ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿನ್ನ ಗೆದ್ದ ನೀರಜ್ ಚೋಪ್ರಾ ಮೇಲೆ ಕಣ್ಣಿಟ್ಟಿವೆ ಪ್ರಖ್ಯಾತ ಕಂಪನಿಗಳು!

Olympics gold medalist Neeraj Chopras rewards, and brand endorsements

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದ್ದು ಇಡೀ ದೇಶವೇ ಈ ಸಾಧನೆಗೆ ನೀರಜ್ ಚೋಪ್ರಾ ಅವರನ್ನು ಕೊಂಡಾಡುತ್ತಿದೆ. ಆಧುನಿಕ ಒಲಿಂಪಿಕ್ಸ್‌ನಲ್ಲಿ 1900ನೇ ಇಸವಿಯಿಂದಲೂ ಭಾಗವಾಗುತ್ತಿರುವ ಭಾರತ ಈವರೆಗೆ ಟ್ರ್ಯಾಕ್‌ & ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲು ಸಾಧ್ಯವಾಗಿರಲಿಲ್ಲ. ನೀರಜ್ ಚೋಪ್ರಾ ಈಗ ಈ ಸಾಧನೆಯನ್ನು ಮಾಡಿದ್ದು ಐತಿಹಾಸಿಕ ಸಾಧನೆಯಾಗಿದೆ. ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತ ಗೆದ್ದ ಕೇವಲ ಎರಡನೇ ಚಿನ್ನದ ಪದಕ ಇದಾಗಿದೆ.

ನೀರಜ್ ಚೋಪ್ರಾ ಈ ಸಾಧನೆಯನ್ನು ಮಾಡಿದ ಬಳಿಕ ಅವರಿಗೆ ಸಾಕಷ್ಟು ವಿಶೇಷ ಗೌರವಗಳು, ಬಹುಮಾನಗಳನ್ನು ಘೋಷಿಸಲಾಗಿದೆ. ಈ ಬಹುಮಾನಗಳ ಜೊತೆಗೆ ಈಗ ದೇಶದ ಪ್ರಖ್ಯಾತ ಕಂನಿಗಳು ಕೂಡ ತಮ್ಮ ಉತ್ಪನ್ನಗಳ ಪ್ರಚಾರ ರಾಯಭಾರಿಯನ್ನಾಗಿ ಮಾಡಲು ತುದಿಗಾಲಲ್ಲಿ ನಿಂತಿವೆ. ಕ್ರಿಕೆಟರ್‌ಗಳು ಪ್ರಭುತ್ವವನ್ನು ಸಾಧಿಸಿರುವ ಈ ಜಾಹೀರಾತುಗಳಲ್ಲಿ ಈಗ ನೀರಜ್ ಚೋಪ್ರ ಕೂಡ ಮಿಂಚಲು ಸಿದ್ಧರಾಗಿದ್ದಾರೆ.

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

ನೀರಜ್ ಚೋಪ್ರಾಗೆ ದೊರೆತಿರುವ ವಿಶೇಷ ಪುರಸ್ಕಾರಗಳು, ಜಾಹೀರಾತು ಒಪ್ಪಂದಗಳ ಬಗ್ಗೆ ಕೆಲ ಪ್ರಮುಖ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಭಾರೀ ಏರಿಕೆ ಕಂಡ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ

