ಅಭ್ಯಾಸಕ್ಕೆ ಸಹಾಯ ನೀಡಿದ ಟ್ರಕ್ ಡ್ರೈವರ್‌ಗಳಿಗೆ ಗೌರವಿಸಿದ ಮೀರಾಬಾಯಿ ಚಾನು

ಗುವಾಹಟಿ: ಕೃತಜ್ಞತೆ ಸಲ್ಲಿಸುವುದರಲ್ಲಿಯೂ ನವಿರಾದ ಭಾವಗಳಿರುತ್ತವೆ. ನಮ್ಮ ಕಷ್ಟಕಾಲದಲ್ಲಿ ನೆರವಾದವರಿಗೆ ಕೃತಜ್ಞತೆ ಹೇಳುವಾಗ ಒಮ್ಮೊಮ್ಮೆ ಕಣ್ಣು ತುಂಬಿ ಬರೋದೂ ಇದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕೂಡ ತಾನು ಅಭ್ಯಾಸ ನಡೆಸಲು ನೆರವು ನೀಡಿದ ಟ್ರಕ್ ಡ್ರೈವರ್‌ಗಳಿಗೆ ಕೃತಜ್ಞತಾರ್ಥವಾಗಿ ಉಡುಗೊರೆಗಳನ್ನು ನೀಡಿದ್ದಾರೆ, ಗೌರವಿಸಿದ್ದಾರೆ. ಚಾನು ಅವರ ಈ ನಡೆದ ಕ್ರೀಡಾಭಿಮಾನಿಗಳ ಹೃದಯ ಮುಟ್ಟಿದೆ.

ಟೋಕಿಯೋ ಒಲಿಂಪಿಕ್ಸ್: ಬಜರಂಗ್ ಪುನಿಯಾ ಅಬ್ಬರ; ಭಾರತಕ್ಕೆ ಮತ್ತೊಂದು ಪದಕಟೋಕಿಯೋ ಒಲಿಂಪಿಕ್ಸ್: ಬಜರಂಗ್ ಪುನಿಯಾ ಅಬ್ಬರ; ಭಾರತಕ್ಕೆ ಮತ್ತೊಂದು ಪದಕ

ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದರು. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಪದಕ. ಹೀಗಾಗಿ ಚಾನು ತುಂಬಾ ಖುಷಿಯಲ್ಲಿದ್ದಾರೆ. ಆದರೆ ಈ ಖುಷಿಯ ಮಧ್ಯೆ ತನ್ನ ಸಾಧನೆಗೆ ನೆರವಾದವರನ್ನು ಚಾನು ಮರೆತಿಲ್ಲ.

ಹೊಸ ದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು

ಹೊಸ ದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು

ಟೋಕಿಯೋ ಒಲಿಂಪಿಕ್ಸ್ ಮಹಿಳಾ ವಿಭಾಗದ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದರು. ಫೈನಲ್‌ನಲ್ಲಿ ಚೀನಾದ ಹೌ ಝಿಹುಯ್ 94 kg ಸ್ನ್ಯಾಚ್ ಮತ್ತು 116 kg ಕ್ಲೀನ್ ಆ್ಯಂಡ್ ಜರ್ಕ್‌ ಸೇರಿ ಒಟ್ಟಾರೆ 210 ಕೆಜಿ ಭಾರ ಎತ್ತಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರೆ, ಮೀರಾಬಾಯಿ ಸ್ನ್ಯಾಚ್‌ನಲ್ಲಿ 87 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ತೂಕ ಸೇರಿ ಒಟ್ಟಾರೆ 202 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದರು. ಅಷ್ಟೇ ಅಲ್ಲ, ಒಲಿಂಪಿಕ್ಸ್‌ ಇತಿಹಾಸದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯೆ ಎಂಬ ದಾಖಲೆಗೂ ಚಾನು ಕಾರಣರಾಗಿದ್ದರು. ಲಿಫ್ಟಿಂಗ್‌ನಲ್ಲಿ ಒಲಿಂಪಿಕ್ಸ್ ಮೊದಲ ಪದಕ ಗೆದ್ದ ಭಾರತೀಯೆ ಎಂಬ ದಾಖಲೆ ಕರ್ಣಂ ಮಲ್ಲೇಶ್ವರಿ ಹೆಸರಿನಲ್ಲಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಲ್ಲೇಶ್ವರಿ ಭಾರತಕ್ಕೆ ಕಂಚು ಗೆದ್ದಿದ್ದರು. ಅದು ಬಿಟ್ಟರೆ ಆ ಸಾಧನೆ ಮಾಡಿದ್ದು ಮೀರಾಬಾಯಿ ಮಾತ್ರ.

