ಟೋಕಿಯೋ ಒಲಿಂಪಿಕ್ಸ್: ಹಿಂದಿನ ಒಲಿಂಪಿಕ್ಸ್ ವೈಫಲ್ಯ ನನ್ನನ್ನು ಕಾಡುತ್ತಿದೆ ಎಂದ ದೀಪಿಕಾ ಕುಮಾರಿ

ಭಾರತದ ಸ್ಟಾರ್ ಆರ್ಚರ್ ದೀಪಿಕಾ ಕುಮಾರಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮಿಂಚುಹರಿಸಲು ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಆರ್ಚರಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದೀಪಿಕಾ ಕುಮಾರಿ ಮೇಲೆ ಈ ಬಾರಿ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ತನ್ನನ್ನು ಕಾಡುತ್ತಿರುವ ಸಂಗತಿಯ ಬಗ್ಗೆ ದೀಪಿಕಾ ಕುಮಾರಿ ಬೇಸರದ ನುಡಿಗಳನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಕುಮಾರಿ ಕಳೆದ ಎರಡು ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಪದಕ ಗೆಲ್ಲಲು ಸಾಧ್ಯವಾಗದೆ ಇರುವುದು ತನ್ನನ್ನು ತುಂಬಾ ಕಾಡುತ್ತಿದೆ ಎಂಬುದಾಗಿ ಹೇಳಿದ್ದಾರೆ. ಆದರೆ ತಾನು ಟೋಕಿಯೋ ಒಲಿಂಪಿಕ್ಸ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಋಣಾತ್ಮಕ ಭಾವನೆಯಿಂದ ದೂರವಿರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನೊವಾಕ್ ಜೊಕೋವಿಕ್ ನಿರ್ಧಾರಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನೊವಾಕ್ ಜೊಕೋವಿಕ್ ನಿರ್ಧಾರ

7ರ ಹರೆಯದ ದೀಪಿಕಾ ಕುಮಾರಿ ವಿಶ್ವದ ನಂಬರ್ 1 ಆರ್ಚರ್ ಆಗಿ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 2012ರಲ್ಲಿಯೂ ದೀಪಿಕಾ ಪದಕ ಗೆಲ್ಲುವ ಭರವಸೆಯಿಂದಲೇ ಲಂಡನ್ ಒಲಿಂಪಿಕ್ಸ್‌ಗೆ ತೆರಳಿದ್ದರು. ಆದರೆ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ಕೂಡ ಹೆಚ್ಚಿನ ಬದಲಾವಣೆ ಮಾಡಿರಲಿಲ್ಲ. ರಿಯೋದಲ್ಲಿ 16ರ ಘಟ್ಟಕ್ಕೆ ತೆರಳಿ ಹೊರಬಿದ್ದಿದ್ದರೆ ತಂಡ ವಿಭಾಗದಲ್ಲಿ ರಷ್ಯಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದರು.

"ನಾನು ಅದನ್ನು ಮರುಕಳಿಸಲು ಬಯಸುವುದಿಲ್ಲ. ಅದು ನಡೆದು ಹೋಗಿದೆ ನಿಜ, ಆದರೆ ಅದು ನನ್ನ ತಲೆಯಲ್ಲಿ ಕೊರೆಯುತ್ತಿದೆ. ಹೀಗಾಗಿ ನನ್ನ ಮೇಲೆ ಮಾನಸಿಕವಾಗಿ ಒತ್ತಡ ಬೀಳಬಹುದು. ಹಾಗಾಗಿ ನಾನು ಅದನ್ನು ಮರೆಯಲು ಪ್ರಯತ್ನಿಸುತ್ತೇನೆ. ಮನಸ್ಸನ್ನು ನಿರಾಳವಾಗಿರಿಸುವ ಪ್ರಯತ್ನ ಮಾಡಿ ಋಣಾತ್ಮಕ ಚಿಂತನೆಯಿಂದ ದೂರವಿರುವ ಪ್ರಯತ್ನ ಮಾಡುತ್ತೇನೆ. ಈಗ ನನ್ನ ಗಮನ ನನ್ನ ಶೂಟಿಂಗ್ ಮೇಲೆ ಮಾತ್ರವೇ ನೆಟ್ಟಿದೆ" ಎಂದು ದೀಪಿಕಾ ಕುಮಾರಿ ಹೇಳಿದ್ದಾರೆ.

ದೀಪಿಕಾ ಕುಮಾರಿ ತಮ್ಮ ವೃತ್ತಿ ಜೀವನದ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಎರಡು ವೈಯಕ್ತಿಕ ಚಿನ್ನದ ಪದಕವನ್ನು ವಿಶ್ವಕಪ್‌ನಲ್ಲಿ ಗೆದ್ದ ಬಳಿಕ ದೀಪಿಕಾ ಕುಮಾರಿ ನಂಬರ್ 1 ಆರ್ಚರ್ ಎನಿಸಿದ್ದಾರೆ. ಹೀಗಾಗಿ ದೀಪಿಕಾ ಕುಮಾರಿ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 16, 2021, 21:39 [IST]
Other articles published on Jul 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X