ಪುಣೆಯ ಆರ್ಮಿ ಸ್ಟೇಡಿಯಂಗೆ ಟೋಕಿಯೊ ಒಲಿಂಪಿಕ್ಸ್ ಬಂಗಾರ ವಿಜೇತ ನೀರಜ್ ಚೋಪ್ರಾ ಹೆಸರು

ಪುಣೆ: ಸದರ್ನ್ ಕಮಾಂಡ್ ನ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಅಥ್ಲೆಟಿಕ್ಸ್ ಸ್ಟೇಡಿಯಂಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬಂಗಾರ ಗೆದ್ದಿರುವ ನೀರಾಜ್ ಚೋಪ್ರಾ ಹೆಸರಿಡಲು ನಿರ್ಧರಿಸಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿನ ಸಾಧನೆಯನ್ನು ಗುರುತಿಸಿ ಯುವ ಅಥ್ಲೀಟ್‌ಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಇತರ ಯುವ ಅಥ್ಲೀಟ್‌ಗಳಿಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಪುಣೆಯಲ್ಲಿರುವ ಆರ್ಮಿ ಅಥ್ಲೆಟಿಕ್ಸ್ ಸ್ಟೇಡಿಯಂಗೆ ನೀರಜ್ ಹೆಸರಿಡಲು ಯೋಚಿಸಲಾಗಿದೆ.

ಐಪಿಎಲ್ 2021 ದ್ವಿತೀಯ ಹಂತಕ್ಕೆ ಆರ್‌ಬಿಯಲ್ಲಿ ಕೋಚ್, ಪ್ಲೇಯರ್ಸ್ ಬದಲಾವಣೆ!ಐಪಿಎಲ್ 2021 ದ್ವಿತೀಯ ಹಂತಕ್ಕೆ ಆರ್‌ಬಿಯಲ್ಲಿ ಕೋಚ್, ಪ್ಲೇಯರ್ಸ್ ಬದಲಾವಣೆ!

ಆಗಸ್ಟ್ 23ರಂದು ಸದರ್ನ್ ಕಮಾಂಡ್ ನ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಅಥ್ಲೆಟಿಕ್ಸ್ ಸ್ಟೇಡಿಯಂಗೆ ನೀರಜ್ ಚೋಪ್ರಾ ಹೆಸರಿಡಲಾಗುತ್ತದೆ. ಆ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆರ್ಮಿ ಮುಖ್ಯಸ್ಥ ಎಂಎಂ ನರವಣೆ ಮತ್ತು ಸದರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜೆಸ್ ಜೈನ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಥ್ಲೆಟಿಕ್ಸ್ ಸ್ಟೇಡಿಯಂನ ಪೂರ್ತಿ ಹೆಸರು, ಸೌಲಭ್ಯಗಳ ಮಾಹಿತಿ