ಭಾರೀ ಏರಿಕೆ ಕಂಡ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಈಗ ಸಾಕಷ್ಟು ಖ್ಯಾತರಾಗಿದ್ದಾರೆ. ಹೀಗಾಗಿ ಹಲವಾರು ಉದ್ಯಮ ಸಂಸ್ಥೆಗಳು ತಮ್ಮ ಜಾಹೀರಾತಿನ ಒಪ್ಪಂದಕ್ಕೆ ನೀರಜ್ ಚೋಪ್ರಾ ಅವರನ್ನು ಬಳಸಿಕೊಳ್ಳಲು ಸ್ಪರ್ಧೆಗೆ ಇಳಿಯಲಿವೆ. ಈ ಮೂಲಕ ತಮ್ಮ ಉತ್ಪನ್ನದ ಪ್ರಚಾರ ರಾಯಭಾರಿಯನ್ನಾಗಿ ಮಾಡಲು ಸಾಕಷ್ಟು ಕಂಪನಿಗಳು ಪ್ರಯತ್ನಿಸುತ್ತಿವೆ. "ಈವರೆಗೆ ನೀರಜ್ ಚೋಪ್ರಾ ಅವರ ಒಪ್ಪಂದದ ಮೌಲ್ಯ 20-30 ಲಕ್ಷ ರೂಪಾಯಿಯಷ್ಟಿತ್ತು. ಆದರೆ ಚಿನ್ನದ ಪದಕವನ್ನು ಗೆದ್ದುಕೊಂಡ ಬಳಿಕ ಈ ಒಪ್ಪಂದಗಳು ಏರಿಕೆಯಾಗಲಿದೆ. ಈವರೆಗಿನ ಅತ್ಯುನ್ನತ ಪ್ರಚಾರವನ್ನು ಈಗ ಅವರು ಪಡೆದುಕೊಂಡಿರುವ ಕಾರಣ ಅವರ ಬ್ರ್ಯಾಂಡ್ ಮೌಲ್ಯ ಈಗ 3 ಕೋಟಿಯವರೆಗೂ ತಲುಪಬಹುದು. ಸಾಕಷ್ಟು ಕಂಪನಿಗಳು ಪ್ರಚಾರ ರಾಯಭಾರಿಯನ್ನಾಗಿ ನೀರಜ್ ಚೋಪ್ರಾ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾಯುತ್ತಿವೆ ಎಂಬುದು ನನಗೆ ಖಾತ್ರಿಯಿದೆ. ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಏರಿಕೆಯಾಗುವುದನ್ನು ನೀವು ನೋಡಲಿದ್ದೀರಿ" ಎಂದು ನೀರಜ್ ಚೋಪ್ರಾ ಅವರನ್ನು ಹತ್ತಿರದಿಂದ ಬಲ್ಲ ಮಾರ್ಕೆಟಿಂಗ್ ತಜ್ಞರೊಬ್ಬರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ನೀರಜ್ ಹೊಂದಿರುವ ಒಪ್ಪಂದಗಳು

ಪ್ರಸಕ್ತ ನೀರಜ್ ಹೊಂದಿರುವ ಒಪ್ಪಂದಗಳು

ನೀರಜ್ ಚೋಪ್ರಾ ಈಗಾಗಲೇ ಕೆಲ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ, ಎಕ್ಸಾನ್ ಮೊಬೈಲ್, ಜಿಲೆಟ್ ಹಾಗೂ ಮಸಲ್ ಬ್ಲೇಜ್ ಕಂಪನಿಗಳ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ನೀರಜ್ ಮೇಲೆ ಕಣ್ಣಿಟ್ಟಿವೆ ಪ್ರಖ್ಯಾತ ಕಂಪನಿಗಳು

ನೀರಜ್ ಮೇಲೆ ಕಣ್ಣಿಟ್ಟಿವೆ ಪ್ರಖ್ಯಾತ ಕಂಪನಿಗಳು

ಮೂಲಗಳ ಮಾಹಿತಿಯ ಪ್ರಕಾರ ನೀರಜ್ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಲು ಕೆಲ ಪ್ರಮುಖ ಕಂಪನಿಗಳು ತಯಾರಾಗಿವೆ ಎನ್ನಲಾಗಿದೆ. ಬೈಜು'ಸ್, ಎಂಆರ್‌ಎಫ್ ಮಹಿಂದ್ರಾ ಹಾಗೂ ಇನ್ನೂ ಕೆಲ ಕಂಪನಿಗಳು ಭಾರತದಲ್ಲಿ ಕ್ರೀಡಾಪಟುಗಳನ್ನು ರಾಯಭಾರಿಗಳನ್ನಾಗಿ ಆಯ್ದುಕೊಳ್ಳುವುದರಲ್ಲಿ ಮುಂದಿದ್ದು ನೀರಜ್ ಚೋಪ್ರಾ ಅವರನ್ನು ಕೂಡ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಪ್ರಸಕ್ತ ಕ್ರಿಕಟರ್‌ಗಳಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಪ್ರಚಾರ ರಾಯಭಾರಿಗಳಾಗಿ ಪ್ರಮುಖ ಸ್ಥಾನದಲ್ಲಿದ್ದು ಕೆಎಲ್ ರಾಹುಲ್, ಆರ್ ಅಶ್ವಿನ್, ಪಿವಿ ಸಿಂಧು ಮತ್ತು ವಿಶ್ವನಾಥನ್ ಆನಂದ್ ಕೂಡ ಸಾಕಷ್ಟು ಜಾಹೀರಾತುಗಳಿಗೆ ಒಪ್ಪಂದವನ್ನು ಹೊಂದಿದ್ದಾರೆ. ಈಗ ಈ ಸಾಲಿಗೆ ನೀರಜ್ ಚೋಪ್ರಾ ಕೂಡ ಶೀಘ್ರದಲ್ಲಿಯೇ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ನೀರಜ್ ಚೋಪ್ರಾಗೆ ಘೋಷನೆ ಮಾಡಲಾದ ಪುರಸ್ಕಾರದ ಮೊತ್ತ

