ಪ್ರೇಯಸಿಯನ್ನು ವರಿಸಿದ WWE ದಿಗ್ಗಜ, ಹಾಲಿವುಡ್ ನಟ ಜಾನ್‌ ಸೀನ

WWE star John Cena marries long-time girlfriend Shay Shariatzadeh
Photo Credit:

ಡಬ್ಲ್ಯುಡಬ್ಲ್ಯುಇ ಕ್ಷೇತ್ರದ ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತನಾಗಿ ಈಗ ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಜಾನ್ ಸೀನ ತಮ್ಮ ಪ್ರೇಯಸಿಯ ಜೊತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ಜಾನ್‌ಸೀನಾ ಪ್ಲೋರಿಡಾದಲ್ಲಿ ಈ ಜೋಡಿ ಗೌಪ್ಯವಾಗಿ ಮದುವೆಯಾಗಿದ್ದು ಈ ವಿಚಾರವನ್ನು ಅವರು ಬಹಿರಂಗಗೊಳಿಸಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ಅಧಿಕೃತ ದಾಖಲೆಗಳೊಂದಿಗೆ ಈ ಸುದ್ದಿಯನ್ನು ಖಚಿತಪಡಿಸಿದೆ.

ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ನಂತರ ಕಳೆದ 2019ರ ಆರಂಭದಲ್ಲಿ ಶೇ ಶೆರಿಯಾತ್ಜಾದೆ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಜಾನ್‌ಸೀನಾ ಹಾಗೂ ಶೇ ಶೆರಿಯಾತ್ಜಾದೆ ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಹಾಗೂ ಫ್ಲೋರಿಡಾದಲ್ಲಿ ವಿವಾಹ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದರು ಎಂದು ವರದಿಯಾಗಿದೆ.

WWE ತಾರೆ ಡ್ವೇಯ್ನ್ ದಿ ರಾಕ್ ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್

ಇರಾನ್‌ನಲ್ಲಿ ಜನಿಸಿರುವ ಶೇ ಶೆರಿಯಾತ್ಜಾದೆ ಕೆನಡಾದ ನಾಗರೀಕರಾಗಿದ್ದಾರೆ. 31ರ ಹರೆಯದ ಶೇ ಬ್ರಿಟೀಷ್ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ವ್ಯಾಂಕೋವರ್‌ನಲ್ಲಿ ಟೆಕ್ ಕಂಪನಿಯೊಂದರ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದಕ್ಕೂ ಮುನ್ನ ಜಾನ್‌ಸೀನಾ ರೆಸ್ಲರ್ ನಿಕ್ಕಿ ಬೆಲ್ಲಾ ಜೊತೆಗೆ ಪ್ರೀತಿಯಲ್ಲಿದ್ದರು. ರೆಸ್ಲಿಂಗ್ ರಿಂಗ್‌ನಲ್ಲೇ ನಿಕ್ಕಿ ಬೆಲ್ಲಾಗೆ ಪ್ರೇಮ ನಿವೇದನೆ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. 75 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಜಾನ್ ಸೀನಾ ಮಂಡಿಯೂರಿ ಪ್ರೀತಿಯನ್ನು ನಿವೇದಿಸಿಕೊಂಡು ಒಪ್ಪಿಗೆ ಪಡೆದುಕೊಂಡಿದ್ದರು. ಆದರೆ ಕೆಲವೇ ಸಮಯಗಳ ಬಳಿಕ 2018ರಲ್ಲಿ ಈ ಜೋಡಿ ಬೇರೆಯಾಗಿತ್ತು.

ಜಾನ್‌ಸೀನಾ ಅದಕ್ಕು ಮೊದಲು 2009ರಲ್ಲಿ ಎಲಿಜಬೆತ್ ಹುಬರ್ಡ ಜೊತೆಗೆ ವಿವಾಹವಾಗಿದ್ದರು. 2012ರ ವರೆಗೆ ಎಜಿಜಬೆತ್ ಜೊತೆಗೆ ಸಂಸಾತ ನಡೆಸಿದ್ದ ಜಾನ್ ಸೀನ ಬಳಿಕ ವಿಚ್ಛೇದನವನ್ನು ಪಡೆದು ಬೇರೆಯಾಗಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, October 15, 2020, 14:11 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X