ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಿಸಿಎಸ್ 10 ಕೆ ಕ್ರಮಿಸಲು 55 ನಿಮಿಷ : ಪುನೀತ್ ರಾಜ್

ಈ ಬಾರಿಯ ಟಿಸಿಎಸ್ ವಿಶ್ವ 10 ಕೆ ಓಟದ ಸ್ಪರ್ಧೆಯಲ್ಲಿ 55 ನಿಮಿಷಗಳಲ್ಲಿ ನಿಗದಿತ ದೂರ ಕ್ರಮಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದ ಎಂದು ನಟ ಹಾಗೂ ಸ್ಪರ್ಧೆಯ ರಾಯ ಭಾರಿ ಪುನೀತ್‌ ರಾಜ್‌ಕುಮಾರ್‌

By Mahesh

ಬೆಂಗಳೂರು, ಮೇ 12: 'ಈ ಬಾರಿಯ ಟಿಸಿಎಸ್ ವಿಶ್ವ 10 ಕೆ ಓಟದ ಸ್ಪರ್ಧೆಯಲ್ಲಿ 55 ನಿಮಿಷಗಳಲ್ಲಿ ನಿಗದಿತ ದೂರ ಕ್ರಮಿಸುವ ಗುರಿ ಇಟ್ಟುಕೊಂಡಿದ್ದೇನೆ, ಕಳೆದ ಬಾರಿ 10 ಕಿಲೊ ಮೀಟರ್ಸ್‌ ದೂರವನ್ನು ಕ್ರಮಿಸಲು 59 ನಿಮಿಷಗಳನ್ನು ತೆಗೆದು ಕೊಂಡಿದ್ದೆ' ಎಂದು ನಟ ಹಾಗೂ ಸ್ಪರ್ಧೆಯ ರಾಯ ಭಾರಿ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.

ಈಗಿನಿಂದಲೇ ಅಭ್ಯಾಸ ಆರಂಭಿಸಿದ್ದೇನೆ, ದಿನನಿತ್ಯ ಹೆಚ್ಚು ಸ್ಟ್ರೇಚಿಂಗ್ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ಈ ಬಾರಿ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಸಾಕಷ್ಟು ನೀರು ಕುಡಿಸುತ್ತಿದೆ ಎಂದು ಪುನೀತ್ ನಕ್ಕರು.

ಈ ನಡುವೆ ವಿಶ್ವ ಪ್ರೀಮಿಯರ್ 10ಕೆ ಓಟಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಟಿಸಿಎಸ್ ವಿಶ್ವ 10ಕೆ ಪ್ರಯೋಜಕರಾದ ಪ್ರೋಕ್ಯಾಮ್ ಇಂಟರ್‌ನ್ಯಾಷನಲ್ ಇಂದು ಟ್ರಿಪಲ್ ಒಲಿಂಪಿಕ್ ಪದಕ ವಿಜೇತ ಸ್ಟೆಫನಿ ರೈಸ್ ಅವರನ್ನು ಸಂಭ್ರಮದ ಹತ್ತನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಅಂತಾರಾಷ್ಟ್ರೀಯ ರಾಯಭಾರಿಯಾಗಿ ಘೋಷಿಸಲಾಗಿದೆ.

ಈ ವರ್ಷ ಪೊಲೀಸ್ ಕಪ್ ಅನ್ನು ಪರಿಚಯಿಸಲಾಗುತ್ತಿದೆ. ಇದೊಂದು ವಿಶೇಷ ವಿಭಾಗವಾಗಿದ್ದು, ಈ ಹಿಂದಿನ ಎಲ್ಲಾ ವರ್ಷಗಳಿಂದ ಶ್ರಮವಹಿಸಿರುವ ಪೊಲೀಸರನ್ನು ಶ್ಲಾಘಿಸಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿ ಮೊತ್ತಕ್ಕಾಗಿ ಮೂವರ ಸದಸ್ಯರ 57 ತಂಡಗಳು ಇದಕ್ಕಾಗಿ ಪೈಪೋಟಿ ನಡೆಸಲಿವೆ.