ನೀರಜ್ ಚೋಪ್ರಾಗೆ ಘೋಷನೆ ಮಾಡಲಾದ ಪುರಸ್ಕಾರದ ಮೊತ್ತ

6 ಕೋಟಿ ರೂ. : ಹರ್ಯಾಣ ಸರ್ಕಾರ ತನ್ನ ರಾಜ್ಯದ ಕ್ರೀಡಾಪಟುವಿನ ಈ ಸಾಧನೆಗಾಗಿ 6 ಕೋಟಿ ನಗದು ಬಹುಮಾನ ಹಾಗೂ ವರ್ಗ 1ರ ಸರ್ಕಾರಿ ಕೆಲಸವನ್ನು ಘೋಷಿಸಿದೆ.
2 ಕೋಟಿ ರೂ : ಪಂಜಾಬ್ ಸರ್ಕಾರ 2 ಕೋಟಿ ಬಹುಮಾನವನ್ನು ಘೋಷಿಸಿದೆ. ಪ್ರೀಮಿಯಂ ಎಡ್‌ಟೆಕ್ ಪ್ಲಾಟ್‌ಫಾರ್ಮ್ ಬೈಜುಸ್ ಕೂಡ 2 ಕೋಟಿ ಮೊತ್ತವನ್ನು ಪುಸ್ಕಾರದ ರೂಪದಲ್ಲಿ ಘೋಷಿಸಿದೆ.
1 ಕೋಟಿ ರೂ. : ಮಣಿಪುರ ಸರ್ಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಲಾ ಒಂದು ಕೋಟಿ ರೂಪಾಯಿಯನ್ನು ಬಹುಮಾನದ ರೂಪದಲ್ಲಿ ಘೋಷಣೆ ಮಾಡಿವೆ.
ಇಂಡಿಗೋ ಏರ್‌ಲೈನ್ಸ್: ನೀರಜ್‌ಗೆ 1 ವರ್ಷದ ಅವಧಿಗೆ ಅನಿಯಮಿತ ಉಚಿತ ವಿಮಾನ ಪ್ರಯಾಣ.
ಮಹೀಂದ್ರಾ: ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರ ಅವರು ತಮ್ಮ ಕಂಪನಿಯ ಎಕ್ಸ್‌ಯುವಿ 700 ಅನ್ನು ನೀರಜ್‌ಗೆ ನೀಡುವುದಾಗಿ ಘೋಷಿಸಿದ್ದಾರೆ, ಇದರ ಬೆಲೆ ಸುಮಾರು 20 ಲಕ್ಷ ರೂಪಾಯಿಗಳಾಗಿದೆ.

ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ

ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ

ಜಾವೆಲಿನ್ ಎಸೆತದಲ್ಲಿ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದ ಜರ್ಮನಿಯ ಜೋಹಾನ್ಸ್ ವೆಟ್ಟರ್ ಅವರಂತಾ ಕಠಿಣ ಸ್ಪರ್ಧಿಗಳ ಮಧ್ಯೆಯೂ ನೀರಜ್ ಛೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ. 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆಥ್ಲಿಟ್ ಓರ್ವ ಫೀಲ್ಡ್ ಮತ್ತು ಟ್ರ್ಯಾಕ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಂತಾಗಿದೆ. ವೈಯಕ್ತಿಕ ವಿಭಾಗದಲ್ಲಿ ಒಟ್ಟಾರೆಯಾಗಿ ಕೇವಲ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ 2008ರಲ್ಲಿ ಅಭಿನವ್ ಬಿಂದ್ರಾ ಈ ಸಾಧನೆಯನ್ನು ಮೊಟ್ಟಮೊದಲ ಬಾರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7ಪದಕಗಳನ್ನು ತನ್ನದಾಗಿಸಿಕೊಂಡಿತು. ಶನಿವಾರ (ಆಗಸ್ಟ್ 7) ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ಸಾಧಿಸುವುದರ ಮೂಲಕ ಭಾರತಕ್ಕೆ ಚಿನ್ನ ತಂದು ಕೊಟ್ಟಿದ್ದಾರೆ. ಹೀಗೆ ಚಿನ್ನದ ಪದಕವನ್ನು ಗೆದ್ದ ನಂತರ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ವಿವಿಧ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ನಗದು ಪುರಸ್ಕಾರ ಮತ್ತು ಉದ್ಯೋಗವನ್ನು ಘೋಷಣೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿವೆ.

Story first published: Tuesday, August 10, 2021, 18:52 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X