೇಮ್ಸ್ ಆಯೋಜಕ ಸಮಿತಿಯು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಹರಿಯಾಣ ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

RCB vs DC ಪಂದ್ಯದಲ್ಲಿ ಗೆಲುವು ಯಾರಿಗೆ | Oneindia Kannada

ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನಾ ಸಮಿತಿಯು ಆರಂಭಿಕ ಪಟ್ಟಿಯಲ್ಲಿ ಅಕ್ವಾಟಿಕ್ಸ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಬೀಚ್ ವಾಲಿಬಾಲ್, ಟಿ20 ಕ್ರಿಕೆಟ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಹಾಕಿ, ಲಾನ್ ಬೌಲ್‌ಗಳು, ನೆಟ್‌ಬಾಲ್, ರಗ್ಬಿ ಸೆವೆನ್ಸ್, ಸ್ಕ್ವಾಷ್, ಟೇಬಲ್ ಟೆನಿಸ್ ಮತ್ತು ಟ್ರೈಯಥ್ಲಾನ್. ಭಾರ ಎತ್ತುವಿಕೆ ಆಟಗಳನ್ನು ಸೇರಿಸಿದ್ದು, ಈ ವರ್ಷದ ನಂತರ ಇನ್ನೂ ಕೆಲವು ಆಟಗಳನ್ನ ಸೇರಿಸುವುದಾಗಿ ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬಿಲ್ಲುಗಾರಿಕೆ, ಶೂಟಿಂಗ್ ಮತ್ತು ಕುಸ್ತಿ ಅನ್ನು ಕ್ರೀಡಾಕೂಟದಲ್ಲಿ ಸೇರಿಸುವಂತೆ ಫೆಡರೇಶನ್‌ಗಳು ವಿನಂತಿಸಬಹುದು.

Story first published: Saturday, April 16, 2022, 14:53 [IST]
Other articles published on Apr 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X