ಕಪಾಸ್ ಸೇರಿ 9 ಮಂದಿ ಈಜು ಪಟುಗಳಿಗೆ ಕೊರೊನಾವೈರಸ್ ಸೋಂಕು!

ಬುಡಾಪೆಸ್ಟ್, ಏಪ್ರಿಲ್ 1: ಬಟರ್‌ಫ್ಲೈ ವಿಶ್ವಚಾಂಪಿಯನ್ ಬೊಗ್ಲಾರ್ಕಾ ಕಪಾಸ್ ಸೇರಿ ಒಟ್ಟು 9 ಮಂದಿ ಹಂಗೇರಿಯನ್ ಈಜುಪಟುಗಳಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಹಂಗೇರಿಯನ್ ರಾಷ್ಟ್ರೀಯ ತಂಡದಲ್ಲಿರುವ ಈ ಸ್ಪರ್ಧಿಗಳನ್ನು ಪರೀಕ್ಷೆಗೊಳಪಡಿಸಿದಾಗ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ.
ಹಂಗೇರಿಯನ್ 9 ಈಜುಪಟುಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದನ್ನು ಆ ದೇಶದ ಸ್ವಿಮ್ಮಿಂಗ್ ಅಸೋಸಿಯೇಶನ್ ಮಂಗಳವಾರ (ಮಾರ್ಚ್ 31) ಖಾತರಿಪಡಿಸಿದೆ. 2017ರಲ್ಲಿ ನಡೆದಿದ್ದ ವಿಶ್ವ ಮಟ್ಟದ ಸ್ಪರ್ಧೆಯ 4X100 ಫ್ರೀ ಸ್ಟೈಲ್‌ನಲ್ಲಿ ಕಂಚು ಜಯಿಸಿದ್ದ ಡೊಮಿನಿಕ್ ಕೊಜ್ಮಾ ಕೂಡ ಸೋಂಕಿಗೀಡಾಗಿದ್ದಾರೆ.
ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿರುವ ಮಾರಕ ಕೋವಿಡ್-19 ಸೋಂಕಿನಿಂದಾಗಿ ಜಗತ್ತಿನಲ್ಲಿ ಬಹುತೇಕ ಎಲ್ಲಾ ಕ್ರೀಡಾಕೂಟಗಳೂ ರದ್ದಾಗಿವೆ ಇಲ್ಲವೆ ಮುಂದೂಡಲ್ಪಟ್ಟಿವೆ. ಒಂದು ಬಾರಿಯೂ ಮುಂದೂಡಿದ ಇತಿಹಾಸವಿಲ್ಲದ ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಈ ಬಾರಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
'ನಾವು ರಾಷ್ಟ್ರೀಯ ತಂಡದಲ್ಲಿರುವ ಎಲ್ಲಾ ಈಜುಪಟುಗಳನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಈಜುಪಟುಗಳ ಜೊತೆ ಕೆಲಸ ಮಾಡುವ ಸಿಬ್ಬಂದಿಗಳನ್ನು, ತರಬೇತುದಾರರನ್ನೂ ಪರೀಕ್ಷೆಗೆ ಒಳಪಡಿಸಿದ್ದೇವೆ,' ಎಂದು ಹಂಗೇರಿಯನ್ ಸ್ವಿಮ್ಮಿಂಗ್ ಅಸೋಸಿಯೇಶ್ ಹೇಳಿಕೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications