ಬಾಲಿವುಡ್ ತಾರೆ ಸಲ್ಮಾನ್ ಖಾನ್ ಭೇಟಿಯಾಗಿ ಕನಸು ನನಸು ಮಾಡಿಕೊಂಡ ಮೀರಾ ಬಾಯಿ ಚಾನು

By ಪ್ರತಿನಿಧಿ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ವೇಟ್ ಲಿಫ್ಟಿಂಗ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮೀರಾ ಬಾಯಿ ಚಾನುಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಡೀ ದೇಶವೇ ಮೀರಾ ಸಾಧನೆಯನ್ನು ಕೊಂಡಾಡುತ್ತಿದೆ. ಈ ಸಂಭ್ರದಲ್ಲಿರುವ ಮೀರಾಬಾಯಿ ಚಾನು ಕೆಲ ತಾರೆಯರನ್ನು ಭೇಟಿಯಾಗುತ್ತಿದ್ದಾರೆ. ಬುಧವಾರ ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಅವರೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದ ಮೀರಾಬಾಯಿ ಚಾನು ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ತನ್ನ ಬಹು ಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಬೆಳ್ಳಿ ಗೆದ್ದು ಸಂಭ್ರಮಿಸುತ್ತಿರುವ ಮೀರಾ ಅವರ ಜೀವನ ತೆರೆಮೇಲೆ ಬರಲು ತಯಾರಾಗುತ್ತಿದೆ. ಇತ್ತೀಚಿಗಷ್ಟೆ ಮೀರಾ ಬಾಯಿ ಜೀವನವನ್ನು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬೆಳ್ಳಿ ಸುಂದರಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!

ಕ್ರಿಕೆಟ್ ದೇವರು ಸಚಿನ್ ತೆಂಡೋಲ್ಕರ್ ಅವರನ್ನು ಭೇಟಿಯಾಗಿದ್ದ ಮೀರಾ ಬಳಿಕ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ಸಲ್ಮಾನ್ ಖಾನ್ ಒಲಿಂಪಿಯನ್ ಮೀರಾ ಬಾಯಿ ಚಾನು ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮೀರಾ ಬಾಯಿ ಚಾನು ಅವರೊಂದಿಗಿನ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ವತಃ ಸಲ್ಮಾನ್ ಮೀರಾ ಜೊತೆಗಿನ ಫೋಟೋ ಹಂಚಿಕೊಂಡಿದ್ದು ಭೇಟಿಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಬೆಳ್ಳಿ ಪದಕ ವಿಜೇತೆ ಮೀರಾ ಬಾಯಿ ಚಾನು ಅವರನ್ನು ಭೇಟಿಯಾಗಿದ್ದು ಅದ್ಭುತವಾಗಿತ್ತು. ಯಾವಾಗಲೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.

ಅಂದಹಾಗೆ ಮೀರಾ ಬಾಯಿ ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ. ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಬೇಕು ಎನ್ನುವುದು ಅವರ ಬಹುದಿನಗಳ ಕನಸಂತೆ. ಇದೀಗ ಬೆಳ್ಳಿ ಗೆದ್ದು ಸಂಭ್ರಮಿಸುತ್ತಿರುವ ಮೀರಾ ನೆಚ್ಚಿನ ನಟ ಸಲ್ಮಾನ್ ಅವರನ್ನು ಭೇಟಿಯಾಗುವ ಮೂಲಕ ಅವರ ಕನಸು ನನಸು ಮಾಡಿಕೊಂಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಟ್ವೀಟ್‌ಗೆ ಮೀರಾಬಾಯಿ ಚಾನು ಪ್ರತಿಕ್ರಿಯೆ ನೀಡಿದ್ದಾರೆ. "ತುಂಬಾ ಧನ್ಯವಾದಗಳು ಸಲ್ಮಾನ್ ಖಾನ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಕನಸು ನನಸಾಗಿದೆ" ಎಂದು ಬರೆದುಕೊಂಡಿದ್ದಾರೆ. ಈ ಹಿಂದೆಯೇ ಮೀರಾ ಸಲ್ಮಾನ್ ಖಾನ್ ಅವರ ಅಭಿಮಾನಿ ಎನ್ನುವುದನ್ನು ಬಹಿರಂಗ ಪಡಿಸಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಮೀರಾ ಸಲ್ಮಾನ್ ಖಾನ್ ಅಭಿಮಾನಿ ಎನ್ನುವ ವಿಚಾರವನ್ನು ಬೆಚ್ಚಿಟ್ಟಿದ್ದರು.