ನಟ ಪುನೀತ್ ರಾಜ್‌ಕುಮಾರ್

ನಟ ಪುನೀತ್ ರಾಜ್‌ಕುಮಾರ್

ಮತ್ತೊಮ್ಮೆ ಬೆಂಗಳೂರು ಓಟವನ್ನು ಪ್ರೋತ್ಸಾಹಿಸಲು ಉತ್ಸುಕನಾಗಿದ್ದೇನೆ. ಹಿಂದಿನ ಪ್ರತಿ ವರ್ಷದಿಂದಲೂ ಟಿಸಿಎಸ್ ವಿಶ್ವ 10ಕೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಮತ್ತು ಬೆಂಗಳೂರು ಓಟದ ಕೇಂದ್ರಬಿಂದುವಾಗಿ ರೂಪುಗೊಳ್ಳುತ್ತಿದೆ. ಅಲ್ಲದೆ ನಗರವು ಸ್ವಯಂ ಫಿಟ್ನೆಸ್ ಮತ್ತು ಆರೋಗ್ಯಕ್ಕೆ ಬದ್ಧವಾಗಿದೆಕಳೆದ ವರ್ಷಗಳಿಂದ ಇದು ಅತ್ಯಂತ ಸ್ಮರಣೀಯ ರೇಸ್‌ಗಳಾಗುವುದರಲ್ಲಿ ಭರವಸೆ ಇದೆ." ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ನಗರದಲ್ಲಿ ಕಳೆದೊಂದು ದಶಕದಿಂದ ಮೈಲುಗಲ್ಲಾಗಿರುವ ಟಿಸಿಎಸ್ ವಿಶ್ವ 10ಕೆಯ ಈ ವರ್ಷವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾಯೋಜಕರು ಆಯೋಜಿಸಿದ್ದಾರೆ. ಶ್ರೀ ಕಂಠೀರವ ಕ್ರೀಡಾಂಗಣದ ಸುತ್ತಲೂ ಸಂಗೀತ ಕಾರ್ಯಕ್ರಮ, ರ್ಸ್ಪಗಳ ಓಟದ ನೇರ ಪ್ರಸಾರಗಳನ್ನು ಆಯೋಜಿಸಲಾಗಿದೆ. ಈ ಬಾರಿ ದಿನದ ರೇಸ್‌ನ ವೇಳಾ ಪಟ್ಟಿ ಪರಿಷ್ಕೃರಿಸಿರುವ ಕುರಿತು ಪ್ರೋಕ್ಯಾಮ್ ಇಂಟರ್‌ನ್ಯಾಷನಲ್ ಘೋಷಿಸುತ್ತಿದೆ.

ಶೇಕಡ 12ರಷ್ಟು ಸ್ಪರ್ಧಿಗಳು ಹೆಚ್ಚಳ

ಶೇಕಡ 12ರಷ್ಟು ಸ್ಪರ್ಧಿಗಳು ಹೆಚ್ಚಳ

ಮೇ 21ರ ಭಾನುವಾರ ನಡೆಯಲಿರುವ ಓಟದಲ್ಲಿರುವ ಎಲ್ಲಾ ಆರು ಸ್ಪರ್ಧೆಗಳಲ್ಲಿ 23 ಸಾವಿರ ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದನ್ನು ಪ್ರಯೋಜಕರು ಪ್ರಕಟಿಸಿದ್ದಾರೆ. ಓಪನ್ 10ಕೆಯಲ್ಲಿ ವಿಭಾಗದಲ್ಲಿ 13 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಹಿಂದಿನ ಆವೃತ್ತಿಗಿಂತ ಇದು ಶೇಕಡ 12ರಷ್ಟು ಹೆಚ್ಚಳವಾಗಿದೆ.

2 ಲಕ್ಷ ಯುಎಸ್ ಡಾಲರ್ ಬಹುಮಾನ

2 ಲಕ್ಷ ಯುಎಸ್ ಡಾಲರ್ ಬಹುಮಾನ

2 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಈ ಮ್ಯಾರಥಾನ್ ಓಟದಲ್ಲಿ ಟಿಸಿಎಸ್ ವಿಶ್ವ 10ಕೆಯ ಎರಡು ಬಾರಿಯ ಹಾಲಿ ಚಾಂಪಿಯನ್ ಮತ್ತು ಯಾಂಗ್‌ಜೌನ್ ಹಾಫ್ ಮ್ಯಾರಥಾನ್ ವಿಜೇತ ಇಥಿಯೋಪಿಯಾದ ಮೊಸಿನೆಟ್ ಜೆರೆಮೆವ್, 10ಕೆ ಮತ್ತು 15ಕೆ ವಿಶ್ವ ದಾಖಲೆ ಒಡೆಯ ಕೀನ್ಯಾದ ಲಿಯೋನಾರ್ಡೊ ಕೊಮೋನ್ ಪುರುಷರ ವಿಭಾಗದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಪುನೀತ್ ನೆಚ್ಚಿನ ಓಟ

