ಟೋಕಿಯೋ ಪ್ಯಾರಾಲಿಂಪಿಕ್ಸ್, Live Updates: ಭಾರತಕ್ಕೆ ಐದನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಕೃಷ್ಣ ನಗರ್

By ಮೈಖೇಲ್ ಕನ್ನಡ ಡೆಸ್ಕ್
Tokyo Paralympics 2021: Live Updates, Results and highlights in Kannada

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಮುಕ್ತಾಯವಾಗಿ ಎರಡು ವಾರಗಳ ಬಳಿಕ ಟೋಕಿಯೋ ಪ್ಯಾರಾಲಂಪಿಕ್ಸ್ ಕ್ರೀಡಾಕೂಟ ಅದೇ ಜಪಾನ್‌ನ ಟೋಕಿಯೋದಲ್ಲಿ ಆರಂಭವಾಗಿದೆ. ಒಲಿಂಪಿಕ್ಸ್ ಆಗಸ್ಟ್ 8ರಂದು ಮುಕ್ತಾಯ ಕಂಡಿದ್ದರೆ, ಪ್ಯಾರಾಲಂಪಿಕ್ಸ್ ಆಗಸ್ಟ್ 24ರಂದು ಶುರುವಾಗಿದೆ. ಸೆಪ್ಟೆಂಬರ್‌ 5ರಂದು ಈ ಜಾಗತಿಕ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 163 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ.

 

ವಿನೇಶ್ ಫೋಗಟ್ ಕ್ಷಮಿಸಲಾಗಿದೆ, ಆಕೆ ಟ್ರಯಲ್ಸ್ ನೀಡಬಹುದು: ಡಬ್ಲ್ಯೂಎಫ್‌ಐವಿನೇಶ್ ಫೋಗಟ್ ಕ್ಷಮಿಸಲಾಗಿದೆ, ಆಕೆ ಟ್ರಯಲ್ಸ್ ನೀಡಬಹುದು: ಡಬ್ಲ್ಯೂಎಫ್‌ಐ

ಜಪಾನ್‌ನ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2021ಕ್ಕಾಗಿ ಭಾರತವೂ ದೊಡ್ಡ ತಂಡ ಕಳುಹಿಸಿಕೊಟ್ಟಿದೆ. ಭಾರತದಿಂದ 54 ಅಥ್ಲೀಟ್‌ಗಳು ಬೇರೆ ಬೇರೆ 9 ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತಕ್ಕೆ ಈ ಬಾರಿ ಹೆಚ್ಚಿನ ಪದಕಗಳು ಬರುವ ನಿರೀಕ್ಷೆಯಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್ ಪ್ರಮುಖ ಅಪ್‌ಡೇಟ್ಸ್‌ ಕೆಳಗಿವೆ

11:02 pm

ಈ ಸಮಾರಂಭದಲ್ಲಿ ಭಾರತದ ಪರವಾಗಿ ಎರಡು ಪದಕಗಳನ್ನು ಗೆದ್ದ ಅವನಿ ಲೇಖರ ಧ್ವಜ ಹಿಡಿದು ಮುನ್ನಡೆಯುವ ಗೌರವ ಪಡೆದುಕೊಂಡರು. ಈಸ ಮಾರೋಪ ಸಮಾರಂಭದಲ್ಲಿ ಭಾರತದ ಒಟ್ಟು 11 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.

11:01 pm

ಟೋಕಿಯೋದಲ್ಲಿ ನಡೆಯುತ್ತಿದ್ದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ತೆರೆಕಂಡಿದೆ. ಭಾನುವಾರ ಟೋಕಿಯೋ ನಗರದ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ಮೂಲಕ ಈ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆಬಿದ್ದಿದೆ.

10:44 am

ಬ್ಯಾಡ್ಮಿಂಟನ್‌ನ ಎಸ್‌ಹೆಚ್ 6 ವಿಭಾಗದಲ್ಲಿ ರಾಜಸ್ಥಾನ ಮೂಲದ ಕೃಷ್ಣ ನಗರ್ ಹಾಂಗ್‌ಕಾಂಗ್‌ನ ಚು ಮನ್ ಕಾಯ್ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 21-17, 16-21, 21-17 ಅಂತರದಿಂದ ಕೃಷ್ಣ ಗೆಲುವು ಸಾಧಿಸುವ ಮೂಲಕ ಭಾರತ ಐದನೇ ಚಿನ್ನದ ಪದಕವನ್ನು ಗೆಲ್ಲಲು ಕಾರಣವಾಗಿದ್ದಾರೆ.

