ಟಿಸಿಎಸ್ ವಿಶ್ವ10K, ಮೇ 13ರಂದು ಬನ್ನಿ ಓಡೋಣ : ಪುನೀತ್

Posted By:
TCS World 10K awarded IAAF Gold Label, to be held on May 13

ಬೆಂಗಳೂರು, ಮಾರ್ಚ್ 7: ವಿಶ್ವದ ರಸ್ತೆ ಓಟಗಳಲ್ಲೇ ಅತ್ಯಂತ ಜನಪ್ರಿಯ ಹಾಗೂ ಒಂದು ದಶಕ ಪೂರೈಸಿ 11ನೇ ಆವೃತ್ತಿಗೆ ಕಾಲಿಡುತ್ತಿರುವ ಟಾಟಾ ಕನ್ಸ್‌ಲ್ಟೆನ್ಸಿ ಸರ್ವಿಸಸ್ ವಿಶ್ವ 10ಕೆಗೆ ಬೆಂಗಳೂರು ನಗರ ಮತ್ತೊಮ್ಮೆ ಆತಿಥ್ಯ ವಹಿಸುತ್ತಿದೆ.

ಈ ಸಂಬಂಧ ಓಟದ ಪ್ರಾಯೋಜಕತ್ವ ಹೊಂದಿರುವ ಪ್ರೋಕ್ಯಾಮ್ ಇಂಟರ್‌ನ್ಯಾಷನಲ್, ಇಂದು ವಿಶ್ವದ ಅತ್ಯಂತ ಪ್ರತಿಷ್ಠಿತ 10ಕೆ ಓಟಕ್ಕೆ ಮಾರ್ಚ್ 8ರಂದು ನೋಂದಣಿ ಪ್ರಕ್ರಿಯೆ ಆರಂಭವಾಗುತ್ತಿದೆ ಎಂದು ಘೋಷಿಸಿತು.

Puneeth Rajkumar

ಸೆಲೆಬ್ರಿಟಿ ಹಾಗೂ ನಟ ಪುನೀತ್ ರಾಜ್‌ಕುಮಾರ್ ಟಿಸಿಎಸ್ ವಿಶ್ವ 10ಕೆ ಜತೆಗಿನ ತಮ್ಮ ಬಾಂಧವ್ಯವನ್ನು ಈ ಬಾರಿಯೂ ಮುಂದುವರಿಸಿದ್ದಾರೆ. 11ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ನನ್ನ ವೇಳಾಪಟ್ಟಿಯಲ್ಲಿ ಪ್ರತಿ ವರ್ಷ ಈ ಕೂಟವನ್ನು ಎದುರು ನೋಡುತ್ತಿರುತ್ತೇನೆ. ಒಮ್ಮೆ ಇಲ್ಲಿಗೆ ಬಂದರೆ ನಗರವು ಒಂದು ಸಮುದಾಯವಾಗಿ ಒಟ್ಟಾಗಿ ಸೇರಿಕೊಂಡು ಸಾಮಾಜಿಕ ಬದಲಾವಣೆಗಳಿಗೆ ಸಕ್ರಿಯಗೊಳಿಸಲು ಹೆಚ್ಚಿಸಲು ಬದ್ಧತೆ ಮೂಡಿಸುತ್ತದೆ ಎಂದಿದ್ದಾರೆ.

ಅಲ್ಲದೆ ಇಂದು ಬೆಂಗಳೂರಿನಲ್ಲಿ ಟಿಸಿಎಸ್ ವಿಶ್ವ 10ಕೆ ಅತಿದೊಡ್ಡ ಅಂತಾರಾಷ್ಟ್ರೀಯ ಆಚರಣೆಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಓಟದ ದಿನ ಸಿಗುವ ಅನುಭವ ಮತ್ತೊಂದೆಡೆ ದೊರೆಯುವುದಿಲ್ಲ ಎಂಬುದರ ಕುರಿತು ನಾನು ನಿಮಗೆ ಖಾತ್ರಿ ನೀಡುತ್ತೆನೆ. ಇದೇ ಮೊದಲ ಬಾರಿ ಅಥವಾ ಕಳೆದ ಹತ್ತು ಬಾರಿಯಿಂದಲೂ ಪಾಲುದಾರರಾಗಿರುವ ಸಂಸ್ಥೆಗಳು, ನಗರದ ಈ ಆಚರಣೆಯಲ್ಲಿ ಭಾಗಿಯಾಗಿ. ಏಕೆಂದರೆ ಈ ಅನುಭವ ಧನಾತ್ಮಕವಾಗಿ ಆಗಾಧವಾಗಿದೆ ಎಂದು ತಿಳಿಸಿದ್ದಾರೆ.

ಟಿಸಿಎಸ್ ಬ್ಯಾನರ್ ಅಡಿಯಲ್ಲಿ ಎಂಟು ಬಾರಿ ಆಯೋಜನೆಗೊಂಡಿರುವ ಈ ಟಿಸಿಎಸ್ ವಿಶ್ವ 10ಕೆ ಓಟಕ್ಕೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮೇ 13ರಂದು ಭಾನುವಾರ ಚಾಲನೆ ನೀಡಲಾಗುತ್ತದೆ.

ಐಎಎಎಫ್ ಗೋಲ್ಡ್ ಲೆಬಲ್ ರೇಸ್‌ನಲ್ಲಿ ಐದು ವಿಭಾಗಗಳನ್ನು ವರ್ಗೀಕರಿಸಲಾಗಿದೆ. ಆತಿಥೇಯ ದೇಶದ ಓಟಗಾರರು, ವಿಶ್ವದ ಶ್ರೇಷ್ಠ ಟ್ರ್ಯಾಕ್ ಮತ್ತು ಫೀಲ್ಡ್ ಹಾಗೂ ರಸ್ತೆ ಓಟಗಾರರು, ಎಲೈಟ್ ವಿಶ್ವ 10ಕೆ ಪುರುಷ ಮತ್ತು ಮಹಿಳಾ ಓಟಗಾರರು ಈ ರೇಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮೆಚೂರ್ ರನ್ನರ್ಸ್‌ಗಳು ಓಪನ್ 10ಕೆ ವಿಭಾಗದಲ್ಲಿ ಸ್ಪರ್ಧಿಸಿದರೆ, ಓಟದ ಉತ್ಸಾಹಿಗಳು 5.7 ಕಿ.ಮೀ. ಮಜ್ಜ ರನ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 4 ಕಿ.ಮೀ. ಸೀನೀಯರ್ ಸಿಟಿಜನ್ ರನ್‌ನಲ್ಲಿ 60 ವರ್ಷ ಮೇಲ್ಪಟ್ಟ ಮತ್ತು ವಿಶೇಷ ಚೇತನರು ಹಾಗೂ ಅಂಗವಿಕಲರು ಸ್ಪರ್ಧಿಸಬಹುದಾಗಿದೆ.

2018ರ ಮಾರ್ಚ್ 8ರಂದು ಓಟಗಾರರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಏಪ್ರಿಲ್ 20ಕ್ಕೆ ಮುಕ್ತಾಯವಾಗಲಿದೆ. ಅಥವಾ ರನ್ನಿಂಗ್ ಸ್ಲಾಟ್ ಇರುವವರೆಗೂ ಎಲ್ಲಾ ವಿಭಾಗಗಳ ನೋಂದಣಿ ಮುಂದುವರಿಯಲಿದೆ.

Story first published: Wednesday, March 7, 2018, 23:55 [IST]
Other articles published on Mar 7, 2018
Read in English: TCS World 10K on May 13

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