ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಿಟಿ ವಿಶ್ವ ಚಾಂಪಿಯನ್‌ಷಿಪ್‌: ಸತಿಯನ್‌ ಭಾರತದ ಏಕೈಕ ಭರವಸೆ

Sathiyan lone Indian survivor at ITTF World Cship

ಬುಡಪೆಸ್ಟ್‌, ಏಪ್ರಿಲ್‌ 25: ಅನುಭವಿ ಆಟಗಾರ ತಮಿಳುನಾಡಿದ ಜಿ. ಸತಿಯನ್‌, ಇಲ್ಲಿ ನಡೆಯುತ್ತಿರುವ ಐಟಿಟಿಎಫ್‌ (ಟೇಬಲ್‌ ಟೆನಿಸ್‌) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಏಕಾಂಗಿಯಾಗಿ ಭಾರತದ ಸವಾಲನ್ನು ಹಿಡಿದಿಟ್ಟಿದ್ದಾರೆ.

ಏಷ್ಯ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್, ಪಿವಿ ಸಿಂಧು ದ್ವಿತೀಯ ಸುತ್ತಿಗೆ ಲಗ್ಗೆಏಷ್ಯ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್, ಪಿವಿ ಸಿಂಧು ದ್ವಿತೀಯ ಸುತ್ತಿಗೆ ಲಗ್ಗೆ

ವಿಶ್ವದ 28ನೇ ಶ್ರೇಯಾಂಕದ ಆಟಗಾರ ಜಿ ಸತಿಯನ್‌, 64ರ ಘಟ್ಟದ ಪಂದ್ಯದಲ್ಲಿ ರೊಮೇನಿಯಾದ ಆಟಗಾರ ಕ್ರಿಸ್ಟಿಯಾನ್‌ ಪ್ಲೆಟೆಯಾ ವಿರುದ್ಧ 11-5, 11-9, 6-11,11-7, 11-6 ಅಂತರದ ಗೇಮ್‌ಗಳಿಂದ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದಿದ್ದಾರೆ. ಇದೀಗ ಪ್ರಿ ಕ್ವಾರ್ಟರ್‌ಫೈನಲ್ಸ್‌ ಅರ್ಹತೆಗಾಗಿ ಬ್ರಜಿಲ್‌ನ ಆಟಗಾರ ಕಾಲ್ಡೆರಾನೊ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಆಟಗಾರ ರಾಬಿನ್‌ ಸೇವೋಸ್‌ ಎದುರು 4-0 ಅಂತರದ ಸುಲಭ ಜಯ ದಾಖಲಿಸಿದ್ದ ಸತಿಯನ್‌, ಕ್ರಿಸ್ಟಿಯಾನ್‌ ಎದುರು ಕೊಂಚ ಪರದಾಟ ನಡೆಸಿದರು. ಪಂದ್ಯದಲ್ಲಿ 2-0 ಅಂತರದಲ್ಲಿ ಮುನ್ನಡೆಯಲ್ಲಿದ್ದ ಸತಿಯನ್‌, 3ನೇ ಗೇಮ್‌ನಲ್ಲಿ ಸೋಲನುಭವಿಸಿದರು. ಬಳಿಕ ತಿರುಗೇಟು ನೀಡಿದ ಭಾರತೀಯ ಆಟಗಾರ ಸತತ ಎರಡು ಗೇಮ್‌ಗಳನ್ನು ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

 ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ

ಮತ್ತೊಂದೆಡೆ ಅನುಭವಿ ಆಟಗಾರ ವಿಶ್ವದ 36ನೇ ಶ್ರೇಯಾಂಕ ಹೊಂದಿರುವ ಅಚಂತಾ ಶರತ್‌ ಕಮಲ್‌, 9-11, 10-12, 11-8, 4-11, 9-11 ರಲ್ಲಿ ಕ್ರೊಯೇಷ್ಯಾದ ಆಟಗಾರ ಟಾಮಿಸ್ಲಾವ್‌ ಪುಕಾರ್‌ ವಿರುದ್ಧ ಸೋತು ಸ್ಪರ್ಧೆಯಿಂದ ನನಿರ್ಗಮಿಸಿದ್ದಾರೆ.

ಇನ್ನು ಅರ್ಹತಾ ಸುತ್ತಿನಿಂದ ಪ್ರಧಾನ ಘಟ್ಟಕ್ಕೆ ಮುನ್ನಡೆದಿದ್ದ ಮಾನವ್‌ ಥಕ್ಕರ್‌, 13-11, 6-11, 11-8, 11-3, 2-11, 10-12, 6-11ರಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿ ಅಂತಿಮವಾಗಿ ಆಸ್ಟ್ರೇಲಿಯಾದ ರಾಬರ್ಟ್‌ ಗಾರ್ಡೊಸ್‌ ಎದುರು ಸೋಲೊಪ್ಪಿಕೊಂಡರು.

 ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬಜರಂಗ್‌ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬಜರಂಗ್‌

ಮಹಿಳಾ ವಿಭಾಗದಲ್ಲೂ ನಿರಾಸೆ

ಮಹಿಳಾ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಮನಿಕಾ ಬಾತ್ರಾ ಮತ್ತು ಸುತೀರ್ತ ಮುಖರ್ಜಿ ಕೂಡ 64ರ ಘಟ್ಟದ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. ಮನಿಕಾ, 11-2, 11-8, 7-11, 11-7, 11-9 ಗೇಮ್‌ಗಳಿಂದ ತೈಪೆಯ ಝು-ಯು ಚೆನ್‌ ವಿರುದ್ಧ ಸೋಲುಂಡರೆ, ಸುತೀರ್ತ 11-4, 8-11, 11-7, 5-11, 3-11,9-11ರ ಗೇಮ್‌ಗಳಿಂದ ಪೋರ್ಟೊ ರಿಕೊದ ಆಡ್ರಿಯಾನಾ ಡಿಯಾಜ್‌ಗೆ ಶರಣಾದರು.

Story first published: Wednesday, April 24, 2019, 19:23 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X