10:44 am

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಐದನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶಟ್ಲರ್ ಕೃಷ್ಣ ನಗರ್ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಸಂಖ್ಯೆಯನ್ನು 19ಕ್ಕೆ ವಿಸ್ತರಿಸಿಕೊಂಡಿದೆ.

09:19 am

ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ಯತಿರಾಜ್ ಕರ್ನಾಟಕ ಮೂಲದವರು ಎಂಬುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ. ಕರ್ನಾಟದ ಹಾಸನದವರಾದ ಸುಹಾಸ್ ಯತಿರಾಜ್ ಉತ್ತರ ಪ್ರದೇಶದ ನೋಯ್ಡಾದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

09:19 am

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಹಾಸ್ ಯತಿರಾಜ್ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್‌(ಐಎಎಸ್) ಅಧಿಕಾರಿಯಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಹಾಗೂ ವಿಶ್ವ ಚಾಂಪಿಯನ್ ಫ್ರಾನ್ಸ್‌ನ ಲೂಕಾಸ್ ಮಜೂರ್ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

05:34 pm

ಟೋಕಿಯೋ ಪ್ಯಾರಾಲಿಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮೋದ್ ಭಗತ್ ಬಂಗಾರ ಗೆದ್ದಿದ್ದಾರೆ. ಶನಿವಾರ (ಸೆಪ್ಟೆಂಬರ್‌ 4) ನಡೆದ ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-3 ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಮೋದ್ ಫೈನಲ್‌ನಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥೆಲ್ ಸೋಲಿಸಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಇದು ಭಾರತಕ್ಕೆ ಕ್ರೀಡಾಕೂಟದಲ್ಲಿ ಲಭಿಸುತ್ತಿರುವ ನಾಲ್ಕನೇ ಬಂಗಾರದ ಪದಕ.

10:08 am

ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಪ್ಟೆಂಬರ್ 4 ರ ದಿನದ ಆರಂಭದಲ್ಲಿಯೇ ಭಾರತದ ಕ್ರೀಡಾಪಟುಗಳು 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಮನೀಷ್ ನರ್ವಾಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ ಹಾಗೂ ಮತ್ತೊಬ್ಬ ಕ್ರೀಡಾಪಟು ಸಿಂಗ್‌ರಾಜ್ ರಜತ ಪದಕವನ್ನು ಇದೇ ಸುತ್ತಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.

07:16 pm

ಹರ್ವಿಂದರ್ ಸಿಂಗ್‌ ಗೆದ್ದ ಕಂಚಿನ ಪದಕ ಆರ್ಚರಿ ವಿಭಾಗದಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಮೊದಲ ಪದಕವಾಗಿದೆ. ದಕ್ಷಿಣ ಕೊರಿಯಾದ ಮಿನ್ ಸು ಕಿಮ್ ವಿರುದ್ಧದ ಪಂದ್ಯದಲ್ಲಿ 6-5 ಅಂತರದಿಮದ ಗೆಲುವು ಸಾಧಿಸುವ ಮೂಲಕ ಹರ್ವಿಂದರ್ ಸಿಂಗ್ ಪದಕ ಗೆದ್ದು ಬೀಗಿದ್ದಾರೆ.

07:15 pm

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಆರ್ಚರ್ ಹರ್ವಿಂದರ್ ಸಿಂಗ್‌ ಪುರುಷರ ವೈಯಕ್ತಿಕ ರಿಕ್ಯೂರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.

12:11 pm

ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಹಿಂದೆ ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ಭಾರತದ ಕ್ರೀಡಾಪಟು ಅವನಿ ಲೇಖರ ಇದೀಗ 50 ಮೀ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರಲ್ಲಿ ಎರಡನೇ ಪದಕವನ್ನು ಅವನಿ ಲೇಖರ ಗೆದ್ದಿದ್ದು ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ.

11:02 am

ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 11ಕ್ಕೆ ಏರಿಕೆ ಕಂಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಕ್ರವಾರ ( ಸೆಪ್ಟೆಂಬರ್‌ 3 ) ಮುಂಜಾನೆ ನಡೆದ ಟಿ64 ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು ಪ್ರವೀಣ್ ಕುಮಾರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

08:28 am

ಅವನಿ ಲೇಖರ, ಸಿದ್ಧಾರ್ಥ ಬಾಬು, ದೀಪಕ್ ಆರ್ 3 ಮಿಶ್ರ 10 ಮೀ ಏರ್ ರೈಫಲ್ ಪ್ರೋನ್ ಎಸ್ ಎಚ್ 1 ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ

