For Quick Alerts
ALLOW NOTIFICATIONS  
For Daily Alerts

ಗೆದ್ದಿದ್ದ ಕಂಚಿನ ಪದಕ ಕಳೆದುಕೊಂಡ ಡಿಸ್ಕಸ್ ಥ್ರೋವರ್ ವಿನೋದ್ ಕುಮಾರ್!

Tokyo Paralympics 2021: Indias Para Discus Thrower Vinod Kumar loses Bronze

ಟೋಕಿಯೋ: ಟೋಕಿಯೋ ಪ್ಯಾರಾಲಂಪಿಕ್ಸ್‌ ಪುರುಷರ ಡಿಸ್ಕಸ್ ಥ್ರೋ ಎಫ್‌-52 ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಗೆದ್ದಿರುವ ಕಂಚಿನ ಪದಕವನ್ನು ಮತ್ತೆ ಕಳೆದುಕೊಂಡಿದ್ದಾರೆ. ಅಂಗ ವೈಕಲ್ಯ ವಿಭಾಗದಲ್ಲಿ ಸ್ಪರ್ಧಿಸಲು ಅವರು ಅನರ್ಹರೆಂದು ಘೋಷಿಸಲಾಗಿರುವುದರಿಂದ ವಿನೋದ್ ಜಯಿಸಿದ್ದ ಕಂಚಿನ ಪದಕ ಕೈ ತಪ್ಪಿದೆ. ಪ್ಯಾರಾಲಂಪಿಕ್ಸ್ ತಾಂತ್ರಿಕ ಪ್ರತಿನಿಧಿಗಳು ಪರೀಕ್ಷಿಸಿದ ಬಳಿಕ ಕುಮಾರ್ ಅವರನ್ನು ಅನರ್ಹ ಗೊಳಿಸಿದ್ದಾರೆ.

41ರ ಹರೆಯದ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ (ಬಿಎಸ್‌ಎಫ್‌) ಸದಸ್ಯರಾಗಿರುವ ವಿನೋದ್ ಕುಮಾರ್ ಅವರು 1971ರ ಇಂಡೋ-ಪಾಕ್‌ ಕದನದ ವೇಳೆ ಗಾಯಗೊಂಡಿದ್ದ ಸೈನಿಕನ ಮಗ. ಟೋಕಿಯೋ ಪ್ಯಾರಾಲಂಪಿಕ್ಸ್‌ ಡಿಸ್ಕಸ್ ಥ್ರೋನಲ್ಲಿ ವಿನೋದ್ 19.91 ಮೀಟರ್ ದೂರದೊಂದಿಗೆ ಕಂಚಿನ ಪದಕ ಗೆದ್ದಿದ್ದರು.

ಭಾನುವಾರ (ಆಗಸ್ಟ್ 29) ನಡೆದ ಪುರುಷರ ಎಫ್‌-52 ವಿಭಾಗದ ಡಿಸ್ಕಸ್ ಥ್ರೋನಲ್ಲಿ ಬಂಗಾರದ ಪದಕ ಪೋಲ್ಯಾಂಡ್‌ನ ಪಯೋಟರ್ ಕೊಸೆವಿಚ್ (20.02 ಮೀಟರ್) ಪಾಲಾಗಿತ್ತು. ಬೆಳ್ಳಿ ಪದಕ ಕ್ರೊವೇಷಿಯಾದ ವೆಲಿಮಿರ್ ಸ್ಯಾಂಡರ್ (19.98 ಮೀಟರ್) ಜಯಿಸಿದ್ದರು.

"ಪ್ಯಾರಾಲಂಪಿಕ್ ಸಮಿತಿ ನ್ಯಾಷನಲ್ ಪ್ಯಾರಾಲಂಪಿಕ್ ಕಮಿಟಿಯ ವಿನೋದ್ ಕುಮಾರ್‌ಗೆ ಅನುಮತಿ ನೀಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರನ್ನು ನಿಗದಿತ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹರೆಂದು ಪರಿಗಣಿಸಲಾಗಿದೆ. ಹೀಗಾಗಿ ಅವರ ಸ್ಪರ್ಧೆಯ ಫಲಿತಾಂಶವನ್ನು ಅನರ್ಹವೆಂದು ನಿರ್ಧರಿಸಲಾಗಿದೆ," ಎಂದು ಒಲಿಂಪಿಕ್ ತಾಂತ್ರಿಕ ಸಮಿತಿ ತಿಳಿಸಿದೆ.

Story first published: Monday, August 30, 2021, 16:43 [IST]
Other articles published on Aug 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+