Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಚಾಂಪಿಯನ್ ಅಥ್ಲೀಟ್ ಮನ್‌ಪ್ರೀತ್ ಕೌರ್‌ಗೆ 4 ವರ್ಷಗಳ ನಿಷೇಧ

Shot putter Manpreet Kaur banned for 4 years for doping

ನವದೆಹಲಿ, ಏಪ್ರಿಲ್ 9: ಏಷ್ಯನ್ ಚಾಂಪಿಯನ್ ಅಥ್ಲೀಟ್, ಶಾಟ್ ಪುಟ್ ಸ್ಪರ್ಧಿ ಮನ್‌ಪ್ರೀತ್‌ ಕೌರ್‌ಗೆ ನ್ಯಾಷನಲ್ ಆ್ಯಂಟಿ-ಡೋಪಿಂಗ್ ಏಜೆನ್ಸಿ (ನಾಡಾ) 4 ವರ್ಷಗಳ ನಿಷೇಧ ಹೇರಿದೆ. 2017ರಲ್ಲಿ ನಡೆದ ಡೋಪ್ ಟೆಸ್ಟ್‌ಗೆ ಸಂಬಂಧಿಸಿ ಅವರಿಗೆ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಮನ್‌ಪ್ರೀತ್‌ ಅವರ ನಿಷೇಧ 20 ಜುಲೈ 2017ರಿಂದಲೇ ಆರಂಭಗೊಂಡಿದೆ. ಕೌರ್‌ಗೆ ನಿಷೇಧ ಹೇರಿರುವ ಕುರಿತು ನಾಡಾದ ಉದ್ದೀಪನ ವಿರೋಧಿ ಶಿಸ್ತು ಸಮಿತಿ ಮಾರ್ಚ್ 29ರ ದಿನಾಂಕವಿರುವ ಹೇಳಿಕೆಯಲ್ಲಿ ತಿಳಿಸಿದೆ ಎಂದು ತಿಳಿದು ಬಂದಿದೆ.

2017ರಲ್ಲಿ ಭುವನೇಶ್ವರ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಮನ್‌ಪ್ರೀತ್‌ ಕೌರ್‌ಗೆ ಬಂಗಾರ ಲಭಿಸಿತ್ತು. ದೊರೆತ ಆ ಚಿನ್ನದ ಪದಕವನ್ನು ಕೌರ್ ಕಳೆದುಕೊಳ್ಳಲಿದ್ದಾರೆ. ಸ್ಪರ್ಧೆಯ ನಂತರ 2017ರಲ್ಲಿ ವಿವಿಧ ಹಂತಗಳಲ್ಲಿ ನಡೆಸಲಾದ ಉದ್ದೀಪನ ಪರೀಕ್ಷೆಯಲ್ಲಿ ಕೌರ್ ಫೇಲಾಗಿದ್ದರು.

Story first published: Tuesday, April 9, 2019, 23:31 [IST]
Other articles published on Apr 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+