ಕನ್ಯೆಯರ ಮನದರಸ ಮೆಸ್ಸಿ ಪಾಪಚ್ಚಿಗೆ ಹಿಂಗ್ ಮಾಡ್ಬಾರ್ದಿತ್ತು

Posted By:

ರಿಯೋ ಡಿ ಜನೈರೋ, ಜೂ.17: ಅರ್ಜೆಂಟಿನಾ ತಂಡದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಿಂಗ್ ಮಾಡ್ಬಾರದಿತ್ತು. ಆ ಪುಟ್ಟನ ಕೈ ಕುಲುಕಿದ್ದರೆ ಏನ್ ಗಂಟು ಕಳೆದುಕೊಳ್ಳುತ್ತಿದ್ದರು ಎಂಬ ಮಾತುಗಳು ವಿಡಿಯೋ ನೋಡಿದ ಅನೇಕ ಮಂದಿ ಹೇಳುವುದರಲ್ಲಿ ಆಶ್ಚರ್ಯವೇನಿಲ್ಲ. ಪುಟ್ಟ ಬಾಲಕನೊಬ್ಬನು ಕೈ ಚಾಚಿದ್ದನ್ನು ನಿರ್ಲಕ್ಷಿಸಿ ಮೆಸ್ಸಿ ಮುಂದೆ ಹೋದ ದೃಶ್ಯವಿರುವ ವಿಡಿಯೋ ಈಗ ಚರ್ಚೆಗೆ ಕಾರಣವಾಗಿದೆ.(ಈ ಲೇಖನದ ಕೊನೆಯಲ್ಲಿರುವ ವಿಡಿಯೋ ತಪ್ಪದೇ ನೋಡಿ)

ಫೀಫಾ ವಿಶ್ವಕಪ್ 2014ರ ಎಫ್ ಗುಂಪಿನ ಮೊದಲ ಪಂದ್ಯದ ಸಂದರ್ಭದಲ್ಲಿ ಈ ಮನಕಲಕುವ ಕಥೆ ನಡೆದಿದ್ದು ಅರ್ಜೆಂಟಿನಾ ಹಾಗೂ ಬೋಸ್ನಿಯಾ ಹಾಗೂ ಹರ್ಜೆಗೊವಿನಿಯಾ ನಡುವಿನ ಪಂದ್ಯ ಮರಕಾನ ಸ್ಟೇಡಿಯಂನಲ್ಲಿ ಜೂ.15 ರಂದು ನಡೆದಿದ್ದು, ಪಂದ್ಯದಲ್ಲಿ ಮೆಸ್ಸಿ ಹೊಡೆದ ಗೋಲು ಸೇರಿದಂತೆ ಬೋಸ್ನಿಯಾ ವಿರುದ್ಧ ಅರ್ಜೆಂಟಿನಾ 2-1 ಅಂತರದಲ್ಲಿ ಗೆಲುವು ಸಾಧಿಸಿತ್ತು.

ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ಪ್ರತಿ ಆಟಗಾರನ ಜತೆ ವಿಶ್ವಕಪ್ ಟೂರ್ನಿ ಪ್ರತಿನಿಧಿಯಾಗಿ ಪುಟ್ಟ ಬಾಲಕ ಅಥವಾ ಬಾಲಕಿಯರು ಮೈದಾನದ ತನಕ ನಡೆಯುತ್ತಾರೆ. ಆಟಗಾರರ ಜತೆ ಎಸ್ಕಾರ್ಟ್ ಆಗಿ ತೆರಳುವ ಈ ಬಾಲಕರಿಗೆ ಸ್ಟಾರ್ ಆಟಗಾರರ ಜತೆ ನಡೆಯುವುದೇ ದೊಡ್ಡ ಯೋಗ. ಇಂಥ ಅದೃಷ್ಟದ ಅವಕಾಶ ಪಡೆದ ಪುಟ್ಟ ಪೋರನೊಬ್ಬ ಮೆಸ್ಸಿ ಬರುವುದನ್ನು ಕಂಡು ಪಂದ್ಯದ ರೆಫ್ರಿಗಳು ನಿಂತಿದ್ದ ಸಾಲಿನಲ್ಲಿ ಮುಂದೆ ಬಂದು ನಿಲ್ಲುತ್ತಾನೆ. ಮುಂದೇನಾಯ್ತು? ವಿಡಿಯೋ ನೋಡಿ.. ಅಭಿಮಾನಿಗಳ ಪ್ರತಿಕ್ರಿಯೆ ಓದಿ...

