ಟರ್ಕಿ ಗೆದ್ದು ಹ್ಯಾಮಿಲ್ಟನ್ ಈಗ ವಿಶ್ವ ಚಾಂಪಿಯನ್, ಶೂಮಿ ದಾಖಲೆ ಸಮ

ಅಂಕಾರಾ, ನ.15: ಮಳೆ ಕಾಟಕ್ಕೆ ತುತ್ತಾಗಿದ್ದ ಟರ್ಕಿಷ್ ಗ್ರ್ಯಾನ್ ಪ್ರೀ ಎಫ್1 ರೇಸ್ ಗೆಲ್ಲುವ ಮೂಲಕ ಬ್ರಿಟನ್ನಿನ ಲೂಯಿಸ್ ಹ್ಯಾಮಿಲ್ಟನ್ ಹೊಸ ದಾಖಲೆ ಬರೆದಿದ್ದಾರೆ. ಈ ಗೆಲುವಿನ ಮೂಲಕ 7ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಏಳು ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ಜರ್ಮನಿಯ ಮೈಕಲ್ ಶೂಮಾಕರ್ ಅವರ ವಿಶ್ವ ದಾಖಲೆ ಸಮಕ್ಕೆ ಹ್ಯಾಮಿಲ್ಟನ್ ನಿಂತಿದ್ದಾರೆ.

ಒಟ್ಟಾರೆ, ಎಫ್1 ವೃತ್ತಿ ಬದುಕಿನಲ್ಲಿ 94 ರೇಸ್ ನಲ್ಲಿ ಗೆಲುವು, 97 ಬಾರಿ ಪೋಲ್ ಸ್ಥಾನ, 163 ಬಾರಿ ಪೋಡಿಯಂ ಏರಿದ ದಾಖಲೆ ಬರೆದಿರುವ 35 ವರ್ಷ ವಯಸ್ಸಿನ ಲೂಯಿಸ್ ಹ್ಯಾಮಿಲ್ಟನ್ ಎಫ್1 ಇತಿಹಾಸದಲ್ಲಿ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಹ್ಯಾಮಿಲ್ಟನ್ ಗೆದ್ದಿರುವಷ್ಟು ಪೋಲ್ ಸ್ಥಾನ, ಗೆಲುವು, ಪೋಡಿಯಂ ಮುಕ್ತಾಯವನ್ನು ಬೇರೆ ಯಾವ ಚಾಲಕ ಇಲ್ಲಿ ತನಕ ಸಾಧಿಸಿಲ್ಲ.

ಸಾವನ್ನು ಗೆದ್ದ ಎಫ್ 1 ವೀರ ಮೈಕಲ್ ಶೂಮಾಕರ್

2008, 2014, 2015, 2017, 2019, 2020ರಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡಿರುವ ಹ್ಯಾಮಿಲ್ಟನ್ ಅವರು ಭಾನುವಾರದ ನಡೆದ ಟರ್ಕಿಷ್ ಗ್ರ್ಯಾನ್ ಪ್ರೀಯಲ್ಲಿ6ನೇ ಸ್ಥಾನದಿಂದ ರೇಸ್ ಆರಂಭಿಸಿದ್ದರು. ಆದರೆ, ಮರ್ಸಿಡೀಸ್ ಚಾಲಕ ಹ್ಯಾಮಿಲ್ಟನ್ ಚಾಕಚಕ್ಯತೆ, ಟೈರ್ ಬದಲಾಯಿಸುವ, ಪಿಟ್ ಸ್ಟಾಪ್ ತೆಗೆದುಕೊಳ್ಳುವ ಮೂಲಕ ತಂತ್ರಗಾರಿಕೆಯಲ್ಲಿ ಇತರೆ ಚಾಲಕರನ್ನು ಹಿಂದಿಕ್ಕಿದರು. ಸರ್ಗಿಯೋ ಪೆರೆಜ್ ಹಾಗೂ ಫೆರಾರಿಯ ಸೆಬಾಸ್ಟಿಯನ್ ವೆಟ್ಟಲ್ ಅವರನ್ನು ಹಿಂದಿಕ್ಕಿ ರೇಸ್ ಹಾಗೂ ಚಾಂಪಿಯನ್ ಶಿಪ್ ಎರಡನ್ನು ತಮ್ಮದಾಗಿಸಿಕೊಂಡರು. ಇದಲ್ಲದೆ ಮರ್ಸಿಡೀಸ್ ಕೂಡಾ 7ನೇ ಬಾರಿಗೆ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ.

1991 ರಿಂದ 2012ರ ಬ್ರೆಜಿಲ್ಲಿನ್ ಗ್ರ್ಯಾನ್ ಪ್ರೀ ತನಕ ಎಫ್ 1 ನಲ್ಲಿ ಜೋರ್ಡನ್, ಬೆನೆಟ್ಟನ್, ಫೆರಾರಿ ಹಾಗೂ ಮರ್ಸಿಡೀಸ್ ತಂಡದ ಪರ ಕಾರು ಚಲಿಸಿರುವ ಶೂಮಾಕರ್ ಅವರು 308 ರೇಸ್ ಗಳ ಪೈಕಿ 91 ರೇಸ್ ಗೆಲುವು ಸಾಧಿಸಿದ್ದು ದಾಖಲೆಯ ಏಳು ಬಾರಿ (1994,1995,2000,2001,2002,2003,2004) 155 ಬಾರಿ ಪೋಡಿಯಂ ಏರಿರುವ ಶೂಮಾಕರ್ 68 ಬಾರಿ ಪೋಲ್ ಸ್ಥಾನ, 77 ಬಾರಿ ಫಾಸ್ಟ್ ಲ್ಯಾಪ್ ದಾಖಲಿಸಿದ್ದಾರೆ. ಯುವ ಎಫ್ 1 ಚಾಲಕರಿಗೆ ರೋಲ್ ಮಾಡೆಲ್. ಫ್ರಾನ್ಸ್ ನಲ್ಲಿ 2013ರಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಅವರು ಆಯತಪ್ಪಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದರು. ಕೋಮಾಕ್ಕೆ ಜಾರಿದ್ದ ಶೂಮಾಕರ್ ಸಾವು ಗೆದ್ದಿದ್ದರು.

For Quick Alerts
ALLOW NOTIFICATIONS
For Daily Alerts
Story first published: Sunday, November 15, 2020, 19:20 [IST]
Other articles published on Nov 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X