'ಪಬ್ಜಿ' ಈಸ್ ಬ್ಯಾಕ್: ಇಂದಿನಿಂದ ಉಚಿತ ಮುಂಚಿತ-ನೋಂದಣಿ ಶುರು!

ನವದೆಹಲಿ: ಪ್ಲೇ ಸ್ಟೋರ್‌ನಲ್ಲಿ ಪಬ್ಜಿ ಗೇಮಿಂಗ್ ಆ್ಯಪ್ ಸಿಗುತ್ತಿಲ್ಲ ಎಂದು ಬೇಜಾರಾಗಿ, ಬೇರಾವುದೋ ವಿಪಿಎನ್ ಮುಖಾಂತರ ಸರ್ಕಸ್ ಮಾಡಿ ಪಬ್ಜಿ ಆಡುತ್ತಿದ್ದ ಗೇಮರ್‌ಗಳಿಗೆ ಖುಷಿಯ ಸಂಗತಿಯೊಂದು ಕೇಳಿಬಂದಿದೆ. ಪಬ್ಜಿ ಕಂಪನಿ ಪಬ್ಜಿ ಮಾದರಿಯಲ್ಲೇ ಭಾರತದ ಪಬ್ಜಿ ಬಿಡುಗಡೆ ಮಾಡುವುದರಲ್ಲಿದೆ. ಹಿಂದಿನ ರೀತಿ ಅದೇ ಉಚಿತ-ಪ್ಲೇ-ಬ್ಯಾಟಲ್ ರಾಯಲ್ ಸೂತ್ರವನ್ನು ಈ ಪಬ್ಜಿ ಗೇಮ್ ಹೊಂದಿರಲಿದೆ (PC: Battleground Mobile India).

ಐಪಿಎಲ್ : ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ

ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾವು ಸೌತ್ ಕೊರಿಯನ್ ವಿಡಿಯೋ ಗೇಮ್ ಡೆವಲಪರ್ ಕ್ರಾಫ್ಟನ್‌ ಅನ್ನು ಅಭಿವೃದ್ಧಿಪಡಿಸಿದೆ. ಮುಂಚಿತವಾಗಿ ನೋಂದಾಯಿಸಿಕೊಳ್ಳುವವರಿಗೆ ಉಡುಗೊರೆಗಳನ್ನೂ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ ಘೋಷಿಸಿದೆ.

ಪಬ್ಜಿ ಬ್ಯಾನ್ ಯಾಕೆ?

ಪಬ್ಜಿ ಬ್ಯಾನ್ ಯಾಕೆ?

ಚೀನಾ ಗಡಿ ಸಂಘರ್ಷಣೆ ಸಂಬಂಧ ಪಬ್ಜಿ ಸೇರಿದಂತೆ ಒಟ್ಟು 117 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಬ್ಜಿ ಮೊಬೈಲ್ ಗೇಮಿಂಗ್ ಬ್ಯಾನ್‌ ಆಗಿತ್ತು. ಆಗಿನಿಂದಲೂ ಯಾವುದಾದರೊಂದು ಮೂಲದಲ್ಲಿ ಭಾರತೀಯರಿಗೆ ಪಬ್ಜಿಯನ್ನು ತರಲು ಕ್ರಾಫ್ಟನ್ ಪ್ರಯತ್ನಿಸುತ್ತಲೇಯಿತ್ತು. ಆ ಪ್ರಯತ್ನದ ಫಲ ಪಬ್ಜಿಯ ಅವತಾರವಾಗಿ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ ಹೆಸರಿನ ಹೊಸ ರೀತಿಯ ಪಬ್ಜಿ ಬರಲು ತಯಾರಾಗಿದೆ.

ಆಸಕ್ತರು ಏನು ಮಾಡಬೇಕು?

