ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಸ್ಲರ್ಸ್ ಭಜರಂಗ್ ಪೂನಿಯಾ-ಸಂಗೀತಾ

ಚಂಡೀಗಢ: ಭಾರತದ ಸ್ಟಾರ್ ರಸ್ಲರ್ ಭಜರಂಗ್ ಪೂನಿಯಾ ಮತ್ತು ಸಂಗೀತಾ ಫೋಗಟ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹರ್ಯಾಣದ ಬಲಾಲಿ ಗ್ರಾಮದಲ್ಲಿ ಭಜರಂಗ್-ಸಂಗೀತ ಮದುವೆ ಬುಧವಾರ (ನವೆಂಬರ್ 25) ನೆರವೇರಿದೆ.

ನಾಪೋಲಿ ಸ್ಟೇಡಿಯಂಗೆ ದಂತಕತೆ ಡಿಯಾಗೋ ಮರಡೋನಾ ಹೆಸರು

'ಇವತ್ತು ನಾನು ನನ್ನ ಬದುಕಿನ ಜೊತೆಗಾತಿಯನ್ನು ಆರಿಸಿದ್ದೇನೆ. ನಾನು ಮತ್ತೊಂದು ಕುಟುಂಬವನ್ನು ನನ್ನದಾಗಿಸಿಕೊಂಡಿದ್ದೇನೆ ಎಂದು ನನಗನ್ನಿಸುತ್ತಿದೆ. ನನ್ನ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ನಾನು ಖುಷಿಯಾಗಿದ್ದೇನೆ. ಹೊಸ ಪ್ರಯಾಣದತ್ತ ಮುನ್ನಡೆಯಲು ಉತ್ಸುಕನಾಗಿದ್ದೇನೆ. ನಿಮ್ಮ ಪ್ರೀತಿ-ಹಾರೈಕೆಗಳಿಗೆ ಧನ್ಯವಾದಗಳು,' ಎಂದು ಭಜರಂಗ್ ಪೂನಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ವರ್ಷ ಟೋಕಿಯೋದಲ್ಲಿ ನಡೆಯಲಿದ್ದ ಒಲಿಂಪಿಕ್ಸ್ ಬಳಿಕ ಜಂಟಿ ಜೀವನಕ್ಕೆ ಕಾಲಿರಿಸಲು ಇಬ್ಬರೂ ಆರಂಭದಲ್ಲಿ ನಿರ್ಧರಿಸಿದ್ದರು. ಆದರೆ ಕೊರೊನಾವೈರಸ್ ಕಾರಣ ಪ್ರತಿಷ್ಠಿತ ಗೇಮ್ಸ್ ಮುಂದೂಡಲ್ಪಟ್ಟಿದೆ. ಹೀಗಾಗಿ 2020ರ ಅಂತ್ಯಕ್ಕೂ ಮುನ್ನ ಬಜರಂಗ್-ಸಂಗೀತಾ ಸತಿ-ಪತಿಯಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

ಕ್ರೀಡಾ ತಾರೆಯರು ಮತ್ತು ರಾಜಕಾರಣಿಗಳು ಸೇರಿ ಸುಮಾರು 200 ಪ್ರಮುಖರಿಗೆ ಔತಣಕೂಟಕ್ಕೆ ಯೋಜನೆ ಹಾಕಿಕೊಂಡಿದ್ದರು ಎಂದು ವರದಿಯೊಂದು ಹೇಳಿದೆ. 26ರ ಹರೆಯದ ಪೂನಿಯಾ ಮತ್ತು 22ರ ಹರೆಯದ ಸಂಗೀತಾ ಸೋನೇಪತ್‌ನಲ್ಲಿ ನಡೆದಿದ್ದ ಟ್ರೇನಿಂಗ್ ಕ್ಯಾಂಪ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 26, 2020, 23:18 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X