ಕಿಂಗ್ಸ್ ಟನ್, ಮಾರ್ಚ್ 22: ಬ್ರೆಜಿಲ್ ನ ರಿಯೋ ಡಿ ಜನೇರೋದಲ್ಲಿ ನಡೆಯಲಿರುವ 2016 ನೇ ಸಾಲಿನ ಒಲಿಂಪಿಕ್ಸ್ ನಂತರ ಜಮೈಕಾದ ಶರ ವೇಗದ ಓಟಗಾರ ಉಸೇನ್ ಬೋಲ್ಟ್ ಅವರು ಒಲಿಂಪಿಕ್ಸ್ ಗೆ ಗುಡ್ ಬೈ ಹೇಳುತ್ತಾರಂತೆ. ಈ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ವಿಶ್ವದ ಅಗ್ರಗಣ್ಯ ಓಟಗಾರ ಅನೇಕ ದಾಖಲೆ ನಿರ್ಮಿಸಿ ಜನ ಮೆಚ್ಚುಗೆಗೆ ಪಾತ್ರರಾಗಿರುವ ಉಸೇ ಬೋಲ್ಟ್ ತಮ್ಮ ಶರ ವೇಗಕ್ಕೆ ಬ್ರೇಕ್ ಹಾಕಿಕೊಳ್ಳುವ ಮಾತುಗಳನ್ನು ಹಾಡಿದ್ದಾರೆ.
ಕೋಚ್ ಗ್ಲೆನ್ ಮಿಲ್ಸ್ ಅವರ ಸಲಹೆ ಮೇರೆಗೆ 2020 ರ ಟೋಕಿಯೋ ಓಲಂಪಿಕ್ಸ್ ನಂತರ ವಿದಾಯ ಹೇಳುತ್ತೇನೆಂದು ಹೇಳಿದ್ದ ಬೋಲ್ಟ್ ಈಗ ತಮ್ಮ ನಿಲುವನ್ನು ಬದಲಿಸಿಕೊಂಡು 2016 ನೇ ಒಲಿಂಪಿಕ್ಸ್ ಟೂರ್ನಿ ನನ್ನ ಕೊನೆಯ ಒಲಿಂಪಿಕ್ಸ್ ಎಂದು ಹೇಳಿ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದ್ದಾರೆ.
ಮುಂಬರುವ ರಿಯೋ ಡಿ ಜನೇರೋ ಒಲಿಂಪಿಕ್ಸ್ ನಲ್ಲಿ ಮೂರು ಬಂಗಾರ ಪದಕ ಗೆಲ್ಲವುದೇ ನನ್ನ ಗುರಿ ಹಾಗೂ ನನ್ನ ಕನಸು ಎಂದು ಬೋಲ್ಟ್ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
2008 ಮತ್ತು 2012 ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶ ನೀಡಿ ಈಗಾಗಲೇ 6 ಚಿನ್ನದ ಪದಕ ಗೆದ್ದಿರುವ ಬೋಲ್ಟ್ ಈಗ 2016 ಅಗಸ್ಟ್ ನಲ್ಲಿ ರಿಯೋ ಡಿ ಜನೇರೋನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ 3 ಬಂಗಾರದ ಪದಕಗಳ ಮೇಲೆ ಕಣ್ಣಿಟ್ಟಿದ್ದಾರೆ.
2009 ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ 200 ಮೀಟರ್ ಓಟವನ್ನು 19.19 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ನಿರ್ಮಿಸಿದ್ದರು. ಸಾಧಕನಿಗೆ ಇನ್ನೂ ಸಾಧನೆ ಮಾಡಬೇಕೆನ್ನುವ ಮಾತಿನಂತೆ ಬೋಲ್ಟ್ 200 ಮೀಟರ್ ನ್ನು 19 ಸೆಕೆಂಡ್ ಗಳಲ್ಲಿ ಓಡುವುದೇ ನನ್ನ ಗುರಿ ಎಂದು ಹೇಳುವ ಮೂಲಕ ತಮ್ಮದೆ ಈ ದಾಖಲೆಯನ್ನು ಮುರಿಯಲು ಹಠಕ್ಕೆ ಬಿದ್ದಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ. Subscribe to Kannada MyKhel.