ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅತಿ ದೊಡ್ಡ ಭಾರವನ್ನು ಕಳಚಿಟ್ಟಂತ ಭಾಸವಾಗುತ್ತಿದೆ: ಚಿನ್ನ ಗೆದ್ದ ನೀರಜ್ ಚೋಪ್ರಾ ಮಾತು

Winning Gold feels like a huge weight off my mind says Neeraj Chopra

ಟೋಕಿಯೋ, ಆಗಸ್ಟ್ 8: ಶನಿವಾರ ನಡೆದ ಜಾವೆಲಿನ್ ಎಸೆತದ ಫೈನಲ್ ಸ್ಪರ್ಧೆಯಲ್ಲಿ ಅತಿ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು ಬೀಗಿದ್ದಾರೆ ಭಾರತದ ಹೆಮ್ಮೆಯ ಕ್ರೀಡಾಪಟು ನೀರಜ್ ಚೋಪ್ರಾ. ಇಡೀ ದೇಶವೇ ಹೆಮ್ಮೆ ಪಡುವಂತಾ ಸಾಧನೆ ಮಾಡಿದ ನೀರಜ್ ಛೋಪ್ರಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಬಗ್ಗೆ ಭಾನುವಾರ ನೀರಜ್ ಚೋಪ್ರಾ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತನ್ನ ತಲೆಯಲ್ಲಿದ್ದ ಅತಿ ದೊಡ್ಡ ಭಾರವನ್ನು ನಾನು ಕಳಚಿಟ್ಟಂತೆ ಈಗ ಭಾಸವಾಗುತ್ತಿದೆ ಎಂದು ನೀರಜ್ ಚೋಪ್ರಾ ಹೇಳಿಕೊಂಡಿದ್ದಾರೆ.

"ಸಂಜೆ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕಾಗಿ ನಾನು ಮಾನಸಿಕವಾಗಿ ಸಜ್ಜಾಗಿದ್ದೆ. ಇದಕ್ಕಾಗಿ ನಾನು ಸುದೀರ್ಘ ಕಾಲದಿಂದ ಕಾದಿದ್ದೆ. ನಾನು ನಿಜಕ್ಕೂ ತುಂಬಾ ಚೆನ್ನಾಗಿ ಪ್ರದರ್ಶನ ನೀಡಬಲ್ಲೆ ಎಂಬ ಭರವಸೆ ನನಗಿತ್ತು. ಈಗ ನಾನು ಚಿನ್ನವನ್ನು ಗೆದ್ದಿದ್ದೇನೆ. ಇದು ತಲೆಯಲ್ಲಿದ್ದ ದೊಡ್ಡ ಭಾರವನ್ನು ಕಳಚಿಟ್ಟಂತೆ ಭಾಸವಾಗುತ್ತದೆ" ಎಂದು ನೀರಜ್ ಚೋಪ್ರಾ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

"ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ನನ್ನ ತಲೆಯಲ್ಲಿ ಹೆಚ್ಚಿನದ್ದೇನೂ ಓಡುತ್ತಿರಲಿಲ್ಲ. ಈ ಕ್ಷಣಕ್ಕಾಗಿ ನಾನು ತುಂಬಾ ಕಠಿಣ ಪರಿಶ್ರಮವನ್ನು ಪಟ್ಟಿದ್ದೇನೆ ಎಂದು ಯೋಚಿಸುತ್ತಿದ್ದೆ. ನಾನು ಜಾವೆಲಿನ್ ಎಸೆಯಲು ಹೋದಾಗ ನನ್ನ ಸಂಪೂರ್ಣ ಗಮನ ಅದರ ಮೇಲೆಯೇ ಇತ್ತು" ಎಂದು ನೀರಜ್ ಜಾವೆಲಿನ್ ಎಸೆತದ ಸಂದರ್ಭದಲ್ಲಿನ ಕೊನೆಯ ಕ್ಷಣದಲ್ಲಿ ತಮ್ಮ ಮನದಲ್ಲಿ ಏನೆಲ್ಲಾ ಭಾವನೆಗಳು ಹರಿದಾಡುತ್ತಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

2008ರ ಬಳಿಕ ಭಾರತ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದಿದೆ. ಹೀಗಾಗಿ ಸುದೀರ್ಘ ಕಾಲದ ಬಳಿಕ ಭಾರತ ಒಲಿಂಪಿಕ್ಸ್ ಪೋಡಿಯಮ್‌ನಲ್ಲಿ ರಾಷ್ಟ್ರಗೀತೆ ಕೇಳುವಂತಾಗಿತ್ತು. ಈ ಕ್ಷಣದಲ್ಲಿ ಪೋಡಿಯಂ ಮೇಲೆ ನಿಂತು ರಾಷ್ಟ್ರಗೀತೆ ಕೇಳಿದಾಗ ನಿಜಕ್ಕೂ ಒಳಗಿದ್ದ ಭಾವನೆ ಉಕ್ಕಿ ಬಂದಿತ್ತು ಎಂದು ನೀರಜ್ ಛೋಪ್ರ ವಿವರಿಸಿದ್ದಾರೆ. "ಆ ಕ್ಷಣದಲ್ಲಿ ಈ ಹಾದಿಗಾಗಿ ಸವೆಸಿದ ಸಾಕಷ್ಟು ಕ್ಷಣಗಳು ಕಣ್ಣ ಮುಂದೆ ಬಂದಿತ್ತು. ನಾನು ಗಾಯಗೊಂಡಿದ್ದ ಹಲವಾರು ಸಂದರ್ಭಗಳಲ್ಲಿ ನನ್ನ ವೃತ್ತಿ ಜೀವನ ಏನಾಗಲಿದೆ ಎಂಬ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಈಗ ಚಿನ್ನ ಗೆದ್ದ ಬಳಿಕ ಅದ್ಯಾವುದೂ ಸಂಗತಿಯಾಗಲಾರದು. ಈಗ ದೇವರು ಏನೆಲ್ಲಾ ನನಗೆ ನೀಡಿದ್ದಾನೋ ಅದೆಲ್ಲಾ ಒಳ್ಳೆಯದಕ್ಕಾಗಿಯೇ ನಡೆದಿದೆ ಎಂದು ಭಾವಿಸುತ್ತೇನೆ" ಎಂದು ನೀರಜ್ ಚೋಪ್ರಾ ವಿವರಿಸಿದ್ದಾರೆ.

