ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟ 2022: ಮೇ. 16ರಂದು ಬೆಂಗಳೂರಿನಲ್ಲಿ ಸಿಗಲಿದೆ ಚಾಲನೆ

Mini olympic games 2022

ಬೆಂಗಳೂರಿನಲ್ಲಿ ಎರಡನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಇದೇ ತಿಂಗಳು ಮೇ.16ರಂದು ಚಾಲನೆ ಸಿಗಲಿದ್ದು, ಒಂದು ವಾರಗಳ ನಡೆಯುವ ಈ ಸ್ಪರ್ಧೆಯಲ್ಲಿ 21 ಕ್ರೀಡಾ ಸ್ಪರ್ಧೆಗಳಿವೆ. ಈ ಕ್ರೀಡಾಕೂಟವನ್ನ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆ.ಓ.ಎ)ವತಿಯಿಂದ ಆಯೋಜಿಸಲಾಗುತ್ತಿದೆ.

2020ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಕ್ರೀಡಾಕೂಟವು ಬಹು ಯಶಸ್ವಿಯಾಗಿ ನಡೆಯಿತು. ರಾಜ್ಯದಲ್ಲಿ ಎರಡನೇ ಬಾರಿಗೆ ಈ ಕ್ರೀಡಾಕೂಟವನ್ನ ಆಯೋಜಿಸಲಾಗುತ್ತಿದ್ದು, ದಿನಾಂಕ 16.05.2022 ರಿಂದ ದಿನಾಂಕ 22.05.2022ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ಭಾರತದ ಭವಿಷ್ಯದ ಕ್ರೀಡಾಪಟುಗಳನ್ನ ಬೆಳೆಸುವ ದೃಷ್ಟಿಯಲ್ಲಿ ಮಿನಿ ಒಲಿಂಪಿಕ್ಸ್‌ ಅನ್ನು ದೇಶದಲ್ಲಿ ಮೊದಲನೆಯ ಬಾರಿಗೆ ಆರಂಭಿಸಲಾಯಿತು. ಆದ್ರೆ ಕೋವಿಡ್ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳು ನಡೆದಿಲ್ಲ, ಈ ಬಾರಿ ಎರಡನೇ ವರ್ಷ ಕ್ರೀಡಾಕೂಟವನ್ನ ಆಯೋಜಿಸಲಾಗಿದೆ.

ಈ ಎರಡನೇ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟಲದಲ್ಲಿ 14 ವಯಸ್ಸಿನೊಳಗಿನ ಒಟ್ಟು 5 ಸಾವಿರ ಬಾಲಕ ಮತ್ತು ಬಾಲಕಿಯರು ಭಾಗವಹಿಸುವ ನಿರೀಕ್ಷಿಯಿದೆ. ಈ ಕ್ರೀಡಾಕೂಟದಲ್ಲಿ ಒಟ್ಟು 21 ಸ್ಪರ್ಧೆಗಳು ನಡೆಯಲಿದ್ದು ಅವುಗಳು ಈ ಕೆಳಗಿನಂತಿದೆ.

ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್‌, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೊಖೊ, ಲಾನ್ ಟೆನ್ನಿಸ್, ನೆಟ್‌ ಬಾಲ್‌, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆಕ್‌ವ್ಯಾಂಡೋ, ವೈಟ್‌ಲಿಫ್ಟಿಂಗ್, ಮುಂತಾದವುಗಳು ಈ ಮಿನಿ ಒಲಿಂಪಿಕ್ಸ್‌ನಲ್ಲಿ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳಿಂದ ಪ್ರತಿ ಕ್ರೀಡಾ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಅಗ್ರ 8 ಶ್ರೇಯಾಂಕದ ಕ್ರೀಡಾಳುಗಳು ಭಾಗವಹಿಸುತ್ತಾರೆ.

ಇನ್ನು ಮೇ 16ರಂದು ಸಂಜೆ 4.30ಕ್ಕೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 2ನೇ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವನ್ನ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣಗೌಡರು ಉದ್ಘಾಟನೆ ಮಾಡಲಿದ್ದಾರೆ.

ಕ್ರೀಡಾಕೂಟದ ಸ್ಪರ್ಧೆಗಳು ನಡೆಯುವ ಸ್ಥಳಗಳು:
ಹ್ಯಾಂಡ್‌ಬಾಲ್, ನೆಟ್‌ಬಾಲ್ ಹಾಗೂ ಖೊಖೊ ಸ್ಪರ್ಧೆಗಳು ವಿದ್ಯಾನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ, ರೈಫಲ್ ಶೂಟಿಂಗ್ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣದ ಕೇಂದ್ರದಲ್ಲಿ ನಡೆಯಲಿದೆ. ಸೈಕ್ಲಿಂಗ್‌ ನೈಸ್ ರಸ್ತೆಯಲ್ಲಿ, ಫುಟ್ಬಾಲ್ ಕ್ರೀಡೆಯು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ, ಜಿಮ್ನಾಸ್ಟಿಕ್ ಹೂಡಿಯಲ್ಲಿರುವ ಗೋಪಾಲನ್ ಸ್ಪೋರ್ಟ್ಸ್‌ ಕೇಂದ್ರದಲ್ಲಿ, ಸ್ವಿಮ್ಮಿಂಗ್ ಬಸವನಗುಡಿಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾಗೂ ಹಾಕಿ ಶಾಂತಿನಗರದ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನುಳಿದಂತೆ ಸ್ಪರ್ಧೆಗಳು ಶ್ರೀ ಕಂಠೀರವ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆಯೋಜನೆಗೊಳ್ಳಲಿದೆ.

Story first published: Thursday, May 12, 2022, 21:49 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X