ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ನಿರಾಸೆ, 6ನೇ ಸ್ಥಾನ ಪಡೆದ ಕಮಲ್‌ಪ್ರೀತ್‌ ಕೌರ್

Tokyo Olympics: Indian athlete Kamalpreet Kaur finished sixth in discus throw final

ಟೋಕಿಯೋ ಆಗಸ್ಟ್ 2: ಇಂದು ನಡೆದ ಡಿಸ್ಕಸ್ ಎಸೆತದ ಫೈನಲ್ ಹಂತದ ಸ್ಪರ್ಧೆಯಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ 6ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದ ಪರವಾಗಿ ಪದಕದ ಸಾಧನೆ ಮಾಡಲು ಕಮಲ್‌ಪ್ರೀತ್ ಕೌರ್ ವಿಫಲವಾದರು.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವ ಮೂಲಕ ಭಾರತೀಯರಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದರು ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್. ಆದರೆ ಫೈನಲ್‌ನಲ್ಲಿ ಕೌರ್ ಎಡವಿದ್ದಾರೆ. ಆದರೂ ಫೈನಲ್‌ನಲ್ಲಿ 6ನೇ ಸ್ಥಾನವನ್ನು ಸಂಪಾದನೆ ಮಾಡುವ ಮೂಲಕ ಭಾರತದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಮಲ್‌ಪ್ರೀತ್ ಕೌರ್ ಪದಕ ಗೆಲ್ಲಲು ವಿಫಲವಾದರು ಕೂಡ ಭಾರತೀಯ ಕ್ರೀಡಾ ಪ್ರೇಮಿಗಳು ಹೆಮ್ಮೆಪಡುವಂತಾ ಸಾಧನೆ ಮಾಡಿದ್ದಾರೆ.

ಫೆಡರೇಶನ್ ಕಪ್ ಸಾಧನೆ ಪುನರಾವರ್ತಿಸಲು ವಿಫಲ: ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಪಡೆದ ಕಮಲ್‌ಪ್ರೀತ್ ಮೊದಲ ಪ್ರಯತ್ನದಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದರು. ಈ ನಿರೀಕ್ಷೆಗೆ ಕಾರಣವೂ ಇತ್ತು. ಪಾಟಿಯಾಲದಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್‌ ಕಪ್‌ನಲ್ಲಿ ಕಮಲ್‌ಪ್ರೀತ್ 66.69 ಮೀಟರ್ ದೂರಕ್ಕೆ ಎಸೆದು ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಿದ್ದರೂ ಪದಕಗಳಿಸಿರುತ್ತಿದ್ದರು ಕಮಲ್‌ಪ್ರೀತ್.

ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!

ಫೈನಲ್‌ನಲ್ಲಿ ಹಿನ್ನೆಡೆ: ಆದರೆ ದುರಾದೃಷ್ಟವಶಾತ್ ಫೈನಲ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಎಸೆದ 64 ಮೀಟರ್ ದೂರದಷ್ಟು ಕೂಡ ಡಿಸ್ಕಸ್ ಎಸೆಯಲು ಕಮಲ್‌ಪ್ರೀತ್ ವಿಫಲವಾಗಿದ್ದಾರೆ. ಮೊದಲ ಪ್ರಯತ್ನದಲ್ಲಿ ಅವರು 61.62 ಮೀಟರ್ ಎಸೆಯುವ ಮೂಲಕ ತಮ್ಮ ಸ್ಪರ್ಧೆಯನ್ನು ಆರಂಭಿಸಿದರು. ಮೂರನೇ ಅವಕಾಶದಲ್ಲಿ ಅವರು 63.70 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರ 8ರಲ್ಲಿ ಸ್ಥಾನ ಸಂಪಾದಿಸಿದರು.

ಫೈನಲ್ ಸೆಣೆಸಾಟಕ್ಕೆ ಮಳೆ ಕಾಟ: ಇನ್ನು ಇಂದಿನ ಈ ಫೈನಲ್ ಹಂತದ ಹಣಾಹಣಿಯಲ್ಲಿ ಮಳೆ ಅಡ್ಡಿಯುಂಟು ಮಾಡಿದ ಘಟನೆಯೂ ನಡೆಯಿತು. ಇದರಿಂದಾಗಿ ಕ್ರೀಡಾಪಟುಗಳ ಡಿಸ್ಕಸ್ ಎಸೆತಕ್ಕೆ ಅಡ್ಡಿಯುಂಟಾಯಿತು. ಹೀಗಾಗಿ ಕೆಲ ಕಾಲ ಈ ಪನಲ್ ಹಂತದ ಸ್ಪರ್ಧೆಯನ್ನು ಮುಂದೂಡಲಾಗಿತ್ತು. ಆದರೆ ನಂತರ ಮಳೆ ಕಡಿಮೆಯಾದ ಬಳಿಕ ಮತ್ತೆ ಮುಂದುವರಿಸಲಾಯಿತು.

ಚಿನ್ನದ ಪದಕ ಅಮೆರಿಕಾ ಪಾಲು: ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಯುನೈಟೆಡ್ ಸ್ಟ್ರೇಟ್ಸ್ ಆಫ್ ಅಮೆರಿಕಾದ ವ್ಯಾಲರಿ ಆಲ್ಮನ್ ಪಾಲಾಯಿತು. ಆಲ್ಮನ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 68.8 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಬೆಳ್ಳಿ ಪದಕ ಜರ್ಮನಿಯ ಕ್ರಿಸ್ಟಿನ್ ಪಡೆನ್ಜ್ ಪಾಲಾಯಿತು. 66.86 ಮೀಟರ್ ದೂರಕ್ಕೆ ಎಸೆದು ಬೆಳ್ಳಿಯ ಪದಕವನ್ನು ಪಡೆದುಕೊಂಡರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯೂ ಹೌದು. ಕಂಚಿನ ಪದಕ ಕ್ಯೂಬಾದ ಯೆಯ್ಮ್ ಪೆರೆಜ್ ಪಾಲಾಗಿದೆ. 65.72 ಮೀಟರ್ ದೂರಕ್ಕೆ ಎಸೆದು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ 11ನೇ ದಿನ ಭಾರತ ಯಾವುದೇ ಪದಕವನ್ನು ಗೆಲ್ಲಲು ವಿಫಲವಾಗಿದೆ. ನಿರೀಕ್ಷೆ ಮೂಡಿಸಿದ್ದ ಕಮಲ್‌ಪ್ರೀತ್ ಕೌರ್ ಫೈನಲ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಹೀಗಾಗಿ ಭಾರತ ಮತ್ತೊಮ್ಮೆ ನಿರಾಸೆಯನ್ನು ಅನುಭವಿಸಿದೆ.

ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗೆಲ್ಲಲು ಸಫಲವಾಗಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರೆ ಬಳಿಕ ಭಾನುವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಸೋಮವಾರ ಭಾರತದ ಮಹಿಳಾ ಹಾಕಿ ತಂಡ ದೊಡ್ಡ ಭರವಸೆ ಮೂಡಿಸಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

Story first published: Tuesday, August 3, 2021, 10:01 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X