ಗೋಲ್ಡ್ ಬರ್ಗ್ ಮುಂದೆ 5 ನಿಮಿಷವೂ ನಿಲ್ಲಲಿಲ್ಲ ಬ್ರಾಕ್ ಲೆಸ್ನರ್

Posted By:

ಟೊರೊಂಟೊ, ನವೆಂಬರ್, 21: ಬರೊಬ್ಬರಿ 12 ವರ್ಷಗಳ ಬಳಿಕ ಅಖಾಡಕ್ಕೆ ಇಳಿದಿದ್ದ ಗೋಲ್ಡ್ ಬರ್ಗ್ ಇಡೀ ಡಬ್ಲ್ಯೂಡಬ್ಲ್ಯೂಇ ಅಭಿಮಾನಿಗಳಿಗೆ ಶಾಕ್ ನೀಡುವಂತಹ ಆಟ ಪ್ರದರ್ಶಿಸಿದರು.

ಇಲ್ಲಿ ನಡೆದ 2016ನೇ ಡಬ್ಲ್ಯೂಡಬ್ಲ್ಯೂಇ ಸರ್ವೈವರ್ ಸಿರೀಸ್ ಪಂದ್ಯದಲ್ಲಿ ದೈತ್ಯ ಬ್ಲಾಕ್ ಲೆಸ್ನರ್ ಮತ್ತು ಲೆಜೆಂಡ್ ಗೋಲ್ಡ್ ಬರ್ಗ್ ನಡುವೆ ವಿಶೇಷ ಕಾಳಗವನ್ನು ಏರ್ಪಡಿಸಲಾಗಿತ್ತು.

ಆರಂಭದಿಂದಲೂ ಅಧ್ಭುತ ಆಟ ಪ್ರದರ್ಶಿಸಿದ ಗೋಲ್ಡ್ ಬರ್ಗ್, ಬ್ಲಕ್ ಲೆಸ್ನರ್ ಮೇಲೆ ಮೇಲುಗೈ ಸಾಧಿಸುತ್ತಾ ಬಂದರು. ಬ್ಲಾಕ್ ಲೆಸ್ನರ್ ಎಲ್ಲೂ ಪ್ರತಿರೋಧ ತೋರಲು ಗೋಲ್ಡ್ ಬರ್ಗ್ ಅವಕಾಶವೇ ನೀಡಲಿಲ್ಲ.

ಕೇವಲ ಎರಡು 'ಸ್ಪಿಯರ್' ಮತ್ತು ಒಂದು 'ಜ್ಯಾಕ್ ಹಾಮರ್' ಹಾಕಿ ಕೇವಲ 5 ನಿಮಿಷದಲ್ಲಿ ಬ್ಲಾಕ್ ಲೆಸ್ನರ್ ನನ್ನು ಹೊಡೆದು ಬೀಳಿಸಿದರು.

49ರ ವಯಸ್ಸಿನಲ್ಲೂ ಯುವಕರು ನಾಚುವಂತೆ ದೇಹವನ್ನು ದಷ್ಟಪುಷ್ಟವಾಗಿ ಇಟ್ಟುಕೊಂಡಿರುವ ಗೋಲ್ಡ್ ಬರ್ಗ್ ತನ್ನ ಅದೇ ಹಳೆ ದಣಿವರಿಯದ ಆಟ ಪ್ರದರ್ಶಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು.

ಬ್ಲಾಕ್ ಲೆಸ್ನರ್ ಅವರೇ ಗೆಲುವು ಸಾಧಿಸುತ್ತಾರೆ ಎಂದು ಭಾವಿಸಲಾಗಿತ್ತು. ಹಲವರು ಇದು ತೀವ್ರ ಪೈಪೋಟಿ ಪಂದ್ಯವಾಗಬಹುದು ಎಂದು ಯೋಚಿಸಿದ್ದರು. ಆದರೆ ಗೋಲ್ಡ್ ಬರ್ಗ್ ಮಾತ್ರ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವಂತೆ ಕೇವಲ 5 ನಿಮಿಷಕ್ಕೆ ಆಟ ಮುಗಿಸಿಬಿಟ್ಟರು.

ಆಟದ ಕೆಲವು ಚಿತ್ರಗಳು ಇಲ್ಲಿವೆ

ಮದಗಜಗಳ ಮುಖಾಮುಖಿ

ಮದಗಜಗಳ ಮುಖಾಮುಖಿ

ಆಟಕ್ಕೂ ಮುನ್ನ ಸಮರಕ್ಕೆ ಸಿದ್ಧ ಎನ್ನುವಂತೆ ಮುಖಾ ಮುಖಿಯಾದ ಗೋಲ್ಡ್ ಬರ್ಗ್ ಮತ್ತು ಬ್ಲಾಕ್ ಲೆಸ್ನರ್

ಒಂದೇ ಏಟಿಗೆ ಗೆಲುವು

ಒಂದೇ ಏಟಿಗೆ ಗೆಲುವು

ಜ್ಯಾಕ್ ಹ್ಯಾಮರ್ ಪಟ್ಟು ಬಿಗಿದು ಬ್ಲಾಕ್ ಲೆಸ್ನರ್ ರನ್ನು ಎತ್ತಿ ಕೆಳಗೆ ಹಾಕಿ ಗೆಲುವು ಸಾಧಿಸಿದ ಗೋಲ್ಡ್ ಬರ್ಗ್

ಪ್ರೇಕ್ಷಕರ ನಿನಾದ

ಪ್ರೇಕ್ಷಕರ ನಿನಾದ

ಬ್ಲಾಕ್ ಲೆಸ್ನರ್ ನನ್ನು ಹೊಡೆದುರುಳಿಸಿ ಪ್ರೇಕ್ಷಕರ ನಿನಾದಗಳನ್ನು ಕೇಳುತ್ತಿರುವ ಗೋಲ್ಡ್ ಬರ್ಗ್

ಸಂಭ್ರಮದ ಕೂಗು

ಸಂಭ್ರಮದ ಕೂಗು

ಗೆದ್ದ ಬಳಿಕ ಸಂಭ್ರಮ ವ್ಯಕ್ತಪಡಿಸಿದ ಗೋಲ್ಡ್ ಬರ್ಗ್

ಗೆಲುವಿನ ಗಾಂಭಿರ್ಯ

ಗೆಲುವಿನ ಗಾಂಭಿರ್ಯ

ಪ್ರೇಕ್ಷಕರ ಅಭಿಮಾನದ ಘೋಷಣೆಗಳ ನಡುವೆ ಗೆದ್ದು ಅಖಾಡದಿಂದ ಹೊರ ನಡೆಯುತ್ತಿರುವ ಗೋಲ್ಡ್ ಬರ್ಗ್

Story first published: Monday, November 21, 2016, 13:14 [IST]
Other articles published on Nov 21, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