ಮುಖಭಂಗ ಅನುಭವಿಸಿದ ಪುಟ್ಟ ಬಾಲಕ

ಮುಖಭಂಗ ಅನುಭವಿಸಿದ ಪುಟ್ಟ ಬಾಲಕ

ಮೆಸ್ಸಿ ಹತ್ತಿರ ಬರುತ್ತಿದ್ದಂತೆ ಮೆಸ್ಸಿಯಂಥ ಕೈ ಚಾಚುತ್ತಾನೆ. ಆದರೆ, ಕೈ ಕುಲುಕಲು ನಿರಾಕರಿಸಿದ ಮೆಸ್ಸಿ ಪಕ್ಕದಲ್ಲಿದ್ದ ಅಧಿಕಾರಿಗಳಿಗೆ ಕೈಕುಲುಕಿ ಮುಂದೆ ಸಾಗುತ್ತಾರೆ. ಮುಖಭಂಗ ಅನುಭವಿಸಿದ ಬಾಲಕ ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡು ಪೆಚ್ಚಾದ ದೃಶ್ಯ ಎಂಥವರ ಮನಸ್ಸನ್ನು ಕಲುಕಿಬಿಡುತ್ತದೆ.

ಕೈ ಕುಲುಕಿದ್ದರೆ ಇವನ ಗಂಟೇನು ಹೋಗುತ್ತಿತ್ತು

ಬಾಲಕನ ಕೈ ಕುಲುಕಿದ್ದರೆ ಮೆಸ್ಸಿ ಗಂಟೇನು ಹೋಗುತ್ತಿತ್ತು

ಯೂಟ್ಯೂಬ್ ನಲ್ಲಿ ಈ ವಿಡಿಯೋ ಜನಪ್ರಿಯ

ಯೂಟ್ಯೂಬ್ ನಲ್ಲಿ ಈ ವಿಡಿಯೋ ಜನಪ್ರಿಯ

ಯೂಟ್ಯೂಬ್ ನಲ್ಲಿ ಈ ವಿಡಿಯೋ ಸುಮಾರು ಈ ಅವಧಿಗೆ ಸುಮಾರು 3,50,000ಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.

ವಿಡಿಯೋ ಕೆಳಗೆ ಕಾಮೆಂಟ್ ಬಾಕ್ಸಿನಲ್ಲಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೆಸ್ಸಿ ಪರ ವಿರೋಧ ಹೇಳಿಕೆಗಳು ಕೇಳಿ ಬರುತ್ತಿವೆ. ನಿರೀಕ್ಷೆಯಂತೆ ಮೆಸ್ಸಿ ಅಭಿಮಾನಿಗಳು ಮೆಸ್ಸಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ, ಹಲವಾರು ಮಂದಿ ಮೆಸ್ಸಿ ಒರಟುತನಕ್ಕೆ ಛೀಮಾರಿ ಹಾಕಿದ್ದಾರೆ.

