ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹೆತ್ತವರ ಅಂತಾರಾಷ್ಟ್ರೀಯ ಪ್ರವಾಸಕ್ಕೆ ನಿಷೇಧ ಹೇರಿದ ಮನು ಭಾಕರ್

Manu Bhaker Bans Her Parents From Foreign Trips

ಜಕಾರ್ತಾ, ಆಗಸ್ಟ್ 18: ಪ್ರತಿಷ್ಠಿತ ಕ್ರೀಡಾಕೂಟಗಳಿಗೆ ತೆರಳುವಾಗಿ ಭಾರತದ (ಹೊರ ದೇಶದಲ್ಲೂ ಕೂಡ) ಕೆಲ ಕ್ರೀಡಾಪಟುಗಳು ತಮ್ಮೊಂದಿಗೆ ಹೆತ್ತವರನ್ನೂ ಕರೆತರುವ ವಾಡಿಕೆಯಿದೆ. ಆದರೆ ಭಾರತದ ಶೂಟರ್ ಮನು ಭಾಕರ್ ಹೆತ್ತವರ ಈ ಪ್ರವಾಸಕ್ಕೆ ನಿಷೇಧ ಹೇರಿದ್ದಾರೆ.

ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಮೋದಿ ಶುಭ ಹಾರೈಕೆಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಮೋದಿ ಶುಭ ಹಾರೈಕೆ

16ರ ಹರೆಯದ ಭಾಕರ್ ಏಕಾಏಕಿ ಪ್ರಸಿದ್ಧಿಗೆ ಬಂದಿದ್ದರು. ಹೀಗಾಗಿ ಈ ಬಾರಿಯ ಏಷ್ಯನ್ ಗೇಮ್ಸ್ ಗೆ ಭಾಕರ್ ತನ್ನೊಂದಿಗೆ ತನ್ನ ಹೆತ್ತವರನ್ನೂ ಕರೆದೊಯ್ಯಬಹುದಿತ್ತು. ಆದರೆ ಸ್ವತಃ ಅವರಾಗಿಯೇ ಇದಕ್ಕೆ ನಿರಾಕರಣೆ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಕ್ರೀಡಾಪಟುವಾಗಿ ನಾನು ಗುರುತಿಸಿಕೊಳ್ಳಲು ಹೆಣಗಾಡುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮನು, 'ಹೆತ್ತವರು ಜೊತೆಯಲ್ಲಿದ್ದರೆ ನನಗೆ ಹೆಚ್ಚಿನ ಸ್ವಾತಂತ್ರ ಸಿಗೋದಿಲ್ಲ. ಇದು ತಿನ್ನು, ಅದುತಿನ್ನು, ಅಲ್ಲಿಗ್ ಹೋಗ್ಬೇಡ, ಇದು ಮಾಡು, ಮೊಬೈಲ್ ಬಳಸಬೇಡ, ನಿದ್ದೆ ಮಾಡು ಹೀಗೆ ಅತೀ ಕಾಳಜಿ ತೋರಿಸುತ್ತಾರೆ. ಇದು ನನಗೆ ಹೊಸ ಜಾಗದಲ್ಲಿ ಲವಲವಿಕೆಯಿಂದಿರುವುದಕ್ಕೆ ಅಡ್ಡಿಪಡಿಸುತ್ತದೆ' ಎಂದಿದ್ದಾರೆ.

ಭಾಕರ್ ಅವರು ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವರ್ಲ್ಡ್ ಕಪ್ ನಲ್ಲಿ ಎರಡು ಬಂಗಾರ ಗೆದ್ದು ಗಮನ ಸೆಳೆದಿದ್ದರು. ಏಷ್ಯನ್ ಗೇಮ್ಸ್ ನಲ್ಲಿ ಮನು ಸೀನಿಯರ್ ವಿಭಾಗದ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ನಲ್ಲಿ ಮತ್ತು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಮತ್ತು ಮಿಕ್ಸ್ಡ್ ಟೀಮ್ ಎರಡರಲ್ಲೂ ಸ್ಪರ್ಧಿಸುತ್ತಿದ್ದಾರೆ.

Story first published: Saturday, August 18, 2018, 22:12 [IST]
Other articles published on Aug 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X