ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ಯಾರಾಲಿಂಪಿಕ್ಸ್: ಸೆಮಿಫೈನಲ್ ಹಂತಕ್ಕೇರಿದ ಭವೀನಾಬೆನ್, ಪದಕ ಖಚಿತಪಡಿಸಿ ಇತಿಹಾಸ ಬರೆದ ಪೆಡ್ಲರ್

Tokyo Paralympics: Indian TT player Bhavinaben Patel reache semi-finals secure medal

ಟೋಕಿಯೋ, ಆಗಸ್ಟ್ 27: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಇತಿಹಾಸ ಬರೆದಿದ್ದಾರೆ. ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿರುವ ಭವೀನಾಬೆನ್ ಪಟೇಲ್ ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಭವೀನಾಬೆನ್ ಪಟೇಲ್ ಮಹಿಳೆಯರ ಕ್ಲಾಸ್‌ 4 ಇವೆಂಟ್‌ನಲ್ಲಿ ವಿಶ್ವದ ನಂಬರ್ 5 ಆಟಗಾರ್ತಿ ಸರ್ಬಿಯಾದ ಬೊರಿಸ್ಲೇವಾ ಪೆರಿಕ್ ರಾಂಕೋವಿಕ್ ವಿರುದ್ಧ ಗೆಲುವು ಸಾಧಿಸಿದರು. 34ರ ಹರೆಯದ ಭಾರತದ ಆಟಗಾರ್ತಿ ಸರ್ಬಿಯಾದ ಎದುರಾಳಿಯ ವಿರುದ್ಧ 11-5 11-6 11-7 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಕ್ವಾರ್ಟರ್‌ಫೈನಲ್ ಪಂದ್ಯ 18 ನಿಮಿಷಗಳಲ್ಲಿ ಮುಕ್ತಾಯಕಂಡಿತ್ತು.

ಶನಿವಾರ ಸೆಮಿಫೈನಲ್ ಹಂತದ ಪಂದ್ಯ ನಡೆಯಲಿದ್ದು ಭಾರತದ ಆಟಗಾರ್ತಿ ಚೀನಾದ ಝಾಂಗ್ ಮಿಯಾವೋ ಅವರನ್ನು ಎದುರಿಸಲಿದ್ದಾರೆ. ಆದರೆ ಈಗಾಗಲೇ ಭವೀನಾಬೆನ್ ಪಟೇಲ್ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ ಸ್ಪರ್ಧೆಯಲ್ಲಿ ಕಂಚಿನ ಪದಕ್ಕಾಗಿ ಪ್ಲೇಆಪ್ ಪಂದ್ಯ ಇರುವುದಿಲ್ಲ. ಇದರ ಬದಲಿಗೆ ಸೆಮಿಫೈನಲ್‌ನಲ್ಲಿ ಸೋಲು ಕಂಡ ಎರಡು ಸ್ಪರ್ಧಿಗಳು ಕೂಡ ಕಂಚಿನ ಪದಕವನ್ನು ಪಡೆಯಲಿದ್ದಾರೆ. ಹೀಗಾಗಿ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಈಗ ಖಾತ್ರಿಯಾದಂತಾಗಿದೆ.

2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ2021ರ ಸೀಸನ್ ಮುಗಿಸಲು ಟೋಕಿಯೋ ಚಿನ್ನದ ಹುಡುಗ ನೀರಜ್ ಚೋಪ್ರಾ ನಿರ್ಧಾರ

ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ ಸಮಿತಿ ಮೂರನೇ ಸ್ಥಾನಕ್ಕೆ ಪ್ಲೇಆಫ್ ಪಂದ್ಯವನ್ನು ಆಯೋಜಿಸುವ ಬದಲು ಸೆಮಿಫೈನಲ್‌ನಲ್ಲಿ ಸೋತ ಇಬ್ಬರು ಆಟಗಾರರಿಗೂ ಕಂಚಿನ ಪದಕ ನೀಡಲು ಮನವಿ ಮಾಡಿತ್ತು. 2017ರಲ್ಲಿ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಆಡಳಿತ ಮಂಡಳಿ ಈ ಮನವಿಯನ್ನು ಪುರಸ್ಕರಿಸಿ ಕಂಚಿನ ಪದಕವನ್ನು ನಿರ್ಧರಿಸುವ ಪ್ಲೇಆಫ್ ಪಂದ್ಯಗಳನ್ನು ತೆಗೆದುಹಾಕಿದೆ.

ಇನ್ನು ಈ ಬಗ್ಗೆ ಪ್ಯಾರಾಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾದ ಅಧ್ಯಕ್ಷೆ ದೀಪಾ ಮಲಿಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾವೀಗ ಭವೀನಾಬೆನ್ ಪಟೇಲ್ ಅವರಿಂದ ಪದಕವನ್ನು ಪಡೆಯುವುದು ಖಚಿತವಾಗಿದೆ. ಶನಿವಾರ ನಡೆಯುವ ಪಂದ್ಯ ಅವರ ಪದಕದ ಬಣ್ಣ ಯಾವುದಾಗಿರಲಿದೆ ಎಂಬುದು ತಿಳಿಯಲಿದೆ" ಎಂದಿದ್ದಾರೆ.

ಇನ್ನು ಈ ಗೆಲುವಿನ ನಂತರ ಭವೀನಾಬೆನ್ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತದ ಜನತೆಯ ಬೆಂಬಲದ ಕಾರಣದಿಂದಾಗಿ ನಾನು ನನ್ನ ಸೆಮಿಫೈನಲ್ ಪಂದ್ಯವನ್ನು ಗೆಲ್ಲುವ ವಿಶ್ವಾಸವಿದೆ. ದಯವಿಟ್ಟು ಬೆಂಬಲವನ್ನು ಮುಂದುವರಿಸಿ. ನಿಮ್ಮ ಬೆಂಬಲ ನನಗಿದ್ದರೆ ಸೆಮಿಫೈನಲ್ ಪಂದ್ಯವನ್ನು ನಾನು ಗೆಲ್ಲಲು ಸಾಧ್ಯವಿದೆ" ಎಂದಿದ್ದಾರೆ ಭವೀನಾಬೆನ್ ಪಟೇಲ್.

ಇದಕ್ಕೂ ಮುನ್ನ ಭವೀನಾಬೆನ್ ಪಟೇಲ್ ಬ್ರೆಜಿಲ್‌ನ ಜೋಯ್ಸ್ ಡಿ ಒಲಿವೈರಾ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿ ಅಂತಿಮ 8ರ ಘಟ್ಟವನ್ನು ಪ್ರವೇಶ ಪಡೆದುಕೊಂಡಿದ್ದರು. 16ರ ಘಟ್ಟದ ಪಂದ್ಯದಲ್ಲಿ ಭವೀನಾ ಬೆನ್ ಪಟೇಲ್ 23 ನಿಮಿಷಗಳಲ್ಲಿ ಎದುರಾಳಿ ಜೋಯ್ಸ್ ಡಿ ಒಲಿವೈರಾ ವಿರುದ್ಧ ಗೆಲುವು ಸಾಧಿಸಿದ್ದರು. 12-10, 13-11, 11-6 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು.

Story first published: Sunday, August 29, 2021, 19:44 [IST]
Other articles published on Aug 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X