ನಾನು ಗೆದ್ದ ಪದಕ ಇಡೀ ದೇಶಕ್ಕೆ ಸೇರಿದ್ದು ಎಂದ ಬಂಗಾರದ ಹುಡುಗ ನೀರಜ್ ಚೋಪ್ರಾ

ಶನಿವಾರ ( ಆಗಸ್ಟ್ 7 ) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.

ಪಾಕ್ ವಿರುದ್ಧ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!ಪಾಕ್ ವಿರುದ್ಧ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತದ ಯಾವುದೇ ಅಥ್ಲೀಟ್ ಕೂಡ ಚಿನ್ನದ ಪದಕ ಗೆಲ್ಲುವ ಸಾಧನೆಯನ್ನು ಮಾಡಿಯೇ ಇರಲಿಲ್ಲ. ಇದೀಗ ಭಾರತದ ನೀರಜ್ ಚೋಪ್ರಾ ಈ ಸಾಧನೆಯನ್ನು ಮಾಡುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.

ಕಠಿಣ ಸಂದರ್ಭದಲ್ಲೂ ಒಲಿಂಪಿಕ್ಸ್ ನಡೆಸಿದ ಜಪಾನ್‌ಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿಕಠಿಣ ಸಂದರ್ಭದಲ್ಲೂ ಒಲಿಂಪಿಕ್ಸ್ ನಡೆಸಿದ ಜಪಾನ್‌ಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

ಈ ಮೂಲಕ ಪ್ರಸಕ್ತ ಸಾಲಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7ಪದಕಗಳನ್ನು ತನ್ನದಾಗಿಸಿಕೊಂಡಿತು. ಶನಿವಾರ (ಆಗಸ್ಟ್ 7) ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ಸಾಧಿಸುವುದರ ಮೂಲಕ ಭಾರತಕ್ಕೆ ಚಿನ್ನ ತಂದು ಕೊಟ್ಟಿದ್ದಾರೆ. ಹೀಗೆ ಚಿನ್ನದ ಪದಕವನ್ನು ಗೆದ್ದ ನಂತರ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ವಿವಿಧ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ನಗದು ಪುರಸ್ಕಾರ ಮತ್ತು ಉದ್ಯೋಗವನ್ನು ಘೋಷಣೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿವೆ.

ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಪರದಾಡುವಂತಹ ಸ್ಥಿತಿ ಬಂದಿದೆ!ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಪರದಾಡುವಂತಹ ಸ್ಥಿತಿ ಬಂದಿದೆ!

ಹೀಗೆ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಭಾರತದ ಪರ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾ ತಮ್ಮ ಚಿನ್ನದ ಪದಕದ ಕುರಿತು ಮಾತನಾಡಿದ್ದು 'ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದು ತಲೆಯ ಮೇಲಿನ ಭಾರವನ್ನು ಕೆಳಗಿಳಿಸಿದ ಅನುಭವವನ್ನು ನೀಡಿದೆ. ನಾನು ಗೆದ್ದ ಗೆಲುವು ಎಂತಹ ಮಹತ್ವದ ಜಯ ಎಂಬುದು ನನಗೆ ತಿಳಿದಿದೆ. ಪದಕ ಲಭಿಸಿರುವುದು ನನಗೆ ಮಾತ್ರವಲ್ಲ ಅದು ಪ್ರತಿಯೊಬ್ಬ ಭಾರತೀಯನದ್ದು' ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.ಪದಕ ಗೆದ್ದ ಒಂದು ದಿನದ ಬಳಿಕ ಆ ಪದಕದ ಮಹತ್ವ ನನ್ನ ದೇಹಕ್ಕೂ ಗೊತ್ತಾಗಿತ್ತು, ದೇಹದ ಎಲ್ಲ ನೋವುಗಳನ್ನು ಮರೆಸುವಂತಹ ಗೆಲುವು ಅದಾಗಿತ್ತು. ಎಷ್ಟೇ ನೋವಿದ್ದರೂ ಆ ನೋವು ಗೊತ್ತಾಗದ ರೀತಿಯಿತ್ತು ಆ ಒಂದು ಗೆಲುವಿನ ಪ್ರಭಾವ ಎಂದು ನೀರಜ್ ಚೋಪ್ರಾ ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ

ಇನ್ನು ಪದಕ ಗೆದ್ದ ಬಳಿಕ ಇಂದು ತಾಯ್ನಾಡಿಗೆ ಮರಳಿರುವ ನೀರಜ್ ಚೋಪ್ರಾಗೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದು ಸನ್ಮಾನ ಮಾಡುವ ಮೂಲಕ ಬರಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ರವಿ ದಾಹಿಯಾ, ಮತ್ತು ಬಜರಂಗ್ ಪೂನಿಯಾ ಇಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಪದಕ ಗೆದ್ದಿರುವ ಈ ಕ್ರೀಡಾಪಟುಗಳು ಬರುವ ಮುನ್ನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು.

ಇನ್ನು ಯುವ ಕ್ರೀಡಾಪಟುಗಳಿಗೆ ಸಂದೇಶವನ್ನು ನೀಡಿರುವ ನೀರಜ್ ಚೋಪ್ರಾ ಪ್ರತಿಸ್ಪರ್ಧಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಎದುರಾಳಿಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮ ಗರಿಷ್ಠ ಪ್ರಯತ್ನವನ್ನು ನೀವು ಮಾಡಿ. ಹೀಗೆ ಮಾಡಿದರೆ ನಿಮಗೆ ಚಿನ್ನದ ಪದಕದ ಫಲಿತಾಂಶ ಮತ್ತು ಫಲ ದೊರೆಯಲಿದೆ. ಯಾವುದೇ ಕಾರಣಕ್ಕೂ ಎದುರಾಳಿಗಳ ಬಗ್ಗೆ ಆತಂಕ ಪಡಬೇಡಿ ಅಷ್ಟೆ ಎಂದು ನೀರಜ್ ಚೋಪ್ರಾ ಯುವ ಕ್ರೀಡಾಪಟುಗಳಿಗೆ ಸಂದೇಶವನ್ನು ನೀಡಿದ್ದಾರೆ.

ನೀರಜ್ ಚೋಪ್ರಾಗೆ ಕಾಶಿನಾಥ್ ಕೋಚ್ ಅಲ್ಲ,10ಲಕ್ಷ ರೂ ಬಹುಮಾನಕ್ಕೆ ಶುರುವಾಯ್ತು ವಿವಾದ | Oneindia Kannada

ಇನ್ನು ಭಾರತವನ್ನು ಪ್ರವೇಶಿಸಿರುವ ನೀರಜ್ ಚೋಪ್ರಾಗೆ ಅದ್ದೂರಿ ಸ್ವಾಗತ ದೊರೆತಿದ್ದು ಮಾತ್ರವಲ್ಲದೆ ಐತಿಹಾಸಿಕ ದಾಖಲೆ ನಿರ್ಮಿಸಿರುವ ಚೋಪ್ರಾಗೆ ವಿವಿಧ ರಾಜ್ಯ ಸರಕಾರಗಳು ಮತ್ತು ಖಾಸಗೀ ಸಂಸ್ಥೆಗಳು ಭಿನ್ನವಿಭಿನ್ನವಾದ ನಗದು ಪುರಸ್ಕಾರಗಳನ್ನು ಘೋಷಿಸಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 9, 2021, 23:32 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X