ಪಬ್ಜಿಯ ಇಂಡಿಯನ್ ಅವತಾರ 'ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ' ಗೇಮ್ ಆಡಲು ಆಸಕ್ತಿಯಿರುವವರು ಪೂರ್ವ ನೋಂದಣಿ ಮಾಡಬೇಕು. ಆಗ ಗೇಮ್ ಅಧಿಕೃತವಾಗಿ ಬಿಡುಗಡೆಯಾದಾಗ ನಿಮಗೆ ತಿಳಿಸಲಾಗುತ್ತದೆ. ಪ್ಲೇ ಸ್ಟೋರ್‌ನ ಮುಖಾಂತರವೇ ನೀವು ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೋಂದಾವಣೆ ಮಾಡಿಕೊಳ್ಳುವಾಗ ಗೇಮ್ ಅಧಿಕೃತವಾಗಿ ಬಿಡುಗಡೆಯಾದಾಗ ಆಟೋಮ್ಯಾಟಿಕ್ ಆಗಿ ಗೇಮ್ ನಿಮ್ಮ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಲು ಕೂಡ ಆಯ್ಕೆ ಇರುತ್ತದೆ.

ಇದರಲ್ಲಿ ವಿಶೇಷತೆ ಏನು?

ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಕೂಡ ಪಬ್ಜಿ ರೀತಿಯಲ್ಲೇ ಇರುತ್ತದೆ. ಆದರೆ ಭಾರತೀಯರಿಗೆ ಇಷ್ಟವಾಗುವಂತೆ ಸಣ್ಣಪುಟ್ಟ ಬದಲಾವಣೆಯಿರುತ್ತವೆ. ಜೊತೆಗೆ ರೆಕಾನ್ ಔಟ್‌ಫಿಟ್, ರೆಕಾನ್ ಮಾಸ್ಕ್, ಇನ್‌ ಗೇಮ್ ಕರೆನ್ಸಿ ಮೊದಲಾದ ವಿಶೇಷ ಉಡುಗೊರೆಗಳನ್ನೂ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ತರಲಿದೆ. ಅಧಿಕೃತ ಯೂಟ್ಯೂಬ್‌ ಚಾನೆಲ್ ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿ ನೀಡಿದೆ. ಆದರೆ ಈವರೆಗೂ iOS ಪ್ರಿ-ರಿಜಿಸ್ಟ್ರೇಶನ್ ಬಗ್ಗೆ ಮಾಹಿತಿ ನೀಡಿಲ್ಲ. ಬಿಡುಗಡೆ ದಿನಾಂಕ ಕೂಡ ತಿಳಿಸಿಲ್ಲ.

ಪ್ರಿ-ನೋಂದಣಿಗೆ ಲಿಂಕ್ ಇಲ್ಲಿದೆ

ಪ್ರಿ-ನೋಂದಣಿಗೆ ಲಿಂಕ್ ಇಲ್ಲಿದೆ

ಕ್ರಾಫ್ಟನ್ ಈ ತಿಂಗಳ ಆರಂಭದಲ್ಲೇ ಹೊಸ ಮಾದರಿಯ ಪಬ್ಜಿ ಹೊರ ತರಲಿರುವುದಾಗಿ ಘೋಷಿಸಿತ್ತು. ಘೋಷಣೆಯಂತೆ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ ಗೇಮಿಂಗ್‌ ಆ್ಯಪನ್ನು ಹೊರತರಲಿದ್ದು, ಇದರಲ್ಲಿ ಟೂರ್ನಮೆಂಟ್‌ಗಳು, ಲೀಗ್‌ಗಳು ಮತ್ತು ಗೇಮ್‌ನ ಒಳಗೆ ಔಟ್‌ಫಿಟ್‌ ಮತ್ತು ಫೀಚರ್ಸ್‌ಗೆ ಸಂಬಂಧಿಸಿ ಆಯ್ಕೆಗಳೂ ಇರಲಿವೆ. ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ ಪ್ರಿ-ನೋಂದಣಿಗೆ ಲಿಂಕ್ ಇಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 18, 2021, 14:02 [IST]
Other articles published on May 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X