ಉಚಿತ ಲಿಫ್ಟ್ ನೀಡಿದ್ದ ಟ್ರಕ್ ಡ್ರೈವರ್‌ಗಳಿಗೆ ಗೌರವ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾನು ಬೆಳ್ಳಿ ಗೆದ್ದಿದ್ದಾರಲ್ಲ? ಅದು ಸುಲಭವಾಗಿ ಸಿಕ್ಕಿಲ್ಲ, ಯಾಕೆಂದರೆ ಮಣಿಪುರದ ರಾಜಧಾನಿ ಇಂಪಾಲ್‌ನ ಪೂರ್ವ ಭಾಗದ ನಾನ್‌ಪೋಕ್ ಕಾಕ್ಚಿಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಅಭ್ಯಾಸಕ್ಕೆ ಹೋಗಬೇಕಿದ್ದರೆ ಕ್ರೀಡಾಕೇಂದ್ರ ಹತ್ತಿರದಲ್ಲಿರಲಿಲ್ಲ. ಇಂಪಾಲದಲ್ಲಿನ ಕ್ರೀಡಾಕೇಂದ್ರಕ್ಕೆ ಹೋಗಬೇಕಾದರೆ ಚಾನು 25 ಕಿಮೀ ಕ್ರಮಿಸಬೇಕಿತ್ತು, ಸಾರ್ವಜನಿಕ ವಾಹನ ಬಳಸಬೇಕಿತ್ತು. ಮಧ್ಯಮ ಆರ್ಥಿಕ ಕುಟುಂಬದಲ್ಲಿ ಹುಟ್ಟಿದ ಚಾನುಗೆ ಖಾಸಗಿ ವಾಹನದಲ್ಲಿ ದಿನಾಲು ಕ್ರೀಡಾಕೇಂದ್ರಕ್ಕೆ ಹೋಗಿಬರಲು ಆಗುತ್ತಿರಲಿಲ್ಲ. ಆ ಆಯ್ಕೆಯೇ ಚಾನುಗೆ ಇರಲಿಲ್ಲ. ಹೀಗಾಗಿ ಇಂಪಾಲಕ್ಕೆ ಮರಳು ಸಾಗಿಸುತ್ತಿದ್ದ ಟ್ರಕ್, ಲಾರಿಗಳಲ್ಲಿ ಚಾನು ಅಭ್ಯಾಸಕ್ಕೆ ಹೋಗಿಬರುತ್ತಿದ್ದರು. ಟ್ರಕ್ ಡ್ರೈವರ್‌ಗಳೂ ಕೂಡ ಚಾನು ಅಭ್ಯಾಸಕ್ಕೆ ಹೋಗಿ ಬರಲು ಉಚಿತ ಲಿಫ್ಟ್ ನೀಡುತ್ತಿದ್ದರು. ಹೀಗಾಗಿ ಚಾನು ಅವರ ಸಹಾಯ ಮರೆತಿಲ್ಲ.

150 ಟ್ರಕ್ ಡ್ರೈವರ್‌ಗಳಿಗೆ ಸನ್ಮಾನಿಸಿದ ಚಾನು

150 ಟ್ರಕ್ ಡ್ರೈವರ್‌ಗಳಿಗೆ ಸನ್ಮಾನಿಸಿದ ಚಾನು

ಎನ್‌ಡಿಟಿವಿ ವರದಿಯ ಪ್ರಕಾರ, ತಾನು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲಲು ಸಹಾಯ ನೀಡಿದ ಸುಮಾರು 150 ಟ್ರಕ್ ಡ್ರೈವರ್‌ಗಳನ್ನು ಕರೆಸಿ ಚಾನು ಉಪಚರಿಸಿದ್ದಾರೆ, ಗೌರವಿಸಿದ್ದಾರೆ. ಆ ಎಲ್ಲಾ ಟ್ರಕ್ ಚಾಲಕರಿಗೂ ಒಂದು ಅಂಗಿ, ಒಂದು ಮಣಿಪುರದ ಸ್ಕಾರ್ಫ್ ಮತ್ತು ಒಂದು ಹೊತ್ತಿನ ಭೂರಿಭೋಜನ ನೀಡಿದ್ದಾರೆ. ತನ್ನ ಸಾಧನೆಗೆ ನೆರವಾದ ಟ್ರೈವರ್‌ಗಳಿಗೆ ಚಾನು ಭಾವುಕರಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆಗಸ್ಟ್ 7ರ ಶನಿವಾರ 4.30 PM ಹೊತ್ತಿಗೆ ಭಾರತದ ಖಾತೆಯಲ್ಲಿ ಒಟ್ಟು 6 ಪದಕಗಳಿದ್ದವು. ಮೀರಾಬಾಯಿ ಗೆದ್ದ ಬೆಳ್ಳಿ ಪದಕ, ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಗೆದ್ದಿರುವ ಕಂಚಿನ ಪದಕ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಗೆದ್ದ ಕಂಚು, ರಸ್ಲರ್ ರವಿಕುಮಾರ್ ದಾಹಿಯ ಗೆದ್ದ ಬೆಳ್ಳಿ ಪದಕ, ಪುರುಷರ ಹಾಕಿ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲರ್ ಬಜರಂಗ್ ಪೂನಿಯಾ ಗೆದ್ದ ಕಂಚಿನ ಪದಕಗಳು ಇದರಲ್ಲಿ ಸೇರಿವೆ.

For Quick Alerts
ALLOW NOTIFICATIONS
For Daily Alerts
Story first published: Saturday, August 7, 2021, 17:01 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X