ವಿನೇಶ್ ಫೋಗಟ್ ಕ್ಷಮಿಸಲಾಗಿದೆ, ಆಕೆ ಟ್ರಯಲ್ಸ್ ನೀಡಬಹುದು: ಡಬ್ಲ್ಯೂಎಫ್‌ಐ

ನವದೆಹಲಿ: ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್‌ ಅವರನ್ನು ಕ್ಷಮಿಸಲಾಗಿದೆ. ಅವರಿನ್ನು ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಹೇಳಿದೆ. ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ಎಲ್ಲಾ ಸ್ಪರ್ಧೆಗಳಿಂದ ವಿನೇಶ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಈಗ ಅಮಾನತು ತೆರವುಗೊಳಿಸಲಾಗಿದೆ ಎಂದು ಡಬ್ಲ್ಯೂಎಫ್‌ಐ ಶುಕ್ರವಾರ (ಆಗಸ್ಟ್ 27) ಹೇಳಿದೆ.

ಭಾರತ ವಿರುದ್ಧ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಮುನ್ನಡೆ ಪಡೆದ ದಾಖಲೆಗಳ ಪಟ್ಟಿಭಾರತ ವಿರುದ್ಧ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಮುನ್ನಡೆ ಪಡೆದ ದಾಖಲೆಗಳ ಪಟ್ಟಿ

ವಿನೇಶ್ ಫೋಗಟ್ ಅವರನ್ನು ಕ್ಷಮಿಸಿದ್ದೇವೆ
"ನಾವು ಈಗ ವಿನೇಶ್ ಫೋಗಟ್ ಅವರನ್ನು ಕ್ಷಮಿಸಿದ್ದೇವೆ. ಅವಳು ತಪ್ಪು ಮಾಡಿದ್ದು ನಿಜ. ಆದರೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಿಮಗೆ ಗೊತ್ತು, ನಾವು ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳ ತಪ್ಪಿಗೆ ಬೈಯುತ್ತೇವೆ. ಮತ್ತೆ ಅವರನ್ನು ಕ್ಷಮಿಸುತ್ತೇವೆ. ನಾವೂ ಹಾಗೆ ವಿನೇಶ್‌ನನ್ನು ಕ್ಷಮಿಸಿದ್ದೇವೆ. ಆಯ್ಕೆ ಟ್ರಯಲ್ಸ್‌ಗಳಿಗೆ ವಿನೇಶ್‌ಗೆ ಸ್ವಾಗತ," ಎಂದು ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಎಎನ್‌ಐ ಜೊತೆ ಹೇಳಿದ್ದಾರೆ.

ಸಿಎಸ್‌ಕೆ ಯಾವಾಗಲೂ ಬಲಿಷ್ಠ ತಂಡವೆನಿಸಲು ಆತನೇ ದೊಡ್ಡ ಕಾರಣ: ಫಾಪ್ ಡು ಪ್ಲೆಸಿಸ್ಸಿಎಸ್‌ಕೆ ಯಾವಾಗಲೂ ಬಲಿಷ್ಠ ತಂಡವೆನಿಸಲು ಆತನೇ ದೊಡ್ಡ ಕಾರಣ: ಫಾಪ್ ಡು ಪ್ಲೆಸಿಸ್

ಆಗಸ್ಟ್ 31ರಂದು ಟ್ರಯಲ್ಸ್
ರಾಷ್ಟ್ರೀಯ ಮಟ್ಟದ ರಸ್ಲಿಂಗ್ ಟ್ರಯಲ್ಸ್ ಆಗಸ್ಟ್ 31ರಂದು ನಡೆಯುತ್ತದೆ. ಇದರಲ್ಲಿ ವಿನೇಶ್ ಭಾಗವಹಿಸಬಹುದಾಗಿದೆ. ಇದಕ್ಕೂ ಮುನ್ನ ವಿನೇಶ್ ಅವರ ವಿರುದ್ಧ ನಿಷೇಧ ಹೇರಲಾಗಿತ್ತು. ಟೋಕಿಯೋ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿಸಿದ್ದಕ್ಕಾಗಿ ವಿನೇಶ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಆ ಬಳಿಕ ವಿನೇಶ್ ಡಬ್ಲ್ಯೂಎಫ್‌ಐಯ ಕ್ಷಮೆ ಕೋರಿದ್ದರು. ತನ್ನ ವರ್ತನೆಗೆ ಪ್ರತಿಕ್ರಿಯಿಸಿ ವಿನೇಶ್ ಒಂದು ಮೇಲ್ ಕೂಡ ಮಾಡಿದ್ದರು "ವಿನೇಶ್, ರಸ್ಲಿಂಗ್ ಕಮಿಟಿಗೆ ಇಮೇಲ್ ಕಳುಹಿಸಿದ್ದಾರೆ. ಅದನ್ನು ಓದಿದ ಬಳಿಕ ಸಮಿತಿ ಸದಸ್ಯರು ಅಭಿಪ್ರಾಯ ಹೇಳಲಿದ್ದಾರೆ. ಅವರಿಗೆ ವಿನೇಶ್ ಉತ್ತರ ಸಮಾಧಾನ ನೀಡಿದೆಯೇ ಇಲ್ಲವೇ ಅನ್ನೋದು ಆಮೇಲೆ ನಿರ್ಧರಿಸಲಾಗುತ್ತದೆ," ಎಂದು ಡಬ್ಲ್ಯೂಎಫ್‌ಐ ತಿಳಿಸಿದೆ.

ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ: ವಿಶ್ವ ನಂ.1 ಡಾವಿಡ್ ಮಲನ್ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ: ವಿಶ್ವ ನಂ.1 ಡಾವಿಡ್ ಮಲನ್

ಎಲ್ಲೆ ಮೀರಿದ ವರ್ತನೆ ತೋರಿದ ಫೋಗಟ್
ಹಂಗೆರಿಯಲ್ಲಿದ್ದ ಕೋಚ್ ವೋಲರ್ ಅಕೋಸ್ ಜೊತೆಗಿದ್ದು ಟೋಕಿಯೋ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಿದ್ದ ವಿನೇಶ್ ಫೋಗಟ್, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ನಿಲ್ಲಲು ನಿರಾಕರಿಸಿದ್ದರು. ಜೊತೆಗೆ ಬೇರೆ ಭಾರತೀಯ ತಂಡದ ಜೊತೆಗೆ ಅಭ್ಯಾಸ ನಡೆಸಿದ್ದರು. ಅಷ್ಟೇ ಅಲ್ಲ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಭಾರತೀಯ ತಂಡಕ್ಕೆ ಅಧಿಕೃತ ಪ್ರಾಯೋಜಕತ್ವ ನೀಡಿದ್ದ ಶಿವ್‌ ನರೇಶ್ ದಿರಿಸು ಧರಿಸಿರಲಿಲ್ಲ, ಬದಲಿಗೆ ನೈಕ್ ಕಂಪನಿಯ ದಿರಿಸು ಧರಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವಿನೇಶ್‌ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಕೂಡ ಫೋಗಟ್ ಅವರನ್ನು ವಿಚಾರಿಸಲು ಹೇಳಿದೆ ಎಂದು ತಿಳಿದು ಬಂದಿದೆ.

For Quick Alerts
ALLOW NOTIFICATIONS
For Daily Alerts
Story first published: Friday, September 3, 2021, 8:59 [IST]
Other articles published on Sep 3, 2021

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X