ಅಥ್ಲೆಟಿಕ್ಸ್ ಸ್ಟೇಡಿಯಂನ ಪೂರ್ತಿ ಹೆಸರು, ಸೌಲಭ್ಯಗಳ ಮಾಹಿತಿ

ಸದರ್ನ್ ಕಮಾಂಡ್ ನ ಆರ್ಮಿ ಸ್ಪೋರ್ಟ್ಸ್ ಅಥ್ಲೆಟಿಕ್ಸ್ ಸ್ಟೇಡಿಯಂಗೆ 'ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಸ್ಟೇಡಿಯಂ, ಕಂಟಾನ್ಮೆಂಟ್' ಎಂದು ಹೆಸರಿಡಲು ನಿರ್ಧರಿಸಲಾಗಿದೆ. "ಸ್ಟೇಡಿಯಂ ಅಂತಾರಾಷ್ಟ್ರೀಯ ಮಟ್ಟದ ಸ್ಥಾನಮಾನ ಹೊಂದಿದೆ. ಇಲ್ಲಿ ಪ್ರತಿನಿತ್ಯ ಬಹಳ ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಾರೆ. ಇತ್ತೀಚೆಗೆ ನಾವು ಅಲ್ಲಿನ ಸೌಲಭ್ಯಗಳನ್ನೂ ಹೆಚ್ಚಿಸಿದ್ದೇವೆ. ಯಾವುದೇ ಶ್ರೇಷ್ಠ ಹೆಸರುಗಳಲ್ಲಿ ಸ್ಟೇಡಿಯಂಗೆ ಹೆಸರಿಡಲಾಗಿಲ್ಲವಾದ್ದರಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ಬಳಿಕ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಶನ್ ಗೆ ನೀರಜ್ ಚೋಪ್ರಾ ಮೊದಲ ಬಾರಿಗೆ ಭೇಟಿ ಕೊಟ್ಟಾಗ ನೀರಜ್ ಹೆಸರಿಸಲು ನಾವು ಯೋಚಿಸಿದೆವು," ಎಂದು ಒಬ್ಬ ಆರ್ಮಿ ಆಫೀಸರ್ ಹೇಳಿದ್ದಾರೆ. 2006ರಲ್ಲಿ ಸ್ಥಾಪಿಸಲ್ಪಟ್ಟ ಈ ಆರ್ಮಿ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ 400 ಮೀಟರ್‌ನ ಸಿಂಥೆಟಿಕ್ಸ್ ಟ್ರ್ಯಾಕ್ ಇದೆ. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯೂ ಇದೆ. ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೂನಿಯರ್ ಕಮೀಶನರ್ ಆಫೀಸರ್ ಆಗಿ ನೀರಜ್ ಚೋಪ್ರಾ ವೃತ್ತಿ ಆರಂಭಿಸಿದ ಆರಂಭಿಕ ದಿನಗಳಲ್ಲಿ ಚೋಪ್ರಾ ಕೂಡ ಇದೇ ಸ್ಟೇಡಿಯಂನಲ್ಲಿ ಜಾವೆಲಿನ್ ಎಸೆತ ಅಭ್ಯಾಸ ನಡೆಸಿದ್ದರು.

ನೀರಜ್ ಚೋಪ್ರಾಗೆ ಸಿಕ್ಕಿರುವ ನಗದು ಪುರಸ್ಕಾರಗಳ ಪಟ್ಟಿ

ನೀರಜ್ ಚೋಪ್ರಾಗೆ ಸಿಕ್ಕಿರುವ ನಗದು ಪುರಸ್ಕಾರಗಳ ಪಟ್ಟಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿರುವ ನೀರಜ್ ಚೋಪ್ರಾಗೆ ಹಣದ ಹೊಳೆಯೇ ಹರಿದು ಬಂದಿದೆ. ಟೋಕಿಯೋ ಚಿನ್ನ ಗೆದ್ದ ನೀರಜ್‌ಗೆ ಸಿಕ್ಕಿರುವ ನಗದು ಪುರಸ್ಕಾರ ಮತ್ತು, ಪುರಸ್ಕಾರಗಳ ಪಟ್ಟಿ ಕೆಳಗಿದೆ.

* ಹರ್ಯಾಣ ಮುಖ್ಯಮಂತ್ರಿಯಿಂದ 6 ಕೋಟಿ ರೂಪಾಯಿ ನಗದು ಪುರಸ್ಕಾರ, ಮುಂದೆ ಪಂಚಕುಲದಲ್ಲಿ ಆರಂಭಗೊಳ್ಳಲಿರುವ ಎಕ್ಸಲೆನ್ಸ್ ಫಾರ್ ಅಥ್ಲೆಟಿಕ್ಸ್‌ನ ಮುಖ್ಯಸ್ಥರಾಗಿ ಘೋಷಿಸಲಾಗಿದೆ.

* ಪಂಜಾಬ್ ಮುಖ್ಯಮಂತ್ರಿಯಿಂದ 2 ಕೋಟಿ ರೂಪಾಯಿ ನಗದು ಪುರಸ್ಕಾರ.

* ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನಿಂದ 75 ಲಕ್ಷ ರೂ.

* ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನಿಂದ 1 ಕೋಟಿ ರೂಪಾಯಿ.

* ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ)ಯಿಂದ 1 ಕೋಟಿ ರೂ.

* ಎಲನ್ ಗ್ರೂಪ್ (ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಗ್ರೂಪ್) 25 ಲಕ್ಷ ರೂಪಾಯಿ.