ಮೆಸ್ಸಿಯನ್ನು ಒರಟ ಎಂದ ಅಭಿಮಾನಿಗಳು

ಬಾಲಕನ ಮನಸ್ಸಿಗೆ ಘಾಸಿ ಮಾಡಿದ ಮೆಸ್ಸಿಯನ್ನು ಒರಟ ಎಂದ ಅಭಿಮಾನಿಗಳು

ಮೆಸ್ಸಿ ಬಾಲಕನನ್ನು ನೋಡಲೇ ಇಲ್ಲ

ಮೆಸ್ಸಿ ಬಾಲಕನನ್ನು ನೋಡಲೇ ಇಲ್ಲ ಹೀಗಾಗಿ ಕೈಕುಲುಕಿಲ್ಲ ಅಷ್ಟೇ ಸುಮ್ಮನೆ ಮೆಸ್ಸಿಯನ್ನು ಬೈಯಬೇಡಿ

ಮೆಕ್ ಡೋನಾಲ್ಡ್ ಪ್ಲೇಯರ್ ಎಸ್ಕಾರ್ಟ್

ಮೆಕ್ ಡೋನಾಲ್ಡ್ ಪ್ಲೇಯರ್ ಎಸ್ಕಾರ್ಟ್

ಮೆಕ್ ಡೋನಾಲ್ಡ್ ಪ್ಲೇಯರ್ ಎಸ್ಕಾರ್ಟ್ ಕಾರ್ಯಕ್ರಮದ ಭಾಗವಾಗಿ ಸುಮಾರು 70 ದೇಶಗಳಿಂದ ಆಯ್ಕೆಯಾದ 1,408ಕ್ಕೂ ಅಧಿಕ ಲಕ್ಕಿ ಮಕ್ಕಳು ವಿಶ್ವಕಪ್ ಆಡುತ್ತಿರುವ ಆಟಗಾರರನ್ನು ಮೈದಾನದ ತನಕ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ.

ಮೆಸ್ಸಿ ಮತ್ತೆ ಬಂದು ಕೈ ಕುಲುಕಿದನಂತೆ

ಮೆಸ್ಸಿ ಮತ್ತೆ ವಾಪಸ್ ಬಂದು ಬಾಲಕನ ಕೈ ಕುಲುಕಿದನಂತೆ ಆದರೆ, ಮೊದಲು ನಿರಾಕರಿಸಿದ ಬಾಲಕ ಅಲ್ವಂತೆ ಆತನ ಸಾಲಿನಲ್ಲಿದ್ದ ಮಿಕ್ಕ ಬಾಲಕರಿಗೆ ಅವಕಾಶ ಸಿಕ್ಕಿತ್ತಂತೆ ಎಂಬ ಸುದ್ದಿಯೂ ಇದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ ಯಾವುದಕ್ಕೂ ವಿಡಿಯೋ ನೋಡಿ

ಪ್ರಕರಣದ ಬಗ್ಗೆ ಮೆಸ್ಸಿ ನೀಡಿದ ಉತ್ತರ

ಪ್ರಕರಣದ ಬಗ್ಗೆ ಮೆಸ್ಸಿ ಉತ್ತರ ನೀಡಿ.. 'ಛೇ ಎಲ್ಲಿಯಾದರೂ ಉಂಟೆ ನಾನು ಹಾಗೆ ಏಕೆ ಮಾಡಲಿ. ನನಗೂ ಪುಟ್ಟ ಮಗನಿದ್ದಾನೆ. ಮಕ್ಕಳನ್ನು ಏಕೆ ನಿರ್ಲಕ್ಷಿಸಲಿ. ನಾನು ಆ ಬಾಲಕನನ್ನು ನೋಡದೆ ಮುಂದೆ ಸಾಗಿದೆ ಹೀಗಾಗಿ ಆತನ ಕೈ ಕುಲುಕಲಾಗಲಿಲ್ಲ' ಎಂದಿದ್ದಾರೆ. ಸ್ಪೇನಿನ ಬಾರ್ಸಿಲೋನಾ ಕ್ಲಬ್ ಪರ ಆಡುವ ಮೆಸ್ಸಿಗೆ ಸ್ಪೇನ್ ಮಾಧ್ಯಮಗಳಲ್ಲೂ ಬೆಂಬಲ ವ್ಯಕ್ತವಾಗಿದೆಯಂತೆ.

Story first published: Tuesday, June 17, 2014, 17:14 [IST]
Other articles published on Jun 17, 2014

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