"ಟೆನಿಸ್ ಇನ್ನು ಹಿಂದಿನಂತಿರದು": ರೋಜರ್ ಫೆಡರರ್ ನಿವೃತ್ತಿಗೆ ಅಭಿಮಾನಿಗಳ ಭಾವುಕ ಪ್ರತಿಕ್ರಿಯೆ

ದಿಗ್ಗಜ ಟೆನಿಸ್ ಆಟಗಾರ ರೋಜರ್ ಫೆಡರರ್ ಲೇವರ್ ಕಪ್ ಟೂರ್ನಿಯ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ದಿಗ್ಗಜ ಆಟಗಾರನ ಈ ಘೋಷಣೆ ಅಭಿಮಾನಿಗಳಿಗೆ ಆಘಾತ ನೀಡಿದೆ. ತಮ್ಮ ನೆಚ್ಚಿನ ಟೆನಿಸ್ ಆಟಗಾರನ ನಿವೃತ್ತಿಯ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸೆಪ್ಟೆಂಬರ್ 23ರಿಂದ ಆರಂಭವಾಗಲಿರುವ ಲೇವರ್ ಕಪ್ ರೋಜರ್ ಫೆಡಡರ್ ಅವರ ಅಂತಿಮ ಎಟಿಪಿ ಇವೆಂಟ್ ಆಗಿರಲಿದೆ.

ಸಾಮಾಜಿಕ ಜಾಲತಾಣದಲ್ಲಿ ರೋಜರ್ ಫೆಡರರ್ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದು ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆಡಿಯೋ ಸಂದೇಶವನ್ನು ಕೂಡ ಫೆಡರರ್ ಹಂಚಿಕೊಂಡಿದ್ದು ಟೆನಿಸ್‌ನಲ್ಲಿ ತಮ್ಮ ಏಳು ಬೀಳುಗಳಲ್ಲಿ ಜೊತೆಯಾದವರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ಭಾವನಾತ್ಮಕ ಪ್ರತಿಕ್ರಿಯೆ ನೀಡಿದ ಅಭಿಮಾನಿಗಳು

ರೋಜರ್ ಫೆಡರರ್ ಟೆನಿಸ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿರುವಕ್ಕೆ ಟೆನಿಸ್ ಅಭಿಮಾನಿಗಳು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಟೆನಿಸ್ ದಂತಕತೆಗೆ ನಿವೃತ್ತಿಯ ಶುಭಾಶಯ ತಿಳಿಸಿದ್ದು ಟೆನಿಸ್ ಇನ್ನು ಮುಂದೆ ಈ ಹಿಂದಿನಂತೆ ಇರುವುದಿಲ್ಲ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

20 ಗ್ರ್ಯಾನ್‌ಸ್ಲ್ಯಾಮ್ ವಿಜೇತ

2003ರ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಬೇಟೆ ಆರಂಭಿಸಿದ ಫೆಡರರ್ ನಂತರ ಟೆನಿಸ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಲು ಆರಂಭಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ ಸ್ವಿಜರ್ಲ್ಯಾಂಡ್‌ನ ಈ ದಿಗ್ಗಜ ಟೆನಿಸ್ ಆಟಗಾರ.
ಅಲ್ಲದೆ ಪುರುಷರ ಸಿಂಗಲ್ಸ್‌ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ ಫೆಡರರ್.

ಸೆರೆನಾ ನಿವೃತ್ತಿ ಬಳಿಕ ಟೆನಿಸ್ ಅಭಿಮಾನಿಗಳಿಗೆ ಮತ್ತೊಂದು ಆಘಾತ

ಸೆರೆನಾ ನಿವೃತ್ತಿ ಬಳಿಕ ಟೆನಿಸ್ ಅಭಿಮಾನಿಗಳಿಗೆ ಮತ್ತೊಂದು ಆಘಾತ

ಕಳೆದ ವರ್ಷ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಫೆಡರರ್ ನಂತರ ಮೊಣಕಾಲಿನ ಗಾಯದಿಂದ ಕಣಕ್ಕಿಳಿದಿರಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಬಳಿಕ ಯಾವುದೇ ಸ್ಪರ್ಧೆಯಲ್ಲೂ ಫೆಡರರ್ ಕಾಣಿಸಿಕೊಂಡಿರಲಿಲ್ಲ. ಇನ್ನು ಇತ್ತೀಚೆಗಷ್ಟೇ ಮಹಿಳಾ ಟೆನಿಸ್ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್‌ಗೆ ವಿದಾಯ ಹೇಳಿದ್ದರು. ಇದೀಗ ಫೆಡರರ್ ಕೂಡ ನಿವೃತ್ತಿಯ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 15, 2022, 21:03 [IST]
Other articles published on Sep 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X