06:44 pm

ಹಾಲಿ ಚಾಂಪಿಯನ್ ಮರಿಯಪ್ಪನ್ ತಾಂಗವೇಲು ಈ ಬಾರಿಯ ಟೋಕಿಯೋ ಪ್ಯಾರಾಲಂಪಿಕ್ಸ್ ಪುರುಷರ ಹೈ ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಾರೆ. ಭಾರತದ ಮತ್ತೊಬ್ಬ ಅಥ್ಲೀಟ್ ಶರತ್ ಕುಮಾರ್ ಇದೇ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರು ನೀಡಿದ ಎರಡು ಪದಕಗಳೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಎರಡಂಕಿಗೆ ಏರಿಕೆಯಾಗಿದೆ.

11:41 am

ಟೇಬಲ್ ಟೆನಿಸ್ ಡಬಲ್ಸ್ ವಿಭಾಗದಲ್ಲಿ ಭಾರತದ ಭವೀನಾಬೆನ್ ಪಟೇಲ್ ಹಾಗೂ ಸೋನಲ್ ಪಟೇಲ್ ಜೋಡಿ ಹಿನ್ನಡೆ ಕಂಡಿದೆ. ಚೀನಾದ ಜೋಡಿಯ ವಿರುದ್ಧ 0-3 ಅಂತರದಿಂದ ಸೋಲು ಕಂಡಿತು

11:36 am

ಶೂಟಿಂಗ್: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕವನ್ನು ಗೆದ್ದಿದೆ. 10 ಮೀ ಏರ್‌ ಪಿಸ್ತೂಲ್‌ನ ಎಸ್‌ಹೆಚ್1 ವಿಭಾಗದಲ್ಲಿ ಅಧಾನ ಸಿಂಗ್‌ರಾಜ್ ಕಂಚಿನ ಪದಕ್ಕೆ ಕೊರಳೊಡ್ಡಿದ್ದಾರೆ

05:23 pm

ಟೋಕಿಯೋ ಪ್ಯಾರಾಲಂಪಿಕ್ಸ್ ಪುರುಷರ ಜಾವೆಲಿನ್ ಎಫ್‌-64 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಥ್ಲೀಟ್ ಸುಮಿತ್ ಅಂತಿಲ್ ದೇಶಕ್ಕೆ ಮತ್ತೊಂದು ಬಂಗಾರದ ಪದಕ ಗೆದ್ದಿದ್ದಾರೆ. 68.55 ಮೀಟರ್ ದೂರದ ಸಾಧನೆಯೊಂದಿಗೆ ಸುಮಿತ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೇ ವಿಭಾಗದಲ್ಲಿ ಸುಮಿತ್ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ.

04:02 pm

ಟೋಕಿಯೋ ಪ್ಯಾರಾಲಂಪಿಕ್ಸ್‌ ಪುರುಷರ ಡಿಸ್ಕಸ್ ಥ್ರೋ ಎಫ್‌-52 ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಗೆದ್ದಿರುವ ಕಂಚಿನ ಪದಕವನ್ನು ಮತ್ತೆ ಕಳೆದುಕೊಂಡಿದ್ದಾರೆ. ಅಂಗ ವೈಕಲ್ಯ ವಿಭಾಗದಲ್ಲಿ ಸ್ಪರ್ಧಿಸಲು ಅವರು ಅನರ್ಹರೆಂದು ಘೋಷಿಸಲಾಗಿರುವುದರಿಂದ ವಿನೋದ್ ಗೆದ್ದಿರುವ ಕಂಚಿನ ಪದಕ ಕೈ ತಪ್ಪಿದೆ.

12:02 pm

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಪುರುಷರ ಡಿಸ್ಕಸ್ ಎಸೆತದಲ್ಲಿ ಭಾರತದ ಅಥ್ಲೀಟ್ ಯೋಗೇಶ್ ಕಥುನಿಯಾ ಸೋಮವಾರ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ 44.38 ಮೀಟರ್ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ಯೋಗೇಶ್ ಬೆಳ್ಳಿಯ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

10:24 am

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರಿದಿದೆ. ಜಾವೆಲಿನ್ ಎಸೆತದಲ್ಲಿ ಭಾರತ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಕಳೆದ 24 ಗಂಟೆಗಳ ಅಂತರದಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ 7ನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಜಾವೆಲಿನ್ ಎಸೆತದಲ್ಲಿ ಭಾರತದ ದೇವೇಂದ್ರ ಝಝಾರಿಯಾ ಹಾಗೂ ಸುಂದರ್ ಸಿಂಗ್ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿ ಮಿಂಚಿದ್ದಾರೆ.

