ಮೈ ಸುಟ್ಟರೂ ರೇಸಿನ ಗೀಳು ಬಿಟ್ಟಿರದ ಚಾಂಪಿಯನ್ ನಿಕಿ ಲೌಡಾ ನಿಧನ

ಸಿಡ್ನಿ, ಮೇ 21: ಫಾರ್ಮುಲಾ ಒನ್‌ನಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದ್ದ ಆಸ್ಟ್ರೇಲಿಯಾದ ನಿಕಿ ಲೌಡಾ ಅವರು ನಿಧರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ ಆಗಸ್ಟ್‌ನಲ್ಲಿ ಶ್ವಾಸಕೋಶದ ಕಸಿ ಮಾಡಿಸಿಕೊಂಡಿದ್ದ ಲೌಡಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಎಂದು ಆಸ್ಟ್ರಿಯಾ ಮಾಧ್ಯಮಗಳು ವರದಿ ಮಾಡಿವೆ.
2019ರ ವರ್ಷಾರಂಭದಲ್ಲೂ ನಿಕಿ ಲೌಡಾ ಅವರು ಫ್ಲೂ ಸೋಂಕಿನಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಟ್ರಿಯಾ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ನಿಕಿ ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕಿಡ್ನಿ ಡಯಾಲಿಸಿಸ್ ಪಡೆಯುತ್ತಿದ್ದರು ಎನ್ನಲಾಗಿದೆ.
ರೇಸಿಂಗ್ ಜಗತ್ತಿಗೆ 1971ರಂದು ಪಾದಾರ್ಪಣೆ ಮಾಡಿದ್ದ ನಿಕಿ ಲೌಡಾ ಫೆರಾರಿ ರೇಸ್‌ನಲ್ಲಿ 1974ರಲ್ಲಿ ಮೊದಲ ಪ್ರಶಸ್ತಿ ಗೆದ್ದರು. ಆ ನಂತರ ಮತ್ತೆ 1975 ಚೊಚ್ಚಲ ಚಾಂಪಿಯನ್‌ಶಿಪ್ ಗೆದ್ದುಕೊಂಡರು. ಜರ್ಮನಿಯ ನೂರ್ಬರ್ಗ್ರಿಂಗ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ನಿಕಿ ಲೌಡಾ ಅಫಘಾತಕ್ಕಿಡಾಗಿದ್ದರಾದರೂ ಅದೃಷ್ಟವಶಾತ್ ಬದುಕುಳಿದರು.
ಆದರೆ ನೂರ್ಬರ್ಗ್ರಿಂಗ್ ರೇಸ್ ಅಪಘಾತದಿಂದಾಗಿ ನಿಕಿ ಲೌಡಾ ದೇಹಕ್ಕೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಮತ್ತೆ ರೇಸ್ ಗೀಳಿಗೆ ಜಿಗಿದಿದ್ದ ನಿಕಿ, 1977ರಲ್ಲಿ ಮತ್ತೊಂದು ಫೆರಾರಿ ಚಾಂಪಿಯನ್‌ಶಿಪ್ ಜಯಿಸಿ ಕ್ರೀಡಾ ಜಗತ್ತಿಗೆ ಬೆರಗು ಮೂಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications