ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸ್ವಾರ್ಥದಿಂದ ಸ್ವಾಸ್ಥ್ಯದ ಕಡೆಗೆ: ಫಿಟ್‌ ಇಂಡಿಯಾಕ್ಕೆ ಮೋದಿ ಚಾಲನೆ

Narendra Modi launches Fit India movement

ನವದೆಹಲಿ, ಆಗಸ್ಟ್ 29: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ 'ಫಿಟ್ ಇಂಡಿಯಾ ಅಭಿಯಾನಕ್ಕೆ' ಕ್ಕೆ ಚಾಲನೆ ನೀಡಿದರು.

ಹಾಡು-ನೃತ್ಯ, ವಿವಿಧ ಮಾದರಿಯ ವ್ಯಾಯಾಮಗಳ ಪ್ರದರ್ಶನ, ಯೋಗ ಎಲ್ಲವುಗಳ ಪ್ರದರ್ಶನದ ಜೊತೆಗೆ ಆರೋಗ್ಯದ ಉದ್ದೇಶದ ಅಭಿಯಾನಕ್ಕೆ ರಂಗು ರಂಗಿನ ಚಾಲನೆ ದೊರೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸ್ವಾರ್ಥದಿಂದ ಸ್ವಾಸ್ಥ್ಯದ ಎಡೆಗೆ ಭಾರತವನ್ನು ಕೊಂಡೊಯ್ಯುವ ನಿಟ್ಟಿನಿಂದ ಈ ಅಭಿಯಾನ ಪ್ರಾರಂಭ ಮಾಡಲಾಗಿದೆ ಎಂದರು.

ಫಿಟ್ ಇಂಡಿಯಾ ಅಭಿಯಾನದ ಈ ದಿನ ಆರೋಗ್ಯ ಮಾತ್ರವಲ್ಲದೆ, ದೇಶದ ಬಾವುಟವನ್ನು ವಿಶ್ವದೆಲ್ಲೆಡೆ ಹಾರಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸುವ ದಿನವೂ ಆಗಿದೆ ಎಂದು ಅವರು ಹೇಳಿದರು.

ಫಿಟ್ ಇಂಡಿಯಾ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಲ್ಲ ಇದು ಜನರ ಕಾರ್ಯಕ್ರಮ, ಇದು ಭಾರತದ ಎಲ್ಲ ಕುಟುಂಬಗಳ ಕಾರ್ಯಕ್ರಮ ಆಗಬೇಕು ಸರ್ಕಾರ ಕೇವಲ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು. ಈ ಆಂದೋಲನವನ್ನು ಸರ್ಕಾರ ಶುರು ಮಾಡಿದೆ ಆದರೆ ಇದನ್ನು ಜನರೇ ಮುಂದುವರೆಸಬೇಕು ಎಂದರು.

ಆರೋಗ್ಯ ಸಂಬಂಧಿ ಅಭಿಯಾನವನ್ನು ವಿಶ್ವದ ದೇಶಗಳು ಈಗಾಗಲೇ ಪ್ರಾರಂಭ ಮಾಡಿಬಿಟ್ಟಿವೆ. ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ, ಚೀನಾ ಅಂತು ಮಿಷನ್ ರೀತಿಯಲ್ಲಿ ಫಿಟ್ ನೆಸ್ ಸಂಬಂಧಿ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಬೋರ್ಡ್‌ ರೂಂನಿಂದ ಬಾಲಿವುಡ್‌ ವರೆಗೆ ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆಯೋ ಆತ ಮಾತ್ರವೇ ಸಾಧನೆಯ ಉತ್ತುಂಗ ಸ್ಪರ್ಷಿಸಬಲ್ಲ, ಆರೋಗ್ಯವಂತ ದೇಹ ಇದ್ದ ಕಡೆ ಮಾತ್ರವೇ ಆರೋಗ್ಯವಂತ ಮನಸ್ಸು ಮತ್ತು ಆಲೋಚನೆಗಳು ಇರುತ್ತವೆ ಎಂದು ಮೋದಿ ಹೇಳಿದರು.

ಫಿಟ್ ಇಂಡಿಯಾ ಆಂದೋಲವನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ, ಇದರಲ್ಲಿ ಬಂಡವಾಳ ಇಲ್ಲ ಆದರೆ ಲಾಭ ಮಾತ್ರ ಅಸೀಮವಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ದೇಶ ಎಲ್ಲವೂ ಆರೋಗ್ಯವಂತವಾಗಿರುತ್ತದೆ. 'ನಾನು ಫಿಟ್ ನನ್ನ ದೇಶ ಫಿಟ್‌' ಎಂಬ ಘೋಷಣೆಯನ್ನೂ ಮೋದಿ ನೀಡಿದರು.

ತಂತ್ರಜ್ಞಾನದಿಂದ ನಾವು ನಡೆಯುವುದು, ಓಡುವುದು ಬಿಟ್ಟುಬಿಟ್ಟಿದ್ದೀವಿ. ಆದರೆ ಇಂದು ಅದೇ ತಂತ್ರಜ್ಞಾನ ನೀವು ದಿನಕ್ಕೆ ಎಷ್ಟು ಹೆಜ್ಜೆ ಇಟ್ಟಿರೆಂದು ಲೆಕ್ಕ ಮಾಡಿ ಹೇಳುತ್ತಿದೆ ಎಂದು ಫಿಟ್‌ನೆಸ್‌ ಆಪ್‌ಗಳ ಬಗ್ಗೆ ಮೋದಿ ಹೇಳಿದರು.

ಎಳವೆಯಲ್ಲಿಯೇ ಹೃದಯಾಘಾತ, ಸಕ್ಕರೆ ಖಾಯಿಲೆ ಇನ್ನೂ ಅನೇಕ ಖಾಯಿಲೆಗಳಿಂದ ಇಂದಿನ ಯುವ ಪೀಳಿಗೆ ಬಳಲುತ್ತಿದೆ. ಇದರಿಂದ ಹೊರ ಬಂದು ನಿರೋಗಿಯಾಗಲು ವ್ಯಾಯಾಮದ ಅವಶ್ಯಕತೆ ಇದೆ ಎಂದರು ಮೋದಿ.

Story first published: Thursday, August 29, 2019, 14:39 [IST]
Other articles published on Aug 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X