* ಕ್ರಿಕೆಟ್‌ನ ಪ್ರಮುಖ ಪ್ರಾಯೋಜಕ 'ಬೈಜೂಸ್'ನಿಂದ 2 ಕೋಟಿ ರೂ.

ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ವಿಶೇಷ ದಾಖಲೆ ಬರೆದಿದ್ದ ಚೋಪ್ರಾ

ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ವಿಶೇಷ ದಾಖಲೆ ಬರೆದಿದ್ದ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ (ಈಟಿ) ಎಸೆತದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 23ರ ಹರೆಯ ನೀರಜ್ ಚೋಪ್ರಾ, 87.58 ಮೀಟರ್ ಸಾಧನೆಯೊಂದಿಗೆ ಬಂಗಾರ ಗೆದ್ದಿದ್ದರು. ಈ ಬಂಗಾರದ ಪದಕ ಹಲವಾರು ದಾಖಲೆಗಳಿಗೆ ಕಾರಣವಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲನೇ ಚಿನ್ನವಾಗಿ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಮೊದಲನೇ ಬಂಗಾರದ ಪದಕವಾಗಿ, ಒಲಿಂಪಿಕ್ಸ್‌ನಲ್ಲಿ ಭಾರತದ ಪರ ವೈಯಕ್ತಿಕ ವಿಭಾಗದಲ್ಲಿ ಗೆದ್ದ ಎರಡನೇ ಪದಕವಾಗಿ, ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಪದಕವಾಗಿ ಈ ಸಾಧನೆ ಗುರುತಿಸಿಕೊಂಡಿದೆ. ಭಾರತಕ್ಕೆ ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಬಂದಿದ್ದು ಬ್ರಿಟಿಷ್-ಇಂಡಿಯನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ ಅವರಿಗೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿಚರ್ಡ್ 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಬಂಗಾರ ಗೆದ್ದ ಹಿರಿಮೆ ಶೂಟರ್ ಅಭಿನವ್ ಬಿಂದ್ರಾಗೆ ಸಲ್ಲುತ್ತದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಿಂದ್ರಾ 10 ಮೀಟರ್ ಏರ್ ರೈಫಲ್‌ನಲ್ಲಿ ಬಂಗಾರ ಗೆದ್ದಿದ್ದರು.

ಅತ್ಯಧಿಕ ಪದಕ ಗೆದ್ದು ಭಾರತವೂ ದಾಖಲೆ

ಅತ್ಯಧಿಕ ಪದಕ ಗೆದ್ದು ಭಾರತವೂ ದಾಖಲೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಈ ಬಾರಿ ಅತೀ ಹೆಚ್ಚಿನ ಪದಕ ಗೆದ್ದು ಗಮನ ಸೆಳೆದಿತ್ತು. ಒಟ್ಟು 7 ಪದಕಗಳನ್ನು ಭಾರತ ಗೆದ್ದಿದ್ದು, ಇದರಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಮೊದಲ ಪದಕವಾಗಿ ಗೆದ್ದಿದ್ದರು. ಆ ಬಳಿಕ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದರು. ಮಹಿಳಾ 69 ಕೆಜಿ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಹೊಹೈನ್ ಮತ್ತೊಂದು ಕಂಚು ಸೇರಿಸಿದ್ದರು. ಆ ಬಳಿಕ ಪುರುಷರ ಹಾಕಿಯಲ್ಲೂ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು. ಬಳಿಕ ನಡೆದ ಪುರುಷರ ರಸ್ಲಿಂಗ್ 57 ಕೆಜಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಾಹಿಯಾ ಬೆಳ್ಳಿ ಜಯಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಭಜರಂಗ್ ಪೂನಿಯಾ ಕೂಡ ಕಂಚು ಗೆದ್ದರು. ಕೊನೇಯದಾಗಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಜಾವೆಲಿನ್ ಥ್ರೋನಲ್ಲಿ ಬಂಗಾರ ಲಭಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Saturday, August 21, 2021, 21:13 [IST]
Other articles published on Aug 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X