ಇದಕ್ಕೂ ಮುನ್ನ ಮೀರಾಬಾಯಿ ಮುಂಬೈನಲ್ಲಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡೋಲ್ಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮೀರಾಬಾಯಿ ಚಾನು ಅವರ ಪದಕವನ್ನು ನೊಡಿ ಸಚಿನ್ ಸಂಭ್ರಮಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಒಯಿಸಿದ ಸಚಿನ್ ಮೀರಾ ಬಾಯಿ ಚಾನು ಅವರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ಮಣಿಪುರದಿಂದ ಟೋಕಿಯೋ ವರೆಗಿನ ನಿಮ್ಮ ಪಯಣ ಸ್ಫೂರ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಮಯಾಂಕ್ ಅಗರ್ವಾಲ್ ಅಗತ್ಯತೆಯಿಲ್ಲ ಎಂದು ಪರೋಕ್ಷವಾಗಿ ಹೇಳಿದ ಕೊಹ್ಲಿ!ಭಾರತ vs ಇಂಗ್ಲೆಂಡ್: ಮಯಾಂಕ್ ಅಗರ್ವಾಲ್ ಅಗತ್ಯತೆಯಿಲ್ಲ ಎಂದು ಪರೋಕ್ಷವಾಗಿ ಹೇಳಿದ ಕೊಹ್ಲಿ!

ಮೀರಾ ಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ 87 ಕೆಜಿ ಹಾಗೂ 115 ಕೆಜಿ ಭಾರತವನ್ನು ಎತ್ತುವ ಮೂಲಕ ಒಟ್ಟು 202 ಕೆಜಿ ಭಾರ ಎತ್ತಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ ಮೀರಾಬಾಯಿ ಚಾನು. ಇನ್ನು ಮೀರಾ ಬಾಯಿ ಜೀವನ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಮಣಿಪುರ ಮೂಲದ ಸಿನಿಮಾ ನಿರ್ಮಾಣ ಸಂಸ್ಥೆ ಮೀರಾ ಬಾಯಿ ಚಾನು ಜೀವನವನ್ನು ತೆರೆಮೇಲೆ ತರಲು ಮುಂದಾಗಿದೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಮೀರಾ ಬಾಯಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದು, ಮೀರಾ ಕುಟುಂಬ ಒಪ್ಪಂದಕ್ಕೆ ಸಹಿ ಮಾಡಿದೆ.

ಚಿತ್ರದ ಕಥೆ ಮತ್ತು ಸಂಭಾಷೆಯನ್ನು ಮನೌಬಿ ಎಂ ಎಂ ಬರೆದಿದ್ದಾರೆ. ಓಸಿ ಮೀರಾ ಎನ್ನುವವರು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೀರಾ ಬಾಯಿ ಚಾನು ಜೀವನ ಮತ್ತು ಕ್ರೀಡಾ ಬದುಕನ್ನು ಅನಾವರಣ ಮಾಡಲಾಗುತ್ತೆ. ಚಾನು ಬಾಲ್ಯ, ಹಳ್ಳಿಯ ಜೀವನ, ಚಾನು ವೇಟ್ ಲಿಫ್ಟಿಂಗ್ ತರಬೇತಿ ,ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಹಾಗೂ ಟೋಕಿಯೋ ಒಲಿಂಪಿಕ್ಸ್ ಹೀಗೆ ಮೀರಾ ಸಂಪೂರ್ಣ ಪಯಣ ಇರಲಿದೆ ಎಂದು ಸಿನಿಮಾ ತಂಡ ಬಹಿರಂಗ ಪಡಿಸಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 12:51 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X