ಒಲಿಂಪಿಯನ್ ಸೌಮ್ಯಜಿತ್ ವಿರುದ್ಧ ಅತ್ಯಾಚಾರ ಆರೋಪ

Posted By:
Table tennis player Soumyajit Ghosh accused of rape, kin deny charges

ಕೋಲ್ಕತಾ, ಮಾರ್ಚ್ 22 : ಒಲಿಂಪಿಯನ್, ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಶ್ ವಿರುದ್ಧ 18 ವರ್ಷ ವಯಸ್ಸಿನ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊರೆಸಲಾಗಿದೆ. ಈ ಕುರಿತಂತೆ ಯುವತಿ ನೀಡಿರುವ ದೂರಿನ ಮೇರಿಗೆ ಸೌಮ್ಯಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸಲಾಗಿದೆ.

ಕಿರಿಯ ವಯಸ್ಸಿಗೆ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದ ಸೌಮ್ಯಜಿತ್ ಅವರಿಗೆ ಅರ್ಜುನ ಪ್ರಶಸ್ತಿಯೂ ಸಂದಿದೆ. ಬರಸಾತ್ ಮಹಿಳಾ ಪೊಲೀಸ್ ಠಾಣೆಯವರು ತನಿಖೆ ಕೈಗೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ನಾನು ಅವರು ಒಟ್ಟಿಗೆ ಇದ್ದೆವು. ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ. ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನನಗಾಗ 15 ವರ್ಷ ವಯಸ್ಸು ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

ಕಾಮನ್ ವೆಲ್ತ್ ಗೇಮ್ಸ್ ಹತ್ತಿರವಿರುವಾಗ ಇಂಥ ಆರೋಪ ಕೇಳಿ ಬಂದಿದೆ. ಸೌಮ್ಯಜಿತ್ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಇದು ಹಣ ಕಿತ್ತುಕೊಳ್ಳಲು ಮಾಡಿರುವ ತಂತ್ರ ಎಂದು ಸೌಮ್ಯಜಿತ್ ಅವರ ಸಂಬಂಧಿಕರು ಪ್ರತಿಕ್ರಿಯಿಸಿದ್ದಾರೆ.

2012 ಹಾಗೂ 2016ರ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸೌಮ್ಯಜಿತ್ ಅವರು 19ನೇ ವಯಸ್ಸಿಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

Story first published: Thursday, March 22, 2018, 14:13 [IST]
Other articles published on Mar 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