ಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರ

ಆಗಸ್ಟ್ 7ರ ಶನಿವಾರದಂದು ಟೋಕಿಯೋ ಒಲಿಂಪಿಕ್ಸ್ ಕುರಿತಾಗಿ ಭಾರತೀಯರಿಗೆ ಎರಡೆರಡು ಖುಷಿಯ ವಿಚಾರಗಳು ಲಭಿಸಿವೆ. ಒಂದೇ ದಿನ ಇಬ್ಬರು ಭಾರತೀಯರು ಪದಕಗಳನ್ನು ಗೆಲ್ಲುವುದರ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ಸಂತಸದ ವಾತಾವರಣವನ್ನು ಮೂಡಿಸಿದ್ದಾರೆ. ಮೊದಲಿಗೆ ಪುರುಷರ 65 ಕೆಜಿ ಫ್ರೀಸ್ಟೈಲ್ ರಸ್ಲಿಂಗ್ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಭಾರತಕ್ಕೆ ಪ್ರಸ್ತುತ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಆರನೇ ಪದಕವನ್ನೂ ತಂದುಕೊಟ್ಟರು.

ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಬರ್ ಉಡುಗೊರೆ!ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್‌ಗೆ ಅನಂದ್ ಮಹೀಂದ್ರರಿಂದ ಬಂಬರ್ ಉಡುಗೊರೆ!

ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆದ್ದ ವಿಷಯ ತಿಳಿದು ಸಂಭ್ರಮಿಸುತ್ತಿದ್ದ ಭಾರತೀಯರಿಗೆ ಕೆಲವೇ ಕ್ಷಣಗಳಲ್ಲಿ ಮತ್ತೊಂದು ದೊಡ್ಡ ಸುದ್ದಿ ಮುಟ್ಟಿತು. ಹೌದು ಮತ್ತೊಬ್ಬ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವುದರ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಹಾರಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಬಂದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆದ್ದಿದ್ದಾರೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಬಂಗಾರದ ಪದಕ ಜಯಿಸಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಮೆರಗು ತಂದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

ಶನಿವಾರ (ಆಗಸ್ಟ್ 7) ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಬಂಗಾರ ಎಸೆತದ ಸಾಧನೆ ತೋರಿದ್ದಾರೆ. ಹೀಗೆ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ನೀರಜ್ ಚೋಪ್ರಾಗೆ ಭಾರತದ ಗಣ್ಯರು ಟ್ವಿಟ್ಟರ್ ಮೂಲಕ ಈ ಕೆಳಕಂಡಂತೆ ಶುಭಾಶಯವನ್ನು ಕೋರಿ ಗೌರವ ಸಲ್ಲಿಸಿದ್ದಾರೆ.

ನೀರಜ್ ಪದಕ ಸಾಧನೆ ಎಂದಿಗೂ ಮರೆಯಲಾಗುವುದಿಲ್ಲ

ನೀರಜ್ ಪದಕ ಸಾಧನೆ ಎಂದಿಗೂ ಮರೆಯಲಾಗುವುದಿಲ್ಲ

ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಕುರಿತು ನರೆಂದ್ರ ಮೋದಿ ವಿಶೇಷವಾಗಿ ಟ್ವೀಟ್ ಮಾಡಿದ್ದು 'ಟೋಕಿಯೊದಲ್ಲಿ ಇತಿಹಾಸ ನಿರ್ಮಾಣವಾಗಿದೆ, ಇಂದು ನೀರಜ್ ಚೋಪ್ರಾ ಮಾಡಿರುವ ಸಾಧನೆ ಎಂದಿಗೂ ಮರೆಯಲಾಗದಂತದ್ದು. ಯುವ ನೀರಜ್ ಚೋಪ್ರಾ ಮಾಡಿರುವ ಸಾಧನೆ ಅಪಾರ ದೊಡ್ಡ ಮಟ್ಟದ್ದು, ಇಡೀ ದೇಶವೇ ಹೆಮ್ಮೆ ಪಡುವಂತದ್ದು' ಎಂದು ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.

ನಿಮ್ಮಿಂದಲೇ ಭಾರತ ಇಂದು ಪ್ರಜ್ವಲಿಸುತ್ತಿದೆ

ನಿಮ್ಮಿಂದಲೇ ಭಾರತ ಇಂದು ಪ್ರಜ್ವಲಿಸುತ್ತಿದೆ

ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಕೂಡ ನೀರಜ್ ಚೋಪ್ರಾಗೆ ವಿಶೇಷ ಸಾಲುಗಳನ್ನು ಬರೆದುಕೊಳ್ಳುವುದರ ಮೂಲಕ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. 'ಇಂದು ನೀವು ಮಾಡಿರುವ ಸಾಧನೆಯಿಂದ ಇಡೀ ಭಾರತ ಪ್ರಜ್ವಲಿಸುತ್ತಿದೆ, ಜಾವೆಲಿನ್ ಥ್ರೋನಲ್ಲಿ ನೀವು ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿರುವುದು ಎಂದೆಂದಿಗೂ ಶಾಶ್ವತ ಸಾಧನೆಯಾಗಿರಲಿದೆ. ಭಾರತ ಕ್ರೀಡಾ ಜಗತ್ತಿಗೆ ಇದು ಎಂತಹ ಒಳ್ಳೆಯ ಘಳಿಗೆ' ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಮೊದಲ ಪದಕ ಗೆದ್ದಿದ್ದ ಮೀರಾಬಾಯಿ ಚಾನುಯಿಂದಲೂ ಮೆಚ್ಚುಗೆ

ಮೊದಲ ಪದಕ ಗೆದ್ದಿದ್ದ ಮೀರಾಬಾಯಿ ಚಾನುಯಿಂದಲೂ ಮೆಚ್ಚುಗೆ

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊದಲ ನೇ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಕೂಡ ನೀರಜ್ ಚೋಪ್ರಾ ಸಾಧನೆಗೆ ಶುಭಾಶಯವನ್ನು ಕೋರಿದ್ದಾರೆ. ಭಾರತ ಪರ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಶುಭಾಶಯಗಳು, ನಿಮ್ಮ ಈ ಸಾಧನೆಯಿಂದ ಇಡೀ ದೇಶಕ್ಕೆ ಹೆಮ್ಮೆ ಬಂದಿದೆ ಎಂದು ಮೀರಾಬಾಯಿ ಚಾನು ಟ್ವೀಟ್ ಮಾಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 7, 2021, 19:38 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X