08:59 am

ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರೀಡಾಪಟುಗಳು ತಮ್ಮ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. 10 ಮೀಟರ್ ಏರ್‌ ರೈಫಲ್ ಸ್ಪರ್ಧೆಯಲ್ಲಿ ಇಂದು ಭಾರತದ ಶೂಟರ್ ಅವನಿ ಲೇಖರಾ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದೆ.

08:34 pm

ಭಾನುವಾರ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಡಿಸ್ಕಸ್ ಎಸೆತದಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಭಾನುವಾರ 3ನೇ ಪದಕವನ್ನು ಗೆದ್ದುಕೊಂಡಂತಾಗಿದೆ.

06:04 pm

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕದ ಸಾಧನೆ ಮಾಡಿದೆ. ಹೈ ಜಂಪ್‌ನಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕವನ್ನು ಗೆದ್ದಿದ್ದು ಭಾರತ ಇಂದು ಎರಡನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಟೋಕಿಯೋ 2020ಯ ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ ಈ ಸಾಧನೆ ಮಾಡಿ ಬೀಗಿದ್ದಾರೆ.

06:04 pm

ಪ್ಯಾರಾಲಿಂಪಿಕ್ಸ್: ಹೈ ಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್, ಭಾರತಕ್ಕೆ ಎರಡನೇ ಪದಕ

05:06 pm

"ಕ್ರೀಡಾ ದಿನವಾಗಿರುವ ಇಂದು ಭಾರತೀಯ ಭಾರತದ ಕ್ರೀಡಾಪ್ರೇಮಿಗಳಿಗೆ ಎಂತಾ ಅದ್ಭುತವಾದ ಸುದ್ದಿಯಿದು. ಬೆಳ್ಳಿಯ ಪದಕಕ್ಕಾಗಿ ಭವೀನಾಬೆನ್ ಅವರಿಗೆ ಅಭಿನಂದನೆಗಳು. ಇದೊಂದು ಐತಿಹಾಸಿಕವಾದ ಸಾಧನೆ. ಕ್ರೀಡೆಯಲ್ಲಿ ನಾವು ಗೆಲ್ಲುವ ಪ್ರತಿಯೊಂದು ಪದಕ ಕೂಡ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತದೆ. ಭವಿಷ್ಯದಲ್ಲಿ ಮತ್ತಷ್ಟು ಪದಕಗಳಿಗೆ ಇದು ಬೀಜ ಬಿತ್ತಿದಂತೆ. ನಮ್ಮ ಪಾಲಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಅತ್ಯುತ್ತಮ ಆರಂಭ" ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

05:04 pm

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭವೀನಾಬೆನ್ ಪಟೇಲ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ

09:16 am

ಭವೀನಾಬೆನ್ ಪಟೇಲ್ ಫೈನಲ್‌ನಲ್ಲಿ ಚೀನಾದ ಪೆಡ್ಲರ್ ಝಿಂಗ್ ಝೌವಿರುದ್ಧ 7-11, 5-11, 6-11 ಅಂತರದಿಂದ ಸೋಲು ಅನುಭವಿಸಿದರು. ಈ ಮೂಲಕ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

09:15 am

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕ ಬೇಟೆಯನ್ನು ಆರಂಭಿಸಿದೆ. ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಪದಕ ಬೇಟೆಯನ್ನು ಆರಂಭಿಸಿದೆ.

05:57 pm

ಪುರುಷರ ಕಂಪೌಂಡ್ ಓಪನ್ ಪ್ಯಾರಾ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ರಾಕೇಶ್ ಕುಮಾರ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

03:28 pm

ಪುರುಷರ ಜಾವೆಲಿನ್ ಥ್ರೋ ಎಫ್‌-57 ಫೈನಲ್‌ ಸ್ಪರ್ಧೆಯಲ್ಲಿ ಭಾರತದ ರಂಜೀತ್ ಭಾಟಿ ಭಾಗವಹಿಸುತ್ತಿದ್ದಾರೆ.

11:51 am

ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಾಟೆಲ್ ಮಹಿಳಾ ಸಿಂಗಲ್ಸ್ ಕ್ಲಾಸ್-4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಭವಿನಾಬೆನ್ ಚೀನಾದ ಝಾಂಗ್ ಮಿಯಾವೋ ವಿರುದ್ಧ 7-11, 11-7, 11-4, 9-11, 11-8 (3-2)ರ ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Saturday, August 28, 2021, 11:49 [IST]
Other articles published on Aug 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X