ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋದಿಂದ ಮರಳಿದ ಭಾರತದ ಅಥ್ಲೀಟ್‌ಗಳಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

Olympics: Indian athletes receive a grand welcome after return from Tokyo

ನವದೆಹಲಿ, ಆಗಸ್ಟ್ 9: ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟ ಒಲಿಂಪಿಕ್ಸ್‌ಗೆ 2020ರ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಜಪಾನ್ ರಾಜಧಾನಿ ಟೋಕಿಯೋದ ನಡೆದ ಈ ಬಾರಿಯ ಒಲಿಂಪಿಕ್ಸ್ ಕೊರೊನಾವೈರಸ್ ಹಾವಳಿಯ ಮಧ್ಯೆಯೂ ಸುಸೂತ್ರವಾಗಿ ನಡೆಯುವಲ್ಲಿ ಯಶಸ್ವಿಯಾಗಿದೆ. ಭಾರತದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಹಿಂದೆಂದಿಗಿಂತಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ. ಕ್ರೀಡಾಕೂಟ ಅಂತ್ಯವಾದ ಹಿನ್ನೆಲೆಯಲ್ಲಿ ಅಥ್ಲೀಟ್‌ಗಳು ಭಾರತದ ರಾಜಧಾನಿ ನವದೆಹಲಿಗೆ ಬಂದಿಳಿದಿದ್ದಾರೆ.

ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಭಾರತದ ಅಥ್ಲೀಟ್‌ಗಳು ಬಂದಿಳಿದಿದ್ದಾರೆ. ಜಾವೆಲಿನ್ ಎಸೆತಗಾರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಬೆಳ್ಳಿಯ ಪದಕ ವಿಜೇತ ರೆಸ್ಲರ್ ರವಿ ದಾಹಿಯಾ, ಮತ್ತು ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಇಂದು ಭಾರತವನ್ನು ತಲುಪಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಪ್ರಥಮ ಬೆಳ್ಳಿಯ ಪದಕವನ್ನು ಭಾರತಕ್ಕೆ ತೊಡಿಸಿದ ಮೀರಾಬಾಯಿ ಚಾನು ಅವರು ಈ ಮೊದಲೇ ಭಾರತವನ್ನು ತಲುಪಿದ್ದರು. ಇವರು ಕೂಡ ಇಂದು ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಭಾರತ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಮದು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಹಾಗೂ ನಾಲ್ಕು ಕಂಚಿನ ಪದಕದೊಂದಿಗೆ ಒಟ್ಟು ಏಳು ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತ ಒಲಿಂಒಇಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕವನ್ನು ಗೆದ್ದುಕೊಂಡ ಸಾಧನೆಯನ್ನು ಮಾಡಿದೆ.

ಭಾರತೀಯ ಕ್ರೀಡಾಪಟುಗಳ ತಂಡ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಗಿಸಿ ಭಾರತಕ್ಕೆ ಮರಳುವ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಟರ್ಮಿನಲ್ 2 ಹಾಗೂ ಟರ್ಮಿನಲ್ 3ರಲ್ಲಿ ಭಾರತೀಯ ಕ್ರೀಡಾಪಟುಗಳ ಆಗಮನದ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಂಡಿದ್ದರು. ದೆಹಲಿ ಪೊಲೀಸ್ ಪಡೆ ಅಲ್ಲದೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಮತ್ತು ಡಾಗ್ ಸ್ಕ್ವಾಡ್ ಕೂಡ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರವನ್ನು ವಹಿಸಿಕೊಂಡಿದೆ.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ಮಾಹಿತಿಯನ್ನು ನೀಡಿದ್ದಾರೆ. "ಸಾಮಾನ್ಯ ಜನರಿಗೆ ಇಲ್ಲಿ ಆಗಮಿಸಲು ಅವಕಾಶವಿಲ್ಲ. ಹಾಗಿದ್ದರೂ ಉತ್ಸಾಹಿಗಳ ಗುಂಪು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಇಂದು ಸಂಜೆ ಪದಕವನ್ನು ಗೆದ್ದುಕೊಂಡ ಭಾರತೀಯ ಕ್ರೀಡಾಪಟುಗಳಿಗೆ ಹೋಟೆಲ್ ಅಶೋಕಾದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೂಲಗಳ ಮಾಹಿತಿಯ ಪ್ರಕಾರ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರೀಡಾಪಟುಗಳೊಂದಿಗೆ ಸಂವಾದವನ್ನು ನಡೆಸಲಿದ್ದಾರೆ ಎನ್ನಲಾಗಿದೆ.

ನೀರಜ್ ಚೋಪ್ರಾಗೆ ಕಾಶಿನಾಥ್ ಕೋಚ್ ಅಲ್ಲ,10ಲಕ್ಷ ರೂ ಬಹುಮಾನಕ್ಕೆ ಶುರುವಾಯ್ತು ವಿವಾದ | Oneindia Kannada

ಭಾರತದ ಪರವಾಗಿ ಒಲಿಂಪಿಕ್ಸ್ ಪದಕ ಗೆದ್ದ ಕ್ರೀಡಾಪಟುಗಳ ವಿವರ ಹೀಗಿದೆ.
ನೀರಜ್ ಚೋಪ್ರಾ - ಪುರುಷರ ಜಾವೆಲಿನ್ ನಲ್ಲಿ ಚಿನ್ನ
ಮೀರಾಬಾಯಿ ಚಾನು - ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ
ರವಿ ದಾಹಿಯಾ - ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿಯಲ್ಲಿ ಬೆಳ್ಳಿ
ಭಾರತ ಪುರುಷರ ಹಾಕಿ ತಂಡ - ಕಂಚು
ಲೊವ್ಲಿನಾ ಬೊರ್ಗೊಹೈನ್ - ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್‌ನಲ್ಲಿ ಕಂಚು
ಪಿವಿ ಸಿಂಧು - ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು
ಭಜರಂಗ್ ಪುನಿಯಾ - ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು

Story first published: Monday, August 9, 2021, 19:09 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X