"ಪೋಡಿಯಂನ ಮೇಲೆ ನಿಂತು ರಾಷ್ಟ್ರಗೀತೆಯನ್ನು ಕೇಳುತ್ತಿದ್ದಾಗ ನನಗೆ ರೋಮಾಂಚನವಾಗುತ್ತಿತ್ತು. ಕಣ್ಣೀರು ಬರಲಿಲ್ಲ ನಿಜ, ಆದರೆ ಸಾಕಷ್ಟು ಭಾವನಾತ್ಮಕ ಕ್ಷಣ ಅದಾಗಿತ್ತು" ಎಂದಿದ್ದಾರೆ ನೀರಜ್. ಚಿನ್ನದ ಗೆದ್ದ ಬಳಿಕ ಸಾಕಷ್ಟು ಅಭಿನಂದನೆಗಳನ್ನು ಸ್ವೀಕರಿಸಿದ ನೀರಜ್ ಚೋಪ್ರಾ ಶನಿವಾರ ರಾತ್ರಿ ಹೆಚ್ಚು ಹೊತ್ತು ಮಲಗಲು ಸಾಧ್ಯವಾಗಲಿಲ್ಲವಂತೆ. ಆದರೆ ನಿದ್ರಿಸಿದ್ದ ಎರಡು ಗಂಡೆಗಳ ಕಾಲ ತಲೆದಿಂಬಿನ ಪಕ್ಕದಲ್ಲಿಯೇ ಚಿನ್ನದ ಪದಕವನ್ನಿಟ್ಟುಕೊಂಡು ಮಲಗಿದ್ದಾಗಿಯೂ ನೀರಜ್ ಛೋಪ್ರ ಹೇಳಿದ್ದಾರೆ.

"ಹೌದು ನಿದ್ರಿಸುತ್ತಿದ್ದಾಗಲೂ ಪದಕವನ್ನು ನಾನು ನನ್ನ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೆ. ನಾನು ಹೆಚ್ಚು ಮಲಗಿರಲಿಲ್ಲ. ಬಹುಶಃ ಒಂದು ಎರಡು ಗಂಟೆಗಳ ಕಾಲ ನಿದ್ರಿಸಿರಬಹುದು. ಆದರೆ ನಾನಿನ್ನೂ ಕೂಡ ಅದರಲ್ಲಿಯೇ ಮುಳುಗುತ್ತಿರುವಂತೆ ಅನಿಸುತ್ತಿದೆ. ದೇಶಕ್ಕಾಗಿ ಏನಾದರೂ ಮಾಡಲು ನನ್ನಿಂದ ಸಾಧ್ಯವಾಗಿದೆ. ಅದು ಸುದೀರ್ಘ ಕಾಲ ನೆನಪಿಸನಲ್ಲಿ ಉಳಿಯುತ್ತದೆ" ಎಂದು ನೀರಜ್ ಚೋಪ್ರಾ ತಮ್ಮ ಚಿನ್ನದ ಪದಕವನ್ನು ಗೆದ್ದ ಸಂರ್ಭರಮದ ಬಗ್ಗೆ ಮಾತುಗಳನ್ನು ಆಡಿದ್ದಾರೆ.

ಜಾವೆಲಿನ್ ಎಸೆತದಲ್ಲಿ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದ ಜರ್ಮನಿಯ ಜೋಹಾನ್ಸ್ ವೆಟ್ಟರ್ ಅವರಂತಾ ಕಠಿಣ ಸ್ಪರ್ಧಿಗಳ ಮಧ್ಯೆಯೂ ನೀರಜ್ ಛೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ. 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆಥ್ಲಿಟ್ ಓರ್ವ ಫೀಲ್ಡ್ ಮತ್ತು ಟ್ರ್ಯಾಕ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಂತಾಗಿದೆ. ವೈಯಕ್ತಿಕ ವಿಭಾಗದಲ್ಲಿ ಒಟ್ಟಾರೆಯಾಗಿ ಕೇವಲ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ 2008ರಲ್ಲಿ ಅಭಿನವ್ ಬಿಂದ್ರಾ ಈ ಸಾಧನೆಯನ್ನು ಮೊಟ್ಟಮೊದಲ ಬಾರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

Story first published: Sunday, August 8, 2021, 22:00 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X