ಪುನೀತ್ ನೆಚ್ಚಿನ ಓಟ

ನಗರದ ಅತಿ ವೇಗದ ರೇಸ್‌ಗಳಲ್ಲಿ ಒಂದಾಗಿರುವ ಎಲೈಟ್ ಪುರುಷರ ವಿಶ್ವ 10ಕೆ ಓಟದಲ್ಲಿ ರ್ಸ್ಪಸುವ ಓಟಗಾರರಿಗೆ ಬೆಂಗಳೂರು ನಗರದ ಜನತೆ ಮತ್ತಷ್ಟು ಉತ್ತೇಜನ ನೀಡುವ ಹಾಗೂ ಸಾಕ್ಷಿಕರಿಸುವ ನಿಟ್ಟಿನಲ್ಲಿ ಎಲೈಟ್ ಪುರುಷರ ವಿಶ್ವ 10ಕ್ಕೆ ಓಟ 8:30ಕ್ಕೆ ಚಾಲನೆ ನೀಡಲಾಗುತ್ತದೆ. ಪರಿಷ್ಕೃತ ವೇಳಾ ಪಟ್ಟಿಯಂತೆ ಓಪನ್ 10ಕೆ ಬೆಳಗ್ಗೆ 5:30ಕ್ಕೆ ಚಾಲನೆ ದೊರೆಯಲಿದೆ.

ಬಿಸಿಲಿನ ಬಗ್ಗೆ ಎಚ್ಚರ ಎಂದ ಪುನೀತ್

ಬಿಸಿಲಿನ ಬಗ್ಗೆ ಎಚ್ಚರ ಎಂದ ಪುನೀತ್

ನಂತರ ಜನಪ್ರಿಯ ಓಟ ಮಜ್ಜಾ ರನ್‌ಗೆ ಬೆಳಗ್ಗೆ 8:45ಕ್ಕೆ ಹಸಿರು ನಿಶಾನೆ ದೊರೆಯಲಿದೆ. ಬಿಸಿಲು ಅಧಿಕಗೊಳ್ಳುವ ಮೊದಲು ಅಮೆಚೂರ್ ಸ್ಪರ್ಧೆಗಳ ರೇಸ್ ಪೂರ್ಣಗೊಳಿಸುವುದನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಹಾಗೂ ರಸ್ತೆ ರೇಸ್‌ನ ವಿಶೇಷ ಅಥ್ಲೀಟ್‌ಗಳು ಸ್ಪರ್ಧಿಸುವ ಟಿಸಿಎಸ್ ವಿಶ್ವ 10ಕೆಯ ವಿಶ್ವದ ಅತ್ಯಂತ ಪ್ರತಿಷ್ಠಿತ 10ಕೆ ಓಟವನ್ನು ಪ್ರೋತ್ಸಾಹಿಸುವ ಮತ್ತು ಸಾಕ್ಷಿಯಾಗುವ ಸಲುವಾಗಿ ಈ ವೇಳಾ ಪಟ್ಟಿ ಪರಿಷ್ಕೃತಗೊಳಿಸಲಾಗಿದೆ.

ಇಥಿಯೋಪಿಯಾದ ಸ್ಪರ್ಧಿಗಳು

ಇಥಿಯೋಪಿಯಾದ ಸ್ಪರ್ಧಿಗಳು

ಈ ಮಧ್ಯೆ ಎಲೈಟ್ ಮಹಿಳಾ ವಿಭಾಗದಲ್ಲಿ 2017ರ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್ ಕೀನ್ಯಾದ ಐರನ್ ಚೆಫ್ಟೆ, ಬರ್ಲಿನ್ 10ಕೆಯಲ್ಲಿ 30:41 ಸೆ.ಗಳಲ್ಲಿ ಕ್ರಮಿಸಿ ಅತಿ ವೇಗದ ಮಹಿಳಾ ಓಟಗಾರ್ತಿ ಎನಿಸಿರುವ ಗ್ಲೇಡಿಸ್ ಚೇಸಿರ್ ಮತ್ತು ಇಥಿಯೋಪಿಯಾದ ವುಡೆ ಯಿಮೆರ್ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X